21.7 C
Bengaluru
Tuesday, January 21, 2020

ಭಾವೈಕ್ಯದ ಸಂಗಮದಲ್ಲಿ ಜಾತ್ರೆಯ ಸಡಗರ

Latest News

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಮುಂಬೈ ಸಿದ್ಧಿವಿನಾಯಕನಿಗೆ 35 ಕಿಲೋ ಚಿನ್ನ | ದೆಹಲಿ ಮೂಲದ ಉದ್ಯಮಿಯ ಕಾಣಿಕೆಯ ಮೌಲ್ಯ 14 ಕೋಟಿ ರೂಪಾಯಿ!

ಮುಂಬೈ: ಕಳೆದ 200ಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಮುಂಬೈ ಸಿದ್ಧಿವಿನಾಯಕ ದೇವರಿಗೆ ಇದೇ ಮೊದಲ ಬಾರಿಗೆ 35 ಕಿಲೋ ಚಿನ್ನ ಕಾಣಿಕೆ ರೂಪದಲ್ಲಿ...

ಶಿರಹಟ್ಟಿ: ಹಿಂದು-ಮುಸ್ಲಿಂ ಸಾಮರಸ್ಯದ ಸಂಕೇತ, ಭಾವೈಕ್ಯದ ಸಂಗಮ ಶಿರಹಟ್ಟಿಯ ಫಕೀರೇಶ್ವರ ಮಠದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಉಭಯ ಧರ್ಮಗಳ ಸಂಸ್ಕೃತಿ ಸಾರುವ ಪುಣ್ಯ ಕ್ಷೇತ್ರದತ್ತ ಭಕ್ತ ಸಾಗರವೇ ಹರಿದುಬರುತ್ತಿದೆ. ಮೂರು ದಿನಗಳ ಕಾಲ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಗಳು ಶ್ರೀಕ್ಷೇತ್ರದಲ್ಲಿ ಮೇಳೈಸಲಿವೆ.

ಮೇ 18ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದಲ್ಲಿ ಶ್ರೀಮಠದ ಪೀಠಾಧ್ಯಕ್ಷ ಜ. ಫಕೀರಸಿದ್ಧರಾಮ ಶ್ರೀಗಳ ಪಲ್ಲಕ್ಕಿ ಉತ್ಸವ, ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಮೇ 19 ರಂದು ಕಡುಬಿನ ಕಾಳಗ, ಸಂಜೆ 7 ಗಂಟೆಗೆ ಧರ್ಮಸಭೆ, ಮೇ 20ರಂದು ಆಹ್ವಾನಿತ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಳ್ಳಲಿವೆ.

ಅನೇಕ ಸೂಫಿ ಸಂತರು, ಶರಣರು, ದಾರ್ಶನಿಕರ ಪೈಕಿ 16ನೇ ಶತಮಾನದಲ್ಲಿ ಭಕ್ತರ ಏಳ್ಗೆಗೆ ಶ್ರಮಿಸಿದ ಫಕೀರೇಶ್ವರರು ಕೂಡ ಒಬ್ಬರು. ಹಿಂದು-ಮುಸ್ಲಿಮರನ್ನು ಒಗ್ಗೂಡಿಸಿ ಸಾಮರಸ್ಯ ಜೀವನಕ್ಕೆ ನಾಂದಿ ಹಾಡಿದ ಮಹಾನ್ ಸಂತರು. ಫಕೀರೇಶ್ವರರ ಜತೆಗೆ ಶ್ರೀಮಠದಲ್ಲಿ ಕೇಳಿಬರುವ ಮತ್ತೊಂದು ಹೆಸರು ಗುರು ಖ್ವಾಜಾ ಅಮಿನುದ್ದಿನ್ ಅವರದ್ದು. ಈ ಗುರು-ಶಿಷ್ಯರ ಸಂಗಮದಿಂದ ಶ್ರೀಕ್ಷೇತ್ರದ ಖ್ಯಾತಿ ಉತ್ತುಂಗಕ್ಕೇರಿದೆ.

ಶ್ರೀಮಠದ ಮೂಲ ಪುರುಷರಾದ ಫಕೀರೇಶ್ವರರು ಖ್ವಾಜಾ ಅಮಿನುದ್ದಿನ್ ಅವರ ಆಶೀರ್ವಾದದಿಂದ ವಿಜಯಪುರದ ಶಿವಯ್ಯ-ಗೌರಮ್ಮ ದಂಪತಿಗೆ ಜನಿಸಿದವರು. ಚನ್ನವೀರನಾಗಿ ಜನಿಸಿದ ನಂತರ ಸೂಫಿ ಖ್ವಾಜಾ ಅವರ ಅಣತಿಯಂತೆ ಅವರ ಶಿಷ್ಯರಾಗಿ ದರ್ಗಾ ಸೇರಿ ಅಧ್ಯಾತ್ಮದ ಮಾರ್ಗದಲ್ಲಿ ನಡೆದು ಅನೇಕ ಪವಾಡಗಳನ್ನು ಮಾಡಿದರು. ನಾಡಿನಾದ್ಯಂತ ಸಂಚರಿಸಿ ಹಿಂದು-ಮುಸ್ಲಿಮರಲ್ಲಿ ಭಾವೈಕ್ಯದ ಸಂದೇಶ ಸಾರಿದರು. ಕೊನೆಗೆ ಶಿರಹಟ್ಟಿಗೆ ಆಗಮಿಸಿ ಅಲ್ಲಿಯೇ ನೆಲೆ ನಿಂತರು.

