More

  ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಾವೇರಿಯಲ್ಲಿ ಕಟ್ಟೆಚ್ಚರ

  ಹಾವೇರಿ: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಲ್ಲಿಯ ಜನನಿಬಿಡ ಪ್ರದೇಶಗಳಲ್ಲಿ ಎಎಸ್​ಸಿ ತಂಡ, ಶ್ವಾನದಳ ಹಾಗೂ ಪೊಲೀಸ್ ಇಲಾಖೆಯಿಂದ ಸೋಮವಾರ ಮಧ್ಯಾಹ್ನ ಪರಿಶೀಲನೆ ನಡೆಸಲಾಯಿತು.

  ನಗರದ ರೈಲ್ವೆ ನಿಲ್ದಾಣ, ಬಸ್​ನಿಲ್ದಾಣ, ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿ, ನ್ಯಾಯಾಲಯದ ಆವರಣಗಳಲ್ಲಿ ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದರು. ಸಂಶಯಾಸ್ಪದ ವಾಹನಗಳನ್ನು ಅಲ್ಲಲ್ಲಿ ತಡೆದು ಪೊಲೀಸರು ವಿಚಾರಿಸಿದರು.

  ಎಎಸ್​ಸಿ(ವಿಧ್ವಂಸಕ ವಿರೋಧಿ ಪರಿಶೀಲನಾ ತಂಡ), ಶ್ವಾನದಳದ ಸಿಬ್ಬಂದಿ ಸಂಶಯಾಸ್ಪದ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ಬಹಳಷ್ಟು ದಿನಗಳಿಂದ ಒಂದೇ ಕಡೆಗಳಲ್ಲಿ ನಿಲ್ಲಿಸಿರುವ ಹಳೆಯ ವಾಹನಗಳನ್ನೂ ಪರಿಶೀಲಿಸಿದರು. ಆದರೆ, ಯಾವುದೇ ಸಂಶಯಾಸ್ಪದ ವಸ್ತುಗಳು ದೊರೆತಿಲ್ಲ. ಶಂಕಾಸ್ಪದ ವ್ಯಕ್ತಿಗಳ ಚಲನವಲನ ಮೇಲೂ ನಿಗಾ ಇರಿಸಲಾಗಿದೆ. ಜಿಲ್ಲೆಯಾದ್ಯಂತ ಜನ ಸೇರುವ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಎಸ್​ಪಿ ಕೆ.ಜಿ. ದೇವರಾಜ್ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts