ಮಂತ್ರಾಲಯಕ್ಕೆ ಸುವಿದ್ಯೇಂದ್ರರು

ರಾಯಚೂರು: ಈ ಮೊದಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಉತ್ತರಾಧಿಕಾರಿಯಾಗಿದ್ದ ಶ್ರೀ ಸುವಿದ್ಯೇಂದ್ರ ತೀರ್ಥರು 14 ವರ್ಷಗಳ ನಂತರ ಶ್ರೀಮಠಕ್ಕೆ ಮಂಗಳವಾರ ಭೇಟಿ ನೀಡಿದ್ದಾರೆ. ಶ್ರೀಗಳ ಭೇಟಿಯಿಂದ ಮಠದಲ್ಲಿ ಸಂಭ್ರಮದ ವಾತಾವರಣ ನಿರ್ವಣವಾಗಿದ್ದು, ಈಗಿನ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಸುವಿದ್ಯೇಂದ್ರ ತೀರ್ಥರನ್ನು ಬರಮಾಡಿಕೊಂಡರು. ರಾಯರ ಮೂಲ ವೃಂದಾವನದ ದರ್ಶನ ಪಡೆದ ಸುವಿದ್ಯೇಂದ್ರ ತೀರ್ಥರು, ಶ್ರೀ ಸುಬುಧೇಂದ್ರ ತೀರ್ಥರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು. ಈ ಮೊದಲು ಶ್ರೀ ಸುಶಮೀಂದ್ರ ತೀರ್ಥರು ಪೀಠಾಧಿಪತಿಗಳಾಗಿದ್ದಾಗ, ಶ್ರೀ ಸುವಿದ್ಯೇಂದ್ರ ತೀರ್ಥರು 2002ರಲ್ಲಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದರು. ಕಾರಣಾಂತರಗಳಿಂದ 2004ರಲ್ಲಿ ಉತ್ತರಾಧಿಕಾರತ್ವ ಬಿಟ್ಟುಕೊಟ್ಟು ಹೊರಬಂದಿದ್ದರು.

Leave a Reply

Your email address will not be published. Required fields are marked *