More

  ಭೋವಿ ಸಮಾಜಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ

  ಚಿತ್ರದುರ್ಗ: ಭೋವಿ ಸಮಾಜಕ್ಕೆ ಕಾಂಗ್ರೆಸ್‌ನಿಂದ ನಿರಂತರವಾಗಿ ಅನ್ಯಾಯ ಆಗುತ್ತಲೇ ಇದೆ. ಹೀಗಾಗಿ ಲೋಕಸಭಾ ಚುನಾವಣೆ ಸಂಬಂಧ ತೀರ್ಮಾನ ಕೈಗೊಳ್ಳಲು ಒಂದೆರಡು ದಿನದಲ್ಲಿ ಬೆಂಗಳೂರಿನಲ್ಲಿ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.

  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಮೀಸಲು ಕ್ಷೇತ್ರಗಳ ಪೈಕಿ ಭೋವಿ ಸಮಾಜದ ಯಾರಿಗಾದರೂ ಒಂದು ಕಡೆ ಟಿಕೆಟ್ ನೀಡಲು ಸ್ವಾಮೀಜಿ ಮೂಲಕ ಸಿಎಂ, ಡಿಸಿಎಂಗೆ ಮನವಿ ಮಾಡಿದ್ದರೂ ಪರಿಗಣಿಸಿಲ್ಲ. ರಾಜ್ಯಸಭೆ, ವಿಧಾನಪರಿಷತ್, ನಿಗಮ ಮಂಡಳಿಗೂ ಆದ್ಯತೆ ನೀಡಿಲ್ಲ. ಹೈಕಮಾಂಡ್ ಸಂಪೂರ್ಣ ಕಡೆಗಣಿಸಿದೆ ಎಂದು ಅಸಮಾಧಾನ ಹೊರಹಾಕಿದರು.

  ಸಮಾಜದ ಪೈಕಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣದಲ್ಲಿದ್ದಾರೆ. ಚಿತ್ರದುರ್ಗ ಕ್ಷೇತ್ರಕ್ಕೂ ಬಿಜೆಪಿ ಈ ಹಿಂದೆ ಟಿಕೆಟ್ ನೀಡಿದೆ. ಆದರೆ, 1984ರಿಂದ ಸಮಾಜದ ಯಾರಿಗೂ ಇಲ್ಲಿ ಕೈ ಟಿಕೆಟ್ ನೀಡಿಲ್ಲ. ಸಮಾಜದ ಆಸ್ಮಿತೆ, ಸ್ವಾಭಿಮಾನದ ಪ್ರಶ್ನೆಯಾಗಿದೆ. ರಾಜ್ಯದಲ್ಲಿ ನಮ್ಮವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಟಿಕೆಟ್ ನೀಡದಿದ್ದಕ್ಕೆ ಸಮುದಾಯ ಅಸಮಾಧಾನಗೊಂಡಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಒತ್ತಾಯಿಸಿದರು.

  ಮುಖಂಡ ನೇರ್ಲಗುಂಟೆ ರಾಮಪ್ಪ ಮಾತನಾಡಿ, ಭೋವಿ ಸಮಾಜದ ಜನಸಂಖ್ಯೆ ಹೆಚ್ಚಿರುವ ಚಿತ್ರದುರ್ಗ ಕ್ಷೇತ್ರದಲ್ಲೇ ಸಮುದಾಯದ ಯಾರಿಗಾದರೂ ಟಿಕೆಟ್ ನೀಡಬಹುದಿತ್ತು. ಹಲವು ಬಾರಿ ಕೊಟ್ಟಿರುವ ‘ಬಿ’ ಫಾರಂ ಹಿಂಪಡೆದು ‘ಸಿ’ ಫಾರಂ ನೀಡಿರುವ ನಿದರ್ಶನವಿದೆ. ಈ ಕುರಿತು ಇನ್ನೊಮ್ಮೆ ಪಕ್ಷ ಯೋಚಿಸಲಿ ಎಂದು ಮನವಿ ಮಾಡಿದರು.

  ಭೋವಿ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ಪ್ರಕಾಶ್, ಜಿ.ತಿಪ್ಪೇಸ್ವಾಮಿ, ಕುಮಾರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts