ಅರಸೀಕೆರೆ: ಶ್ರೀ ಪಂಚಪೀಠ ಧಾರ್ಮಿಕ ಆಚರಣಾ ಸಮಿತಿ ತಾಲೂಕು ವೀರಶೈವ ಲಿಂಗಾಯತ ಸಮಾಜ ವತಿಯಿಂದ ಉತ್ತರಾಖಂಡ ರಾಜ್ಯದ ಕೇದಾರನಾಥ ರಾವಲು ಭೀಮಾ ಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಊಖೀಮಠ ಇವರ ಅಡ್ಡ ಪಲ್ಲಕ್ಕಿ ಉತ್ಸವ , ಇಷ್ಟಲಿಂಗ ಪೂಜೆ ಹಾಗೂ ಧರ್ಮ ಸಂದೇಶ ಫೆ.10 ಮತ್ತು 11 ರಂದು ವಿಜೃಂಭಣೆಯಿಂದ ನಡೆಯಲಿದೆ.
ಡಾ.ಕರಿವೃಷಭ ಶಿವಯೋಗೀಶ್ವರ ಸ್ವಾಮಿ ಕಾಡು ಸಿದ್ದೇಶ್ವರ ಮಠ ನೊಣವಿನಕೆರೆ ನೇತೃತ್ವದಲ್ಲಿ ಕೇದಾರನಾಥ ರಾವಲು ಭೀಮಾಶಂಕರಲಿಂಗ ಶಿಚಾಚಾರ್ಯ ಭಗವತ್ಪಾದರ ಅಡ್ಡ ಪಲ್ಲಕ್ಕಿ ಉತ್ಸವ ಫೆ .10 ರಂದು ಮಧ್ಯಾಹ್ನ ನಗರದ ಪ್ರವಾಸಿ ಮಂದಿರದಿಂದ 108 ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಸಾಂಸ್ಕ್ರತಿಕ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳ ಮೂಲಕ ಶ್ರೀ ವೀರಶೈವ ಸಮುದಾಯ ಭವನದವರೆಗೆ ಮೆರವಣಗೆ ಹಮ್ಮಿಕೊಳ್ಳಲಾಗಿದೆ.
ಸಂಜೆ 6 ಗಂಟೆಗೆ ಕೇದಾರನಾಥ ರಾವಲು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಊಖೀಮಠ ಸಾನ್ನಿಧ್ಯದಲ್ಲಿ ನೊಣವಿನಕೆರೆಯ ಕಾಡು ಸಿದ್ದೇಶ್ವರ ಮಠದ ಶ್ರೀ ಡಾ.ಕರಿವೃಷಭ ಶಿವಯೋಗೀಶ್ವರ ಸ್ವಾಮಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಜರುಗಲಿದೆ. ಕಣ್ಣುಕುಪ್ಪೆ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ , ಹೊನ್ನವಳ್ಳಿ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿ , ದೊಡ್ಡಗುಣಿ ಶ್ರೀ ರೇವಣ್ಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರಿನ ಶ್ರೀ ತೇಜೇಶ್ವರ ಸ್ವಾಮೀಜಿ , ನುಗ್ಗೇಹಳ್ಳಿಯ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮಿ, ನೊಣವಿನಕೆರೆಯ ಶ್ರೀ ಅಭಿನವ ಕಾಡಸಿದ್ದೇಶ್ವರ ಕಿರಿಯ ಸ್ವಾಮೀಜಿ, ಕೆ.ಬಿದರೆಯ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಡಿ.ಎಂ.ಕುರ್ಕೆಯ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಮಾಡಾಳು ಶ್ರೀ ಅಭಿನವ ಶಿವಲಿಂಗ ಸ್ವಾಮಿ ಉಪಸ್ಥಿತರಿರುತ್ತಾರೆ.
ಫೆ.11 ರಂದು ಬೆಳಗ್ಗೆ 7.30 ಕ್ಕೆ ಶ್ರೀ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ 1008 ಜಗದ್ಗುರು ಕೇದಾರನಾಥ ರಾವಲು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಇಷ್ಟಲಿಂಗ ಮಹಾಪೂಜೆ ನೆರವೇರಲಿದೆ. ನಂತರ ಮಧ್ಯಾಹ್ನ ಧರ್ಮ ಸಂದೇಶ ಕಾರ್ಯಕ್ರಮ ನಡೆಯಲಿದ್ದು ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಆಹ್ವಾನಿತರಾಗಿ ಗೃಹಮಂಡಳಿ ಅಧ್ಯಕ್ಷ ಶಾಸಕ ಕೆ.ಎಂ.ಶಿವಲಿಂಗೇಗೌಡ , ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ , ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಅರುಣ್‌ಕುಮಾರ್ , ಮಾಜಿ ಶಾಸಕರಾದ ಪ್ರಭುಕುಮಾರ್, ಜಿ.ಎಸ್.ಪರಮೇಶ್ವರಪ್ಪ , ಜೆಡಿಎಸ್ ಮುಖಂಡ ಎನ್ .ಆರ್.ಸಂತೋಷ್ , ವೀರಶೈವ ಸಮಾಜದ ಮುಖಂಡರಾದ ಷಡಕ್ಷರಿ, ಕೆ.ವಿ.ನಿರ್ವಾಣಸ್ವಾಮಿ ಸೇರಿದಂತೆ ಎಲ್ಲ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದು ವೀರಶೈವ ಸಮಾಜ ಅಧ್ಯಕ್ಷ ಜಿ.ಎಸ್.ಮುರುಘೇಂದ್ರಪ್ಪ ಪ್ರಕಣಟೆಯಲ್ಲಿ ತಿಳಿಸಿದ್ದಾರೆ.