ಭಾರತಕ್ಕೆ ಕೆನಡ ಸವಾಲು

ಲಖನೌ: ಎಫ್ಐಎಚ್ ಜೂನಿಯರ್(21 ವಯೋಮಿತಿ) ಹಾಕಿ ವಿಶ್ವಕಪ್ 11ನೇ ಆವೃತ್ತಿಗೆ ಗುರುವಾರ ಚಾಲನೆ ಸಿಗಲಿದ್ದು, ಆತಿಥೇಯ ಭಾರತ ತಂಡ ಮೊದಲ ಪಂದ್ಯದಲ್ಲಿ ದುರ್ಬಲ ಕೆನಡ ವಿರುದ್ಧ ಸೆಣಸಲಿದೆ. 2001ರ ವಿಶ್ವಕಪ್ ಗೆಲುವಿನ ಸಾಧನೆ ಪುನರಾವರ್ತಿಸುವ ಗುರಿ ಹೊಂದಿರುವ ಭಾರತ, ಟೂರ್ನಿಯ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಹಾಲಿ ಚಾಂಪಿಯನ್ ಜರ್ಮನಿ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಹೊಸದಾಗಿ ನಿರ್ವಿುಸಲಾಗಿರುವ ಮೇಜರ್ ಧ್ಯಾನ್ಚಂದ್ ಆಸ್ಟ್ರೋಟರ್ಫ್ ಕ್ರೀಡಾಂಗಣದಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ.

16 ತಂಡಗಳ ಟೂರ್ನಿಯಲ್ಲಿ ಭಾರತ ಡಿ ಗುಂಪಿ ನಲ್ಲಿದ್ದು, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಿಂದ ಪೈಪೋಟಿ

ಎದುರಿಸುವ ನಿರೀಕ್ಷೆ ಇದೆ. ಕಳೆದ ಅಕ್ಟೋಬರ್ನಲ್ಲಿ ವಲೆನ್ಸಿಯಾದಲ್ಲಿ ನಡೆದ ಟೂರ್ನಿಯಲ್ಲಿ ಬಲಿಷ್ಠ ಜರ್ಮನಿ, ಬೆಲ್ಜಿಯಂ, ಸ್ಪೇನ್ ತಂಡಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದಿರುವುದು ಹರ್ಜೀತ್ ಸಿಂಗ್ ಪಡೆಯ ಮೇಲೆ ಹೆಚ್ಚಿನ ಭರವಸೆ ಹುಟ್ಟಿಸಿದೆ. ಹಾಕಿ ಇಂಡಿಯಾ ಲೀಗ್ನಲ್ಲಿ ವಿಶ್ವದ ಪ್ರಮುಖ ಆಟಗಾರರೊಂದಿಗೆ ಆಡಿರುವ ಹಲವು ಆಟಗಾರರು ಭಾರತ ತಂಡದಲ್ಲಿರುವುದು ಅನುಭವಿ ತಂಡ ರೂಪಿಸುವಂತೆ ಮಾಡಿದೆ. -ಏಜೆನ್ಸೀಸ್

ಇಂದಿನ ಪಂದ್ಯಗಳು

ನ್ಯೂಜಿಲೆಂಡ್-ಜಪಾನ್

ಆರಂಭ: ಬೆಳಗ್ಗೆ 11.30

ಜರ್ಮನಿ-ಸ್ಪೇನ್

ಆರಂಭ: ಮಧ್ಯಾಹ್ನ 1.30

ಇಂಗ್ಲೆಂಡ್-ದಕ್ಷಿಣ ಆಫ್ರಿಕಾ

ಆರಂಭ: ಮಧ್ಯಾಹ್ನ 3.30

ಭಾರತ-ಕೆನಡ

ಆರಂಭ: ಸಂಜೆ 7.00

ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್4

2001ರ ಸಾಧನೆ ಪುನರಾವರ್ತಿಸುವುದು ತಂಡದ ಎಲ್ಲ ಆಟಗಾರರ ಗುರಿ. ಪದಕ ವೇದಿಕೆಗಿಂತ ಕಡಿಮೆ ಸಾಧನೆಯನ್ನು ಒಪ್ಪಿಕೊಳ್ಳಲು ತಂಡದ ಸದಸ್ಯರು ಸಿದ್ಧರಿಲ್ಲ. | ಹರೇಂದ್ರ ಸಿಂಗ್ ಭಾರತ

ಜೂನಿಯರ್ ತಂಡದ ಕೋಚ್

 

ಹರ್ಜೀತ್ ಸಿಂಗ್ ಸಾರಥ್ಯ

15 ವರ್ಷಗಳ ಬಳಿಕ ಮತ್ತೆ ವಿಶ್ವಕಪ್ ಎತ್ತುವ ಕನಸು ಕಟ್ಟಿಕೊಂಡಿರುವ ಆತಿಥೇಯ ಭಾರತ ತಂಡವನ್ನು ಪಂಜಾಬ್ನ ಹರ್ಜೀತ್ ಸಿಂಗ್ ಮುನ್ನಡೆಸಲಿದ್ದಾರೆ. 20 ವರ್ಷದ ಮಿಡ್ ಫೀಲ್ಡರ್ ಹರ್ಜಿತ್ ಅಜ್ಲಾನ್ ಷಾ ಕಪ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಸೀನಿಯರ್ ತಂಡದ ಪರ ಆಡಿದ ಅನುಭವವನ್ನೂ ಹೊಂದಿದ್ದಾರೆ. ಒಡಿಶಾದ ಡಿಫೆಂಡರ್ ಡಿಪ್ಸಾನ್ ಟಿರ್ಕಿ ತಂಡದ ಉಪನಾಯಕ. 2016ರ ಎಫ್ಐಎಚ್ ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಡ್ರ್ಯಾಗ್ ಫ್ಲಿಕರ್ ಹರ್ವನ್ಪ್ರೀತ್ ಸಿಂಗ್ ತಂಡದ ಪ್ರಮುಖ ಬಲವಾಗಿದ್ದಾರೆ. ಸ್ಟ್ರೈಕರ್ ಮಂದೀಪ್ ಸಿಂಗ್ ಕಳೆದ ಜೂ. ವಿಶ್ವಕಪ್ನಲ್ಲೂ ಆಡಿರುವ ಅನುಭವಿ. ರಿಯೋ ಒಲಿಂಪಿಕ್ಸ್ನಲ್ಲೂ ಭಾಗವಹಿಸಿದ್ದ ವಿಕಾಸ್ ದಹಿಯಾ ತಂಡದ ಗೋಲ್ ಕೀಪರ್.

Leave a Reply

Your email address will not be published. Required fields are marked *