ಚನ್ನರಾಯಪಟ್ಟಣ: ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತಕ್ಕಾಗಿ, ತಹಸೀಲ್ದಾರ್ ಕಚೇರಿ ನಡಿಗೆ ಹಳ್ಳಿಯ ಕಡೆಗೆ ಇರಬೇಕೆಂದು ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಹಾಗೂ ವಿವಿಧ ಸಂಘಟನೆಗಳವರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ತಾಲೂಕು ಕಚೇರಿ ತಲುಪಿ, ಧರಣಿ ಕುಳಿತರು. ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಸಂಚಾಲಕ ಗೊಲ್ಲರಹಳ್ಳಿ ಮಂಜುನಾಥ್ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರದಿಂದ ಜನರು, ರೈತರು ನಲುಗಿ ಹೋಗಿದ್ದಾರೆ. ಮೇಲ್ಮಟ್ಟದಿಂದ ಕೆಳ ಹಂತದವರೆಗೂ ಲಂಚ ನೀಡಿದರಷ್ಟೇ ಕೆಲಸ ಅನ್ನೋ ಪರಿಸ್ಥಿತಿ ಅನೇಕ ಕಡೆ ಇರುವುದರಿಂದ ಸರ್ಕಾರಿ ಕಚೇರಿಗಳಿಗೆ ಹೋಗಲು ಭಯ ಪಡುವಂತಾಗಿದೆ ಎಂದು ಆತಂಕ ಹೊರ ಹಾಕಿದರು.
ಹೀಗಾದರೆ ಪಾರದರ್ಶಕ ಆಡಳಿತ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ತಹಸೀಲ್ದಾರ್, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ರೈತರ ಕೆಲಸ-ಕಾರ್ಯ ಪ್ರಮುಖವಾಗಿರುತ್ತವೆ. ಆದರೆ ಹತ್ತಾರು ವರ್ಷಗಳಿಂದ ಸಾಕಷ್ಟು ರೈತರಿಗೆ ಭೂಮಿ ಮಂಜೂರು ಮಾಡಿಕೊಟ್ಟಿರುವ ಜಮೀನಿನ ಸರ್ವೆ ನಡೆಸಿ ಪೌತಿ ಖಾತೆ ಮಾಡಿಕೊಟ್ಟಿಲ್ಲ ಎಂದು ದೂರಿದರು. ಭೂದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಎಲ್ಲದಕ್ಕೂ ವಿಳಂಬ ಮಾಡಿ ರೈತರನ್ನು ಅಲೆಸಲಾಗುತ್ತಿದೆ. ಮಂಜೂರು ಚೀಟಿ ಇಲ್ಲದೇ ಇದ್ದರೂ ಪಹಣಿ ದಾಖಲೆ ಮಾಡಿ ಕೊಡಲಾಗಿದೆ. ಯಾರದೋ ಪಹಣಿ ಇನ್ನೊಬ್ಬರ ಹೆಸರಿನಲ್ಲಿ ಇರುತ್ತದೆ. ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಇದು ಒಂದೆಡೆಯಾದರೆ ಬದುಕಿರುವವರ ಹೆಸರಿನಲ್ಲಿ ಮರಣ ಪತ್ರ ನೀಡಲಾಗಿದೆ. ಬಲಾಢ್ಯರು ಮತ್ತು ಸರ್ಕಾರಿ ಅಧಿಕಾರಿಗಳು ಬೆಲೆಬಾಳುವ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ತಮ್ಮಂತೆ ಮಾಡಿಕೊಳ್ಳುತ್ತಿದ್ದಾರೆ. ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸುವ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ದೂರಿದರು.
ಇದರಿಂದ ರೈತರು, ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಆಡಳಿತ ವ್ಯವಸ್ಥೆ ಮೇಲೆ ಸಿಟ್ಟು ಹೊರ ಹಾಕಿದರು. ಕೆಲವರು ಸರ್ಕಾರಕ್ಕೆ ಸೆಡ್ಡು ಹೊಡೆದು ಒಂದೇ ಕಡೆ ಠಿಕಾಣಿ ಹೂಡುವ ಮೂಲಕ ಜನ ಸಾಮಾನ್ಯರಿಗೆ ಮಾರಕವಾಗಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ದುರಾಡಳಿತಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡ ರವಿ ಗೌಡಯ್ಯ ಮಾತನಾಡಿ, ರೈತರು ಬೆಳೆದ ಬೆಳೆಗೆ ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಪ್ರಕಾರ ವೈಜ್ಞಾನಿಕವಾಗಿ ಕನಿಷ್ಠ ಬೆಲೆ ನಿಗದಿ ಮಾಡುತ್ತಿಲ್ಲ, ಇದರಿಂದ ಬಡ ಹಾಗೂ ಮಧ್ಯಮ ರೈತರು ಹತ್ತಾರು ವಿಧದ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡುವುದು ಕಾನೂನು ಬದ್ಧವೇನೋ ಎಂದು ಜನತೆ ಒಪ್ಪಿಕೊಳ್ಳುವ ಹಂತಕ್ಕೆ ವ್ಯವಸ್ಥೆಯನ್ನು ತಂದು ನಿಲ್ಲಿಸಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಯಿಂದಾಗಿ ರೈತರು ಮತ್ತು ಶ್ರೀ ಸಾಮಾನ್ಯರು ಹತಾಶೆಗೆ ಒಳಗಾಗಿದ್ದಾರೆ, ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಸಂಚಾಲಕರಾದ ಶ್ರೀನಿವಾಸ್ ಅಡಗೂರು, ವಾಸುದೇವ್, ನವೀನ್, ಜಗದೀಶ್, ಮೋಹನ್, ತೇಜಸ್, ಮಹೇಶ್, ಶಾಂತರಾಜು, ಲೋಕೇಶ್, ಶಂಕರ್, ಕುಮಾರ್ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರುಗಳು ಭಾಗವಹಿಸಿದ್ದರು.
ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತಾಯಿಸಿ ಪ್ರತಿಭಟನೆ

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips
ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…
ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…
ವೇಜ್, ನಾನ್ವೆಜ್ ಖಾದ್ಯ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!
Tomato : ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು ಕರಿ, ಗ್ರೇವಿ, ಸೂಪ್…