ಪೀಠ ಪರಂಪರೆ:ಭಾವೈಕ್ಯತೆಗೆ ಸಾಕ್ಷಿಯಾಗಿರುವ ಶ್ರೀಮಠದ ಗೋಪುರಗಳಲ್ಲಿ ಉಭಯ ಧರ್ಮಗಳ ಸಂಕೇತದ ಕೇಸರಿ ಮತ್ತು ಹಸಿರು ಧ್ವಜಗಳು ರಾರಾಜಿಸುತ್ತಿವೆ. ಮೂಲ ಕರ್ತೃ ಗದ್ದುಗೆ ಕಟ್ಟಡ ಹಿಂದು ಶೈಲಿಯಲ್ಲಿದ್ದರೆ, ದಕ್ಷಿಣಾಭಿಮುಖವಾಗಿರುವ ನಗಾರಖಾನೆ ಕಟ್ಟಡ ಮುಸ್ಲಿಂ ಶೈಲಿಯಲ್ಲಿದೆ. ಜಾತ್ರೆ, ಪಲ್ಲಕ್ಕಿ ಉತ್ಸವ, ಮತ್ತು ಪಟ್ಟಾಭಿಷೇಕ ಮಹೋತ್ಸವದ ವೇಳೆ ಪೀಠಾಧಿಪತಿಗಳು ಉಭಯ ಧರ್ಮಗಳ ಉಡುಗೆ ತೊಟ್ಟು, ದಿಲ್ಲಿ ಬಾದ್​ಷಾ ಹಾಗೂ ಮೈಸೂರು ಮಹಾರಾಜರಿಂದ ಕಾಣಿಕೆಯಾಗಿ ಪಡೆದ ಕಠಾರಿ, ರಣಬಿಲ್ಲೆ, ಶಿರಪೇಚು, ರತ್ನದ ಹಾರ, ಶಲ್ಯ, ಸಿಕ್ಕೆಗಳನ್ನು ಧರಿಸುತ್ತಾರೆ. ಇದುವರೆಗೆ 12 ಪೀಠಾಧೀಶರು ಶ್ರೀಮಠದ ಘನತೆ, ಗೌರವ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. 13ನೇ ಪೀಠಾಧ್ಯಕ್ಷರಾದ ಫಕೀರಸಿದ್ಧರಾಮ ಶ್ರೀಗಳು ಶ್ರೀಮಠದ ಪರಂಪರೆಯಂತೆ ನಾಡಿನಾದ್ಯಂತ ಸಂಚರಿಸಿ ಭಕ್ತರಿಂದ ಪಡೆದ ಕಾಣಿಕೆಯಿಂದ ಮಠದಲ್ಲಿ ಅನೇಕ ಜೀಣೋದ್ಧಾರ ಕೆಲಸ ಮಾಡುತ್ತಿದ್ದಾರೆ. ಜ.ಫಕೀರಸಿದ್ಧರಾಮ ಶ್ರೀಗಳು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೇಲಸಂಗ ಗ್ರಾಮದ ಹಿರೇಮಠದ ಬಸಲಿಂಗ ಶಿವಾಚಾರ್ಯ-ಬಸಲಿಂಗಮ್ಮ ದಂಪತಿಯ ಪುತ್ರರಾಗಿ 1948 ರಲ್ಲಿ ಜನಿಸಿದರು. ಮಲ್ಲಿಕಾರ್ಜುನ ದೇವರು ಎಂದು ನಾಮಾಂಕಿತರಾಗಿ ಕವಿವಿಯಿಂದ ಎಂ.ಎ. ಪದವಿ ಮತ್ತು ಸಂಸ್ಕೃತದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ.

ಕಳಸ ದರ್ಶನದಿಂದ ಶುಭ: ಜಾತ್ರೆಯ ರಥೋತ್ಸವ ನೋಡಲು ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ನೂತನ ದಂಪತಿಗಳು ಇಲ್ಲಿನ ರಥೋತ್ಸವದ ತೇರಿನ ಕಳಸ ದರ್ಶನ ಪಡೆದರೆ ಒಳಿತಾಗುತ್ತದೆ ಎನ್ನುವ ನಂಬಿಕೆ ಇದೆ.

ನಾನು ಹಣತೆ ಮಾತ್ರ. ಅದಕ್ಕೆ ಎಣ್ಣೆ, ಬತ್ತಿಗಳೇನಿದ್ದರೂ ಶ್ರೀಮಠದ ಭಕ್ತರು ಮತ್ತು ದಾನಿಗಳು. ನಾನು ಅಧಿಕಾರ ವಹಿಸಿಕೊಂಡ ಮೇಲೆ ಫಕೀರನಾಗಿ ಜೋಳಿಗೆ ಹಾಕಿಕೊಂಡು ನಾಡಿನಾದ್ಯಂತ ಸಂಚರಿಸಿ ಭಕ್ತರ ಸಹಾಯಹಸ್ತದಿಂದ ಪಡೆದು ತಂದ ಹಣದಿಂದ ಮಠದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ದ್ವೇಷ ಬಿಡು, ಪ್ರೀತಿ ಮಾಡು ಎಂಬ ತತ್ವೋಪದೇಶದ ಮೂಲಕ ಸೇವೆ ಸಲ್ಲಿಸುತ್ತಿದ್ದೇನೆ.
| ಫಕೀರಸಿದ್ಧರಾಮ ಸ್ವಾಮೀಜಿ, ಫಕೀರೇಶ್ವರ ಮಠದ ಪೀಠಾಧ್ಯಕ್ಷರು

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...