More

  ಮಕ್ಕಳಲ್ಲಿ ಪೌರಪ್ರಜ್ಞೆ ಅತ್ಯವಶ್ಯ

  ಕ್ಷೇತ್ರ, ಶಿಕ್ಷಣಾಧಿಕಾರಿ, ಆಂಜನೇಯ, ಅಭಿಮತ, ಪಬ್ಲಿಕ್, ಶಾಲೆಯಲ್ಲಿ, ಬ್ಯಾಗ್, ರಹಿತ, ದಿನ, field, educationist, anjaneya, abhimat, public, at school, bag, rahit, day,
  ವಿಜಯಪುರ: ಮಕ್ಕಳಲ್ಲಿ ಧನಾತ್ಮಕ ಬದಲಾವಣೆ ತರುವ ಮೂಲಕ ಅವರಲ್ಲಿ ಪೌರ ಪ್ರಜ್ಞೆ ಬೆಳೆಸಲು ‘ಸಂಭ್ರಮ ಶನಿವಾರ-ಬ್ಯಾಗ್ ರಹಿತ ದಿನ’ ದಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ. ಆಂಜನೇಯ ಹೇಳಿದರು.

  ಶನಿವಾರ, ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಸಂಭ್ರಮ ಶನಿವಾರ-ಬ್ಯಾಗ್ ರಹಿತ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ವಿವರಿಸಿ, ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು.

  ಉಪಪ್ರಾಚಾರ್ಯ ರಾಘವೇಂದ್ರ ಪುರೋಹಿತ ಮಾತನಾಡಿ, ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಇದರಿಂದ ಮಕ್ಕಳಲ್ಲಿ ಸೃಜನಶೀಲತೆ ವೃದ್ಧಿಸುತ್ತದಲ್ಲದೆ, ಕಲಿಕೆಯಲ್ಲೂ ಉತ್ಸಾಹ ಬೆಳೆಯುತ್ತದೆ ಎಂದರು. ವಿಜ್ಞಾನ ಶಿಕ್ಷಕಿ ಸೀಮಾ ವೈದ್ಯ ಆರೋಗ್ಯ, ಆಹಾರ ಪದ್ಧತಿ, ವ್ಯಾಯಾಮ, ಯೋಗದ ಉಪಯುಕ್ತತೆಯ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.

  ಶಿಕ್ಷಣ ಸಂಯೋಜಕರಾದ ರವೀಂದ್ರ ಚಿಕ್ಕಮಠ, ಪ್ರಭು ಬಿರಾದಾರ, ಸಿಆರ್‌ಪಿ ಎಸ್.ಎಸ್. ಕಾಂಬಳೆ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಪ್ರಭಾರಿ ವಿಜಯಲಕ್ಷ್ಮಿ ನಾಯಕ ಸ್ವಾಗತಿಸಿದರು. ಶಿಕ್ಷಕ ಎಂ.ಬಿ. ಪಾಟೀಲ ನಿರೂಪಿಸಿದರು.

  ಕೈ ಬೀಸಿಕೊಂಡು ಬಂದ ಮಕ್ಕಳು
  ಶಿಕ್ಷಣ ಇಲಾಖೆಯ ಆದೇಶದಂತೆ ಪ್ರತಿ ತಿಂಗಳ ಮೂರನೇ ಶನಿವಾರ ‘ಸಂಭ್ರಮ ಶನಿವಾರ-ಬ್ಯಾಗ್ ರಹಿತ ದಿನ’ವನ್ನು ಆಚರಿಸಲು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕೈ ಬೀಸಿಕೊಂಡು ಶಾಲೆಗೆ ಖುಷಿಯಿಂದ ಆಗಮಿಸಿ, ಅರ್ಥಪೂರ್ಣವಾಗಿ ಕಾರ್ಯಕ್ರಮ ಆಸ್ವಾದಿಸಿದರು. 1 ರಿಂದ 3ನೇ ತರಗತಿಯ ಮಕ್ಕಳು ವಿವಿಧ ವೇಷ-ಭೂಷ ತೊಟ್ಟು, ತಮ್ಮ ತೊದಲ ನುಡಿಯಲ್ಲಿಯೇ ಆರೋಗ್ಯದ ಅರಿವು ಮೂಡಿಸುವ ನೃತ್ಯ, ಹಣ್ಣಿನ ಮಹತ್ವ ತಿಳಿಸುವ ಹಾಡನ್ನು ಪ್ರಚುರ ಪಡಿಸಿದರು. 4 ಮತ್ತು 6ನೇ ತರಗತಿ ಮಕ್ಕಳು ಸಮಗ್ರವಾಗಿ ಚಾರ್ಟ್ ಪ್ರದರ್ಶಿಸಿ, ಅವಲೋಕನ ಮಾಡಿದರು. 6 ರಿಂದ 8ನೇ ತರಗತಿ ಮಕ್ಕಳು ತಮ್ಮ ನಟನೆ ಕೌಶಲ್ಯವನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿ ಬೇಷ್ ಎನಿಸಿಕೊಂಡರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts