ಬೆಳಗಾವಿ: ನಗರದಲ್ಲಿ ಬುಧವಾರ ಮಧ್ಯಾಹ್ನ ಮಳೆಯಾಗಿದ್ದು, ಕೆಲಹೊತ್ತು ಜನಜೀವನ ಅಸ್ತವ್ಯಸ್ತವಾಯಿತು. ಆಟೋನಗರ, ನ್ಯೂ ಗಾಂಧಿನಗರ, ಕಣಬರಗಿ ರಸ್ತೆಯ ರುಕ್ಮೀಣಿ ನಗರ ಸೇರಿ ನಗರದ ಹಲವು ಕಡೆ ರಸ್ತೆ ಮೇಲೆ ನೀರು ಸಂಗ್ರಹವಾಗಿದ್ದರಿಂದ ವಾಹನ ಸವಾರರಿಗೆ ಅಡಚಣೆಯುಂಟಾಯಿತು.
ತಾಲೂಕಿನ ಬಸ್ತವಾಡದಲ್ಲಿ ಬುಧವಾರ ಸುರಿದ ಭಾರಿ ಮಳೆ-ಗಾಳಿಗೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ಚಾವಣಿ ಮೇಲೆ ಹಾಕಿದ್ದ ತಗಡಿನ ಶೀಟುಗಳು ಮುರಿದುಬಿದ್ದಿವೆ.
ಅದೃಷ್ಟವಶಾತ್ ಶೀಟುಗಳ ಕೊಠಡಿಗಳ ಹಿಂಬದಿ ಬಿದ್ದಿದ್ದರಿಂದ ಕೊಠಡಿಯೊಳಗೆ ಕುಳಿತಿದ್ದ ಮಕ್ಕಳಿಗೆ ಏನು ಅಪಾಯಗಳಾಗಿಲ್ಲ. ತಾಲೂಕಿನ ಹಿರೇಬಾಗೇವಾಡಿ, ಚನ್ನಮ್ಮನ ಕಿತ್ತೂರು, ಹುಕ್ಕೇರಿ, ಚಿಕ್ಕೋಡಿ, ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಬುಧವಾರ ಮಳೆಯಾಗಿದೆ.