ಬಾಗಲಕೋಟೆ: ಭಾರತೀಯ ಸಂಸ್ಕೃತಿಯಿAದ ನಾವುಗಳು ವಿಮುಖರಾಗದೆ ನಮ್ಮತನವನ್ನು ಉಳಿಸಿಕೊಂಡಾಗ ನಮಗೆ ನಮ್ಮ ಪರಂಪರೆಯ ಅರಿವಾಗುತ್ತದೆ.ಅದು ನಮಗೆ ಶಕ್ತಿಯಾಗಿ ನಿಲ್ಲುತ್ತದೆ ಎಂದು ಉಪನ್ಯಾಸಕ ಅನಿಲ ವೈದ್ಯ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ೨೦೨೪-೨೫ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ನಾವುಗಳು ನಮ್ಮತನವನ್ನು ಮರೆತ ಕಾರಣ ನಮ್ಮ ಭಾರತೀಯ ಸಂಸ್ಕೃತಿಯಿAದ ವಿಮುಖರಾಗುತ್ತಿದ್ದೇವೆ. ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿ ಅತಿ ಶ್ರೇಷ್ಠವಾದ್ದು ಎನ್ನುವುದು ಮರೆಯಬಾರದು. ಸಂಸ್ಕೃತಿ, ಸಂಸ್ಕಾರದಿAದ ಪರಂಪರೆಯ ಅರಿವಾಗುತ್ತದೆ. ಅದು ನಮಗೆ ಶಕ್ತಿಯಾಗಿ ನಿಲ್ಲುತ್ತದೆ. ಜ್ಞಾನದಿಂದ ಅಜ್ಞಾನ ಹೊಡದೂಡಿಸಬೇಕು. ಮಕ್ಕಳ ಮೇಲೆ ತಂದೆ ತಾಯಿಗಳು ತುಂಬಾನೆ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೆತ್ತವರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಎಲ್ಲರನ್ನು ಸದಾಕಾಲ ಪ್ರೀತಿಯಿಂದ ಗೌರವಿಸಬೇಕು. ಮಾತೃ ದೇವೋಭವ, ಪಿತೃ ದೇವೋಭವ, ಗುರುದೇವೋಭವ ನಮ್ಮ ಸಂಸ್ಕೃತಿಯಲ್ಲಿ ತಿಳಿಸಿದ್ದಾರೆ. ಶಾಂತಿ, ಹೃದಯದಲ್ಲಿ ಪ್ರೀತಿ, ಬಾಯಲ್ಲಿ ಸಿಹಿ ತುಂಬಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸತತ ಪರಿಶ್ರಮವೇ ನಮ್ಮ ಸಾಧನೆಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು.
ಹೈಸ್ಕೋಲ್ ಆಡಳಿತ ಮಂಡಳಿ ಸದಸ್ಯ ಶರಣ ನಾವಲಗಿ, ರಾಜು ಪಾಟೀಲ ಇದ್ದರು. ಎಸ್.ಕೆ.ರಾಠೋಡ ಸ್ವಾಗತಿಸಿದರು. ಕೆ.ಎಚ್.ಹೊಸೂರ ವಂದಿಸಿದರು. ಎಂ.ಎಸ್.ಹಿರೇಮಠ ಹಾಗೂ ಆರ್.ವಿ.ಮುದಿಯಪ್ಪನವರಮಠ ನಿರೂಪಿಸಿದರು.