Hanagal, Fraternity, core, of, Islam, ಭ್ರಾತೃತ್ವವೇ, ಇಸ್ಲಾಂ, ಧರ್ಮದ, ತಿರುಳು,

ಭ್ರಾತೃತ್ವವೇ ಇಸ್ಲಾಂ ಧರ್ಮದ ತಿರುಳು

ಹಾನಗಲ್ಲ: ಭ್ರಾತೃತ್ವವೇ ಇಸ್ಲಾಂ ಧರ್ಮದ ತಿರುಳು. ಇಸ್ಲಾಂ ಧರ್ಮದ ನೈಜ ಅರ್ಥ ಅರಿಯದ ಮುಸ್ಲಿಮರಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಜಾಗತಿಕ ಶಹದಾ ಕೌನ್ಸಿಲ್ ಸಂಸ್ಥಾಪಕ ಮಲೇಷಿಯಾದ ಡಾ. ಇಸ್ಮಾಯಿಲ್ ಕಾಸಿಂ ಶೇಖ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಪಟ್ಟಭದ್ರರು ವಿಧ್ವಂಸಕ ಕೃತ್ಯಗಳ ಮೂಲಕ ಇಸ್ಲಾಂ ಧರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಖಂಡನೀಯ ಎಂದರು.

ಮುಸ್ಲಿಂ ಎಂದರೆ ದೌರ್ಜನ್ಯ, ಉಗ್ರವಾದ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಕಾಶ್ಮೀರದಲ್ಲಿ ನಡೆದ ಘಟನೆ ಉಗ್ರವಾದದ ಅತಿರೇಕ. ಇದನ್ನು ಇಡೀ ಜಗತ್ತು ಕ್ಷಮಿಸುವುದಿಲ್ಲ. ಮುಸ್ಲಿಂ ಮುಖವಾಡದವರಿಂದ ಇಂಥ ಕೃತ್ಯ ನಡೆಯುತ್ತಿವೆ. ಭಾರತ ಹಾಗೂ ಪಾಕಿಸ್ತಾನದ ಪ್ರಧಾನಮಮತ್ರಿಗಳು ರ್ಚಚಿಸಿ ಉಗ್ರವಾದದ ಸಮಸ್ಯೆ ಪರಿಹರಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ. ಪಾಕಿಸ್ತಾನ ಪ್ರೇರಿತ ಉಗ್ರರು ಭಾರತದ ಮೇಲೆ ಉಗ್ರವಾದ ಪ್ರದರ್ಶಿಸುತ್ತಿದ್ದಾರೆ. ಜಾಗತಿಕ ಶಹದಾ ಕೌನ್ಸಿಲ್ ಇದನ್ನು ವಿರೋಧಿಸುತ್ತದೆ ಎಂದರು.

ಜಾಗತಿಕ ಶಹದಾ ಕೌನ್ಸಿಲ್ ಉಪಾಧ್ಯಕ್ಷ ಚಂದ ಪಾಷಾ ಅಬ್ದುಲ್ ಖಾದೀರ್ ಮಾತನಾಡಿ, ಭಾರತದಲ್ಲಿ ಮತೀಯ ಶಾಂತಿಗಾಗಿ ಅಖಿಲ ಭಾರತ ಉಲ್ಮಾ ಹಾಗೂ ಮಷಾಯಿ ಬೋರ್ಡ್ ರಚನೆಯಾಗಿದೆ. ಶಿಕ್ಷಣದ ಕೊರತೆಯೇ ಶಾಂತಿ, ನೆಮ್ಮದಿ ಕದಡಲು ಕಾರಣವಾಗಿದೆ. ಇಸ್ಲಾಂ ಧರ್ಮದ ನಿಜಾರ್ಥ ಸಾರುವುದೇ ನಮ್ಮ ಧ್ಯೇಯ ಎಂದರು.

ಮುಖಬೂಲಿಯಾ ಸಂಸ್ಥೆ ಅಧ್ಯಕ್ಷ ಮಖಬೂಲಅಹ್ಮದ ಅಕ್ಕಿವಳ್ಳಿ, ವಕೀಲ ಯಾಸಿರ್ ಅರಾಫತ್ ಮಕಾನದಾರ, ಕ್ಯಾಲಿಫೋರ್ನಿಯಾದ ಇಮಾಮ ಉಸ್ತಾದ ಮೂಸಾ ಸಖಾಪಿ, ಮಲೇಷಿಯಾದ ಉಸ್ತಾದ ಶೌಕತ್ ಸಕಾಫಿ, ಉಸ್ತಾನ ಅವೈಸ್ ಮಂಜರಿ ಸುದ್ದಿಗೋಷ್ಠಿಯಲ್ಲಿದ್ದರು.