ಮಕ್ಕಳನ್ನು ಕೆಲಸಕ್ಕೆ ತೊಡಗಿಸಿದರೆ ಶಿಕ್ಷೆ

ಶಿರಹಟ್ಟಿ:14 ವಯಸ್ಸಿನ ಒಳಗಿನ ಮಕ್ಕಳನ್ನು ಯಾವುದೇ ಶ್ರಮಿಕ ಕೆಲಸದಲ್ಲಿ ತೊಡಗಿಸಿದರೆ ಘೊರ ಅಪರಾಧವೆಸಗಿದಂತೆ. ಇದಕ್ಕೆ ಕಾರಣರಾದವರು ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗುತ್ತಾರೆ ಎಂದು ಪಟ್ಟಣದ ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್. ಒಡೆಯರ್ ಹೇಳಿದರು.

ಕಾನೂನು ಸೇವಾ ಸಮಿತಿ, ವಕೀಲರ ಸಂಘ ಲಕ್ಷೆ್ಮೕಶ್ವರ, ಪಪಂ, ಶಿಶು ಅಭಿವೃದ್ಧಿ, ಕಾರ್ವಿುಕ, ಶಿಕ್ಷಣ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಪಟ್ಟಣದ ಫಕೀರೇಶ್ವರ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ವಿುಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಮಕ್ಕಳು ಜೀವನೋಪಾಯಕ್ಕಾಗಿ ಕೆಲಸಗಳಲ್ಲಿ ತೊಡಗುವುದರಿಂದ ಅವರ ಭವಿಷ್ಯದ ಜೀವನ ಕಷ್ಟಕರವಾಗುತ್ತದೆ. ಆದ್ದರಿಂದ ಸರ್ಕಾರದ ವಿವಿಧ ಇಲಾಖೆಗಳು ಶಿಕ್ಷಣ ವಂಚಿತ ಮಕ್ಕಳನ್ನು ಪತ್ತೆ ಹಚ್ಚಿ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಮಕ್ಕಳು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ದಿವಾಣಿ ನ್ಯಾಯಾಧೀಶ ಪ್ರತಾಪಕುಮಾರ ಎನ್. ಮಾತನಾಡಿ, ಸಂವಿಧಾನದಂತೆ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲಾಗುತ್ತದೆ. ಅದರ ಸದುಪಯೋಗ ಪಡೆದು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಪಾಲಕರ ಹೊಣೆ ಎಂದು ಹೇಳಿದರು.

ಲಕ್ಷೆ್ಮೕಶ್ವರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ. ಪಿಎಸ್​ಐ ಬಿ.ಎ. ತಿಪರಡ್ಡಿ, ಶಿಶು ಅಭಿವೃದ್ಧಿ ಅಧಿಕಾರಿ ಅವಿನಾಶ ಗೋಡಖಿಂಡಿ, ಕಾರ್ವಿುಕ ಇಲಾಖೆ ನಿರೀಕ್ಷಕಿ ಎಸ್.ಎಂ. ಹಿರೇಹಾಳ, ಪಪಂ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಪುರಸಭೆ ಮುಖ್ಯಾಧಿಕಾರಿ ಎಂ.ಎ. ರಾಜಾಪುರ, ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ವಕೀಲರ ಸಂಘದ ಉಪಾಧ್ಯಕ್ಷ ಎನ್.ಬಿ. ಬೆಲ್ಲದ, ಬಿಇಒ ವಿ.ವಿ. ಸಾಲಿಮಠ ಇದ್ದರು. ಎನ್.ಎಸ್. ಪಾಟೀಲ ಸ್ವಾಗತಿಸಿದರು. ವಕೀಲ ಮಹೇಶ ಹಾರೋಗೇರಿ ನಿರೂಪಿಸಿದರು. ಎಂ.ಎ. ಮಕಾನದಾರ ವಂದಿಸಿದರು.

ಲಕ್ಷ್ಮೇಶ್ವರ:ತಾಲೂಕಿನ ಶಿಗ್ಲಿ ಗ್ರಾಮದ ನವಚೇತನ ವಿದ್ಯಾನಿಕೇತನ ಶಾಲೆಯ ಮಕ್ಕಳು ವಿಶ್ವ ಬಾಲ ಕಾರ್ವಿುಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಮೆರವಣಿಗೆಯುದ್ದಕ್ಕೂ ‘ಕೆಲಸ ಬಿಡಿಸಿ ಶಾಲೆ ಸೇರಿಸಿ’ ‘ಬಾಲಕರನ್ನು ದುಡಿಸಿಕೊಳ್ಳುವುದು ಅಪರಾಧ’ ಎಂಬ ಘೊಷಣೆಗಳನ್ನು ಕೂಗಿದರು.

ಬಳಿಕ ಮಾತನಾಡಿದ ಶಾಲೆಯ ಮುಖ್ಯಾಧ್ಯಾಪಕ ಆರ್.ಹೆಚ್. ಗದಗ ಅವರು, ಬಡತನ, ಅನಕ್ಷರತೆ ಕಾರಣದಿಂದ ಬಾಲ್ಯದಲ್ಲಿಯೇ ತಂದೆ-ತಾಯಿಗಳ, ಪಾಲಕರ ಪ್ರೀತಿ, ವಾತ್ಸಲ್ಯದಿಂದ ದೂರವಾಗಿ ಬದುಕು ಸಾಗಿಸಲು ಅನಿವಾರ್ಯವಾಗಿ ದುಡಿಮೆಯಲ್ಲಿ ತೊಡಗುವ ಅನಿಷ್ಠ ಬಾಲ ಕಾರ್ವಿುಕ ಪದ್ಧತಿ ತೊಲಗಬೇಕು. 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವ ಮೂಲಕ ಬಾಲಕಾರ್ವಿುಕ ಪದ್ಧತಿ ರಹಿತ ಸಮಾಜ ನಿರ್ವಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಶಿಕ್ಷಕರಾದ ವಿದ್ಯಾ ಅಂಗಡಿ, ಟಿ. ಸಾವಿತ್ರಮ್ಮ, ಸಂತೋಷ ಪಾಟೀಲ, ಸೊಪ್ಪಿನ ಸೇರಿ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *