ಭಿನ್ನ ಗುಂಪುಗಳಲ್ಲಿ ತವರಿಗೆ ಕೊಹ್ಲಿ ಪಡೆ

ಲಂಡನ್: ಏಳು ವಾರಗಳ ಕಾಲ ಜತೆಯಲ್ಲಿದ್ದ ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ಅಭಿಯಾನವನ್ನು ಸೆಮಿಫೈನಲ್​ನಲ್ಲಿ ಮುಗಿಸಿದ ಬಳಿಕ ಭಿನ್ನ ಭಿನ್ನ ಗುಂಪುಗಳಾಗಿ ತವರಿಗೆ ವಾಪಸಾಗಲಿದ್ದಾರೆ. ಭಾರತದ ಮುಂದಿನ ಅಂತಾರಾಷ್ಟ್ರೀಯ ಸರಣಿ ಎರಡು ವಾರಗಳ ಅಂತರದಲ್ಲಿ ನಡೆಯಲಿದೆ. ಪೂರ್ಣ ಸರಣಿಗಾಗಿ ಭಾರತ ತಂಡ ಜುಲೈ ಕೊನೆಯ ವಾರದಲ್ಲಿ ವೆಸ್ಟ್ ಇಂಡೀಸ್​ಗೆ ಪ್ರಯಾಣ ಬೆಳೆಸಲಿದ್ದು, ಆಗಸ್ಟ್ 3 ರಂದು ಮೊದಲ ಪಂದ್ಯ ನಡೆಯಲಿದೆ. ‘ಲಾಜಿಸ್ಟಿಕ್ಸ್ ಮ್ಯಾನೇಜರ್ ಇಲ್ಲಿನಿಂದ ತಂಡದ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಆಟಗಾರರು ಭಿನ್ನ ಭಿನ್ನ ಗುಂಪುಗಳಲ್ಲಿ ತಮ್ಮ ಆಯ್ದ ಸ್ಥಳ ಹಾಗೂ ಟಿಕೆಟ್​ನ ಲಭ್ಯತೆಯ ಆಧಾರದಲ್ಲಿ ಭಾರತಕ್ಕೆ ವಾಪಸಾಗಲಿದ್ದಾರೆ’ ಎಂದು ಬಿಸಿಸಿಐ ತಿಳಿಸಿದೆ. ಕೆಲ ಆಟಗಾರರು ತಕ್ಷಣವೇ ಭಾರತಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಕೆಳ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ತವರಿಗೆ ಮರಳಲಿದ್ದಾರೆ.

Leave a Reply

Your email address will not be published. Required fields are marked *