ಮಕಾನದಾರ, ಗೌಡರಗೆ ಸಾಹಿತ್ಯಶ್ರೀ ಪ್ರಶಸ್ತಿ

 

ಗದಗ: ಸ್ಥಳೀಯ ಜಿಲ್ಲಾ ಸಾಹಿತ್ಯ ಭವನದಲ್ಲಿ ವಿ.ಬಿ. ಹಿರೇಮಠ ಪ್ರತಿಷ್ಠಾನ, ಅಶ್ವಿನಿ ಪ್ರಕಾಶನ, ಕಸಾಪ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಸಾಹಿತಿ ಡಾ. ವಿ.ಬಿ. ಹಿರೇಮಠ ಅವರ ಐದನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಹಿತಿ ಎ.ಎಸ್. ಮಕಾನದಾರ ಮತ್ತು ರಬಕವಿಯ ರೇವಣಸಿದ್ದಪ್ಪ ಗೌಡರ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿದ ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಡಾ. ವಿ.ಬಿ. ಹಿರೇಮಠ ಸಾಧನೆ ದೊಡ್ಡದು. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಹುಮುಖ ವ್ಯಕ್ತಿತ್ವದ ಅವರು ಉಪನ್ಯಾಸದೊಂದಿಗೆ ಸಾಹಿತ್ಯ ಕೃಷಿ ಮಾಡಿದ್ದಾರೆ. 80ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಹಿರೇಮಠ ಕುರಿತು ಯುವಸಾಹಿತಿಗಳಿಗೆ ಪ್ರೇರಣೆ ನೀಡಲು ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಸ್​ಎಸ್ ಸಂಸ್ಥಾಪಕ ಡಾ. ಬಿ.ಎಫ್. ದಂಡಿನ, ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿದರು. ಡಾ. ಸರ್ವಮಂಗಳಾ ಕುದರಿ ಉಪನ್ಯಾಸ ನೀಡಿದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪ್ರತಿಷ್ಠಾನದ ಅಧ್ಯಕ್ಷೆ ವಿ.ವಿ. ಹಿರೇಮಠ, ಡಾ. ಬಿ.ಸಿ. ಜಂಪಣ್ಣವರ, ಶಕುಂತಲಾ ದಂಡಿನ, ಸಹಕಾರ ಇಲಾಖೆ ಉಪನಿಬಂಧಕಿ ವಿ.ಬಿ. ಹಿರೇಮಠ, ಅಂದಾನಪ್ಪ ವಿಭೂತಿ, ಕಸಾಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ, ಪ್ರಾಚಾರ್ಯ ಟಿ.ಎನ್. ಗೋಡಿ, ಇತರರಿದ್ದರು.

ಮಂಜುನಾಥ ಭಟ್, ಕಳಕಪ್ಪ ಮುದ್ಲಾಪುರ ಸಂಗೀತ ಪ್ರಸ್ತುತಪಡಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಎಸ್.ಸಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲಿಂಗಯ್ಯಶಾಸ್ತ್ರಿ ಸಿದ್ದಾಪುರ ನಿರ್ವಹಿಸಿದರು.