20.3 C
Bangalore
Sunday, December 15, 2019

ಭೂಕುಸಿತ, ಅರಣ್ಯನಾಶದಿಂದ ಧಗೆ

Latest News

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

ವೇಣುವಿನೋದ್ ಕೆ.ಎಸ್.

ಮಂಗಳೂರು: ಅಕ್ಟೋಬರ್ ಕೊನೆಯವರೆಗೂ ಭರ್ಜರಿ ಮಳೆಯಾದಾಗ ‘ಅಬ್ಬ ಈ ಬಾರಿ ಮಳೆ ಮುಂದುವರಿದಿದ್ದರಿಂದ ನದಿಯಲ್ಲಿ ನೀರು ಆರದು, ಒಂದಷ್ಟು ಸೆಕೆಯೂ ಕಡಿಮೆ ಇರಬಹುದು’ ಎಂದುಕೊಂಡದ್ದು ತಪ್ಪಾಯಿತೇ? ಲೆಕ್ಕಾಚಾರ ಬುಡಮೇಲಾಯ್ತೇ?

ಪಶ್ಚಿಮ ಘಟ್ಟದ ದಟ್ಟ ಕಾನನದೊಳಗೇ ತಣ್ಪು ಕಡಿಮೆಯಾಗುತ್ತಿರುವುದು ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದರ ಸ್ಪಷ್ಟ ಸೂಚನೆ. ಇನ್ನೊಂದೆಡೆ ಮಳೆ ಕಡಿಮೆಯಾಗಿದ್ದೇ ತಡ, ಕಾಡಿನೊಳಗೆ ಹರಿಯುವ ಝರಿಗಳೆಲ್ಲಾ ಸೊರಗಿವೆ, ಒರತೆ ಸಪುರಗೊಂಡಿದೆ. ಈ ಬಾರಿಯ ಬೇಸಿಗೆಗೆ ಈಗಲೇ ಸಿದ್ಧರಾಗಿ ಎಂಬಂತಹ ಸಂದೇಶ ನೀಡತೊಡಗಿವೆ.

ಚಾರ್ಮಾಡಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಭೂಕುಸಿತಕ್ಕೆ ಸಾಕ್ಷಿಯಾದ ಪಶ್ಚಿಮ ಘಟ್ಟದ ದಟ್ಟಾರಣ್ಯದಲ್ಲಿ ಮಾತ್ರವೇ ಇಂತಹ ಸ್ಥಿತಿ ಕಂಡುಬರುತ್ತಿರುವುದಲ್ಲ, ಬದಲಿಗೆ ಅಷ್ಟಾಗಿ ಹಾನಿಯಾಗದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ತೆಕ್ಕೆಯಲ್ಲಿರುವ ಬೆಟ್ಟಸಾಲಿನಲ್ಲೂ ಇದೇ ಸನ್ನಿವೇಶವಿದೆ.

ಕೆಲದಿನಗಳ ಹಿಂದೆಯಷ್ಟೇ ‘ವಿಜಯವಾಣಿ’ ಪ್ರತಿನಿಧಿ ಕುದುರೆಮುಖ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಅಜೆಕಾರು ಸಮೀಪದ ವಾಲಿಕುಂಜ ಶಿಖರಕ್ಕೆ ಚಾರಣ ತೆರಳಿದಾಗಲೂ ಇದೇ ರೀತಿಯ ಹವಾಮಾನ ವೈಪರೀತ್ಯ ಅನುಭವಕ್ಕೆ ಬಂತು. ಹೊರಗೆ ಬಿಸಿಲಿದ್ದರೂ ಕಾಡಿನ ನಡುವೆ ತಣ್ಪು ಇರುವುದು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯ. ಅದೂ ನವೆಂಬರ್ ತಿಂಗಳಲ್ಲಿ ನಸುವಾದ ಚಳಿ ವ್ಯಾಪಿಸಿರುವ ಸಮಯ. ಇದರ ಬದಲು ಬೆಳಗ್ಗಿನಿಂದಲೇ ಸೆಕೆ, ಮಧ್ಯಾಹ್ನ ಸುಡುವ ಬೇಗೆ.

ಚಾರ್ಮಾಡಿ ಘಾಟಿಯ ಹೊಸಮಠದ ಬಿರುಮಂಡ ಬೆಟ್ಟಕ್ಕೆ ಪರಿಶೀಲನೆಗೆ ತೆರಳಿದ್ದ ಪರಿಸರ ಪ್ರೇಮಿ ದಿನೇಶ್ ಹೊಳ್ಳ ಹಾಗೂ ಅವರ ತಂಡದವರಿಗೂ ಇದೇ ರೀತಿಯ ಅನುಭವ ಆಗಿದೆ. ಬೆಟ್ಟದ ತೆಕ್ಕೆಯಲ್ಲಿದ್ದ ಅರಣ್ಯವೆಲ್ಲಾ ನಾಶಗೊಂಡು ಕಾನನದ ಹೊದಿಗೆ ನಾಶವಾಗಿದೆ. ಹಾಗಾಗಿ ಭೂಮಿಗೆ ನೇರವಾಗಿ ಬಿಸಿಲು ಹೊಡೆಯಲಾರಂಭಿಸಿದ್ದು, ಅಮೂಲ್ಯ ಜೀವವೈವಿಧ್ಯಕ್ಕೆ ಹೊಡೆತ ಬಿದ್ದಿದೆ ಎನ್ನುತ್ತಾರೆ ಹೊಳ್ಳ.

ಸೂರ್ಯನಿಗೆ ಕಾನನ ನೇರ ಎಕ್ಸ್‌ಪೋಸ್: ಒಂದೆಡೆ ಪಶ್ಚಿಮ ಘಟ್ಟದ ಅಲ್ಲಲ್ಲಿ ಕಾಡಿಗೆ ಕೊಡಲಿ ಬಿದ್ದಿರುವುದು, ಕಾಡ್ಗಿಚ್ಚು ಬೀಳುವುದು, ಇನ್ನೊಂದೆಡೆ ಕಳೆದೆರಡು ವರ್ಷಗಳಲ್ಲಿ ಕಾಣಿಸಿಕೊಂಡಿರುವ ಭೂಕುಸಿತ ಇವೆಲ್ಲವೂ ಸೇರಿಕೊಂಡು ಕಾಡಿನ ವಾತಾವರಣಕ್ಕೆ ಸೂರ್ಯನ ಪ್ರಖರ ಕಿರಣಗಳು ಬೀಳುವ ಪ್ರಮಾಣ ಹೆಚ್ಚಿದೆ ಎನ್ನುತ್ತಾರೆ ಮಂಗಳೂರು ವಿವಿ ಸಾಗರ ಭೂವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ಎಚ್.ಗಂಗಾಧರ ಭಟ್.
ಕಾಡು ತಂಪು ಇರಲು ಮುಖ್ಯ ಕಾರಣವೆಂದರೆ ಸಸ್ಯಗಳ, ಮರಗಳ ಭಾಷ್ಪ ವಿಸರ್ಜನೆ. ಇದರಿಂದಾಗಿ ತೇವಾಂಶವನ್ನು ಹಿಡಿದಿಟ್ಟುಕೊಂಡು, ತಣ್ಪನ್ನು ಕಾಡು ಕಾಯ್ದುಕೊಳ್ಳುತ್ತದೆ. ಸಾಮಾನ್ಯವಾಗಿ ಕಾಡಿನ ಮೇಲ್ಮೈಯಲ್ಲಿ ಎಲೆಗಳು, ಗಿಡಗಳು ಇರುವ ಕಾರಣ ತಾಪಮಾನವನ್ನು ಹೀರಿಕೊಂಡು ತೇವದ ಮಣ್ಣು ಇತ್ತು. ಎಲೆಗಳ ಮೂಲಕ ನೀರು ಇಂಗುತ್ತಿತ್ತು. ಆದರೆ ನೀರು ಹಿಡಿಯುವ ಮಣ್ಣೇ ಜಾರಿಕೊಂಡು ಹೋಗಿ, ನೆಲ ಬಿರಿದು, ಅಲ್ಲಿನ ಮಣ್ಣು, ಕಲ್ಲು ಬಿಸಿಲಿಗೆ ತೆರೆಯಲ್ಪಡುತ್ತದೆ, ನೀರು ಹಿಡಿದುಕೊಳ್ಳುವ ಮಣ್ಣು ಕೊಚ್ಚಿ ಹೋಗಿದೆ. ದೊಡ್ಡ ದೊಡ್ಡ ಮರಗಳೇ ನಾಶವಾಗಿರುವುದು ನೇರವಾಗಿ ಪರಿಸರಕ್ಕೆ ಹೊಡೆತ ನೀಡಿವೆ.

ಬಿರುಮಂಡ ಬೆಟ್ಟದಲ್ಲಿ ತಳದಿಂದ ತುದಿವರೆಗೂ ಉರಿ ತಾಪ ಹೇಗಿತ್ತೆಂದರೆ ಯಾವುದೋ ಬಯಲು ಪ್ರದೇಶದಲ್ಲಿ ಇರುವ ಕಡು ತಾಪ ಇತ್ತು. ಮೊನ್ನೆ ಪಶ್ಚಿಮ ಘಟ್ಟದಲ್ಲಿ ಭೂಕುಸಿತ ಆದ ಜಾಗಗಳಲ್ಲಿ ಎಲ್ಲಾ ಕಡೆ ಹೀಗೆ ಉರಿತಾಪ ಇದೆ, ಬೆಟ್ಟದ ಬಹುತೇಕ ಕಡೆ ಹಸಿರು ಹೊದಿಕೆ ಇದ್ದದ್ದು (ಬೆಟ್ಟದ ರಕ್ಷಣೆಗೆ ಇದ್ದ ಹುಲ್ಲು, ಮರ, ಗಿಡಗಳು, ಬೀಳು, ಬಳ್ಳಿಗಳು, ಶಿಲೀಂದ್ರ, ಪಾಚಿಗಳು) ಎಲ್ಲವೂ ಮೊನ್ನೆ ಕೊಚ್ಚಿ ಹೋಗಿ ಛಿದ್ರವಾಗಿರುವುದು.
ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ

ಕಾಡಿನೊಳಗೆ ಸೂರ್ಯನ ಕಿರಣಗಳು ಹೆಚ್ಚು ಪ್ರಮಾಣದಲ್ಲಿ ಬೀಳುತ್ತಿರುವುದು ಉಷ್ಣಾಂಶ ಏರಿಕೆಗೆ ಕಾರಣ, ಕಾಡು ಕಡಿಯುವುದು ಇರಬಹುದು ಅಥವಾ ಭೂಕುಸಿತವಾದ್ದೇ ಇರಬಹುದು. ಇದರಿಂದಾಗಿ ಮುಂದೆ ನೀರಿನ ಸಮಸ್ಯೆ ಬರಬಹುದು. ಹಾಗಾಗಿ ಆಡಳಿತ ಈಗಲೇ ನೀರು ಸಂಗ್ರಹ ಶುರು ಮಾಡಬೇಕು, ಅಣೆಕಟ್ಟುಗಳ ಎತ್ತರ ಏರಿಸುವುದು ಸೂಕ್ತ, ಇಲ್ಲವಾದರೆ ಈ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಬರಬಹುದು.
ಪ್ರೊ.ಎಚ್.ಗಂಗಾಧರ ಭಟ್ ಮುಖ್ಯಸ್ಥ, ಸಾಗರಭೂವಿಜ್ಞಾನ ವಿಭಾಗ, ಮಂಗಳೂರು ವಿವಿ

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...