More

  ಮಾಕಳಿ ಬೇರು ಕಳವು ಮಾಡಿದ್ದ ಮೂವರ ಬಂಧನ

  ಅರಸೀಕೆರೆ: ತಾಲೂಕಿನ ಹಿರೇಕಲ್ ಗುಡ್ಡದ ವ್ಯಾಪ್ತಿಯ ಕರಡಿ ಧಾಮಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಲಕ್ಷಾಂತರ ರೂ.ಬೆಲೆ ಬಾಳುವ ಔಷಧೀಯ ಗುಣವುಳ್ಳ ಹಾಗೂ ಭಾರಿ ಬೆಲೆಯಳ್ಳ ಮಾಕಳಿ ಬೇರು ಕಳವು ಮಾಡುತ್ತಿದ್ದ ಮೂವರು ದುಷ್ಕರ್ಮಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

  ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಮಿಲಿತಿಕ್ಕಿ ಗ್ರಾಮದ ನಂಜಪ್ಪ (55), ಮದ್ದೂರ (27) ಹಾಗೂ ತಗ್ಗಟ್ಟಿ ಗ್ರಾಮದ ಕುಲ್ಲಪ್ಪನ್(58)ಬಂಧಿತ ಆರೋಪಿಗಳು. ಬಂಧಿತರಿಂದ ಅಂದಾಜು 1.5 ಲಕ್ಷ ರೂ.ಬೆಲೆ ಬಾಳುವ ಮಾಕಳಿ ಬೇರು ತುಂಬಿದ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ.

  ಕಳೆದ ಹಲವು ವರ್ಷಗಳಿಂದ ಕೃತ್ಯದಲ್ಲಿ ಭಾಗಿಯಾಗಿದ್ದ ಖದೀಮರನ್ನು ಕೊನೆಗೂ ವಲಯ ಅರಣ್ಯಾಧಿಕಾರಿ ಕೆ.ಎನ್.ಹೇಮಂತ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಹೆಡೆಮುರಿ ಕಟ್ಟುವಲ್ಲಿ ಸಫಲವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಟಿ.ದಿಲೀಪ್, ಉಮೇಶ್, ಯು.ಎಸ್.ದಿಲೀಪ್‌ಕುಮಾರ್, ಸಿ.ಡಿ.ರಮೇಶ್, ವಿಶ್ವನಾಥ್ ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts