ಮಕ್ಕಳಲ್ಲಿ ವೈಜ್ಞಾನಿಕತೆ ಮೂಡಿಸಿ  -ಬಿಇಒ ಶೇರ್ ಅಲಿ ಹೇಳಿಕೆ -ಬಿಜೆಎಂ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ 

blank

ದಾವಣಗೆರೆ: ಅರ್ಥಹೀನ ಆಚರಣೆಗಳನ್ನು ಹೋಗಲಾಡಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಕೆಲಸ ಆಗಬೇಕಿದೆ ಎಂದು ದಾವಣಗೆರೆ ಉತ್ತರ ವಲಯದ ಬಿಇಒ ಎಚ್.ಆರ್.ಶೇರ್ ಅಲಿ ಹೇಳಿದರು.
ಕೊಂಡಜ್ಜಿ ರಸ್ತೆಯಲ್ಲಿನ ಬಿಜೆಎಂ ಮತ್ತು ಜಿಎಂಬಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಾ-ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಆಚರಣೆಯ ಹಿಂದೆಯೂ ನಂಬಿಕೆ, ಅಪನಂಬಿಕೆ, ಮೌಢ್ಯಗಳೂ ಇರುತ್ತವೆ. ಇದರಲ್ಲಿ ವೈಜ್ಞಾನಿಕತೆಗೆ ಪೂರಕವಾದ ಆಚರಣೆಗೆ ಗಮನ ನೀಡುವಂತೆ ವಿಜ್ಞಾನ ಬೋಧನೆ ಮಾಡಬೇಕಿದೆ ಎಂದು ಹೇಳಿದರು.
ವಿಜ್ಞಾನದ ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ನಾವು ಜ್ಞಾನವಂತರಾಗಲಿದ್ದೇವೆ. ಮನುಷ್ಯ ಚೆನ್ನಾಗಿದ್ದರೆ ಇಡೀ ಪ್ರಪಂಚವೇ ಉತ್ತಮವಾಗಿರಲು ಸಾಧ್ಯವಿದೆ ಎಂದ ಅವರು ಶಾಲೆಯ ಮಕ್ಕಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕೆಂದು ಹಾರೈಸಿದರು.
ಕರ್ನಾಟಕ ವಿಜ್ಞಾನ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಮಾತನಾಡಿ, ಈ ವಿಜ್ಞಾನ ವಸ್ತುಪ್ರದರ್ಶನ ಇಡೀ ವರ್ಷದ ಶಾಲೆಯ ಮಕಳು ಮತ್ತು ಶಿಕ್ಷಕರ ಬದ್ಧತೆಯನ್ನು ತೋರಿಸುತ್ತದೆ. ಇಂತಹ ವಸ್ತುಪ್ರದರ್ಶನದಲ್ಲಿ ಮಕ್ಕಳು ಆಸಕ್ತಿ ಮತ್ತು ಕುತೂಹಲದಿಂದ ಪಾಲ್ಗೊಳ್ಳುತ್ತಾರೆ. ಆಗ ಅವರು ಕನಿಷ್ಠ ಮಟ್ಟದಿಂದ ಗರಿಷ್ಠ ಹಂತಕ್ಕೆ ಏರಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಶಾಲೆ ಕಾರ್ಯದರ್ಶಿ ಮಂಜುನಾಥ ಅಗಡಿ ಪ್ರಾಸ್ತಾವಿಕ ಮಾತನಾಡಿ, ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ಎಲ್ಲ ವಿಷಯ ಮತ್ತು ಭಾಷಾಧಾರಿತ ವಸ್ತು ಪ್ರದರ್ಶನ ಇದಾಗಿದೆ. ಶಿಕ್ಷಣ ಬರೀ ಪುಸ್ತಕದ ಓದಿಗೆ ಸೀಮಿತವಾಗದೆ ಮಕ್ಕಳ ಮುಂದಿನ ಸಾಧನೆಗೆ ಶೈಕ್ಷಣಿಕ ಚಟುವಟಿಕೆಗಳು ಬೇಕು ಎಂದರು.
ವಿಘ್ನೇಶ್ವರ ಶಾಲೆ ಕಾರ್ಯದರ್ಶಿ ಡಿ.ಎಸ್.ಪಂಚಾಕ್ಷರಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸೈಫುಲ್ಲಾ, ಶಿಕ್ಷಕಿ ಗೀತಾಂಜಲಿ ಇತರರು ಇದ್ದರು. ಸಹಶಿಕ್ಷಕಿ ಎಂ.ಮಮತಾ ವಂದಿಸಿದರು. ವಿದ್ಯಾರ್ಥಿನಿ ನಾಜಿಯಾ ಕಾರ್ಯಕ್ರಮ ನಿರೂಪಿಸಿದರು. ಮಾನಸಾ ವಂದಿಸಿದರು.

Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…