ಕಂಪ್ಲಿ: ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬೇಕೆಂದು ಕುರುಗೋಡು ಬಿಇಒ ಟಿ.ಎಂ.ಸಿದ್ಧಲಿಂಗಮೂರ್ತಿ ಹೇಳಿದರು.
ಹಂಪಾದೇವನಹಳ್ಳಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ದೇವಸಮುದ್ರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಮಂಗಳವಾರ ಮಾತನಾಡಿದರು. ಮಕ್ಕಳಲ್ಲಿ ಪ್ರಶ್ನೆ ಮಾಡುವ, ಹೊಸತನ್ನು ರೂಪಿಸುವ, ಪ್ರತಿಯೊಂದರ ಕಾರ್ಯಚಟುವಟಿಕೆಗಳನ್ನು ಅರಿತುಕೊಳ್ಳುವ ಕೌಶಲವನ್ನು ವೃದ್ಧಿಸಬೇಕಿದೆ ಎಂದರು. ಸಿಆರ್‌ಪಿ ಎಸ್.ಈರೇಶ ಮಾತನಾಡಿ, ಶಿಕ್ಷಣ ಕಂಠಪಾಠ ಹಾಗೂ ಅಂಕಗಳಿಕೆಗೆ ಸೀಮಿತವಾಗಬಾರದು ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಹುಲುಗಪ್ಪ ಕಲಿಕಾಹಬ್ಬಕ್ಕೆ ಚಾಲನೆ ನೀಡಿದರು. ಮುಖ್ಯಶಿಕ್ಷಕ ಜಿ.ವೀರೇಶ್, ಪ್ರಮುಖರಾದ ಎ.ಹುಲುಗಪ್ಪ, ಇಟಗಿ ಬಸಪ್ಪ, ರಾಮಣ್ಣ, ಜಡೆಪ್ಪ, ಶಿಕ್ಷಕರಾದ ಎಚ್.ದೊಡ್ಡಬಸಪ್ಪ, ಹನುಮಂತಪ್ಪ, ಎಂ.ಎ.ನಾಗನಗೌಡ, ಎಚ್.ಪಿ.ಸೋಮಶೇಖರ, ಸುನಿತಾ ಪೂಜಾರಿ, ಜೋಗಿನಾಯ್ಕ ರುದ್ರಪ್ಪ, ಮಂಜುನಾಥ, ಇಸಿಒ ಎಂ.ರೇವಣ್ಣ, ಸಿಆರ್‌ಪಿ ಚಂದ್ರಯ್ಯ ಸೊಪ್ಪಿಮಠ, ರೇಣುಕಾರಾಧ್ಯ, ಭೂಮೇಶ್ವರ ಇತರರಿದ್ದರು.