ಭಾವೈಕ್ಯದ ಚಾಂಗದೇವನ ಜಾತ್ರೆ

ನವಲಗುಂದ: ಉತ್ತರ ಕರ್ನಾಟಕದ ಹಿಂದು-ಮುಸ್ಲಿಮರ ಭಾವೈಕ್ಯತೆಗೆ ಹೆಸರುವಾಸಿಯಾದ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಯಮನೂರ ಚಾಂಗದೇವನ ಜಾತ್ರೆಗೆ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಭಾನುವಾರ ಚಾಲನೆ ನೀಡಿದರು.

ಮಾ. 24ರಿಂದ ಒಂದು ತಿಂಗಳ ಕಾಲ ಚಾಂಗದೇವನ ಜಾತ್ರೆ (ಉರುಸು) ವಿಜೃಂಭಣೆಯಿಂದ ನಡೆಯಲಿದ್ದು, ಮಾ. 25ರಂದು ಚಾಂಗದೇವನ ಪುಣ್ಯತಿಥಿ ಜರುಗಲಿದೆ.

ಶಾಸಕ ಮುನೇನಕೊಪ್ಪ ಅವರು ಮಾ. 20ರಿಂದ 10 ದಿನಗಳ ಕಾಲ ತಾಲೂಕಿನ ಹಲವು ಗ್ರಾಮಗಳ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ಹಾಗೂ ಯಮನೂರ ಚಾಂಗದೇವನ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಮಲಪ್ರಭಾ ಜಲಾಶಯದಿದ ಕಾಲುವೆಗೆ ನೀರು ಹರಿಸಲಾಗಿದೆ. ಇದರಿಂದ ಸ್ಥಳೀಯ ಬೆಣ್ಣಿಹಳ್ಳದಲ್ಲಿ ನೀರು ಹರಿಯುತ್ತಿರುವುದರಿಂದ ಭಕ್ತರಿಗೆ ಅನುಕೂಲವಾಗಿದೆ. ಚಾಂಗದೇವನ ಜಾತ್ರೆಗೆ ಬರುವ ಭಕ್ತರು ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗಲಿದೆ ಎಂಬ ಪ್ರತೀತಿ ಇದೆ. ಭಾನá-ವಾರ ಜಾತ್ರೆಗೆ ಬಂದ ಭಕ್ತರು ಬೆಣ್ಣಿಹಳ್ಳದಲ್ಲಿ ಸ್ನಾನ ಮಾಡಿ ಚಾಂಗದೇವನ ದರ್ಶನ ಪಡೆದರು.ಶಾಸಕ ಮುನೇನಕೊಪ್ಪ ಸಮ್ಮುಖದಲ್ಲಿ ಚಾಂಗದೇವನ ಪೂಜಾರಿಗಳಾದ ಬರ್ಗೆ ಮನೆತನದವರು ಮತ್ತು ಮುಸ್ಲಿಂ ಧರ್ಮಗá-ರá-ಗಳು ಬೆಣ್ಣಿಹಳ್ಳಕ್ಕೆ ತೆರಳಿ ಅಲ್ಲಿನ ನೀರನ್ನು ತಂದು ಚಾಂಗದೇವರ ಸನ್ನಿಧಿಯಲ್ಲಿ ದೀಪ ಹಚ್ಚಿದರು.

ಯಮನೂರ ಗ್ರಾಮ ಪಂಚಾಯಿತಿ ಭಕ್ತರ ಅನುಕೂಲಕ್ಕಾಗಿ ಎರಡು ಪ್ರತ್ಯೇಕ ಬಸ್ ನಿಲ್ದಾಣದ ವ್ಯವಸ್ಥೆ, ಬೆಣ್ಣಿಹಳ್ಳದ ಮಧ್ಯೆ ಮೂರ್ನಾಲ್ಕು ಕಡೆ ನೀರಿನ ಅರವಟಿಗೆಗಳು, 40ಕ್ಕೂ ಹೆಚ್ಚು ತಾತ್ಕಾಲಿಕ ಶೌಚಗೃಹ, ಮಹಿಳೆಯರಿಗಾಗಿ ಪತ್ಯೇಕ ಟೆಂಟ್ ಅಳವಡಿಕೆ ಸೇರಿ ಅಗತ್ಯ ಸೌಲಭ್ಯ ಒದಗಿಸಿದೆ. ಕಳ್ಳತನ, ದರೋಡೆ, ಮಕ್ಕಳ ಅಪಹರಣ, ಗದ್ದಲ, ಗಲಾಟೆ ಮೊದಲಾದ ಅವಘಡಗಳು ಸಂಭವಿಸದಂತೆ ಪೊಲೀಸರು ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಕೈಗೊಂಡಿದ್ದಾರೆ.

ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ವಾಹನ ದಟ್ಟಣೆ ತಡೆಯಲು ಹಲವು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ಮಾರ್ಗಗಳನ್ನು ಕಲ್ಪಿಸಿದ್ದಾರೆ.

ಕಲಬೆರಕೆ ಮಕ್ತುಂ ಸಕ್ಕರೆ ಮಾರಾಟಕ್ಕೆ ತಡೆ: ಜಾತ್ರೆಯಲ್ಲಿ ಕಲಬೆರಕೆ ಮಕ್ತುಂ ಸಕ್ಕರೆ ಮಾರಾಟ ತಡೆ ಹಿಡಿಯಲಾಗಿದ್ದು, ಆರೋಗ್ಯ ಇಲಾಖೆಯಿಂದ ಪರೀಕ್ಷಿಸಿದ ಮಕ್ತುಂ ಸಕ್ಕರೆಯನ್ನು ಮಾತ್ರ ಮಾರಾಟ ಮಾಡಲು ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆಯಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *