ಮಂತ್ರಾಲಯ ಸ್ವಚ್ಛ ಐಕಾನ್

ರಾಯಚೂರು: ಕೇಂದ್ರ ಸರ್ಕಾರದ ಕುಡಿವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಮೂರನೇ ಹಂತದ ಸ್ವಚ್ಛ ಐಕಾನ್ ಕೇಂದ್ರವಾಗಿ ಮಂತ್ರಾಲಯ ಆಯ್ಕೆಯಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಆರೋಗ್ಯ ದೃಷ್ಟಿಯಿಂದ ಮಂತ್ರಾಲಯ ಮಠ ಸೇರಿ ಇಲ್ಲಿಗೆ ಬರುವ ಅಪಾರ ಸಂಖ್ಯೆ ಭಕ್ತರಿಗೂ ಸ್ವಚ್ಛತೆ ಜಾಗೃತಿ ಮೂಡಿಸಲಾಗಿತ್ತು. ‘ಸ್ವಚ್ಛ ಸುಂದರ ಮಂತ್ರಾಲಯ’ ಘೊಷಣೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಠವು, ಕ್ಷೇತ್ರದಲ್ಲಿ ಪರಿಶುದ್ಧತೆ, ಶುದ್ಧ ಕುಡಿವ ನೀರು ಪೂರೈಕೆ, ಉದ್ಯಾನವನಗಳು, ವಿದ್ಯುತ್ ದೀಪ ಸೌಕರ್ಯ, ಉಚಿತ ವೈದ್ಯಕೀಯ ಸೇವೆ, ಪರಿಸರ ವೃದ್ಧಿಗಾಗಿ ಗಿಡಮರಗಳ ಜೋಪಾನ ಮತ್ತು ಸಸಿ ನೆಡುವಿಕೆ ಸೇರಿ ಹತ್ತಾರು ಕಾರಣಗಳಿಂದಾಗಿ ಸ್ವಚ್ಛ ಐಕಾನ್ ಆಗಿ ಕೇಂದ್ರ ಸರ್ಕಾರ ಗುರುತಿಸಿದೆ. ಮುಂದಿನ ಗುರಿಯಾಗಿ ಸೌರ ವಿದ್ಯುದ್ಧೀಕರಣ ಸೇರಿ ವ್ಯವಸ್ಥಿತ ಸ್ನಾನಘಟ್ಟಗಳ ನಿರ್ವಣ, ಚರಂಡಿ ವ್ಯವಸ್ಥೆಯಲ್ಲಿ ಶ್ರೀಮಠ ನಿರತವಾಗಿದೆ.

ಸ್ವಚ್ಛ ಐಕಾನ್​ಗೆ ದೇಶದ ಹತ್ತು ಧಾರ್ವಿುಕ ಸ್ಥಳಗಳನ್ನು ಕೇಂದ್ರ ಗುರುತಿಸಿದ್ದು, ಅದರಲ್ಲಿ ಮಂತ್ರಾಲಯವೂ ಸೇರಿದೆ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *