ಭವಿಷ್ಯ ಮಂಕು ಮಾಡಿದ ವರುಣ

Latest News

ಮಾದಪ್ಪನ ಸನ್ನಿಧಿಯಲ್ಲಿ ಸಂಗ್ರಹವಾಯ್ತು ಭಾರಿ ಮೊತ್ತ: ಬೆಟ್ಟದೊಡೆಯನ ಹುಂಡಿಗೆ ಹರಿದುಬಂತು ಕೋಟಿ ರೂಪಾಯಿ ಕಾಣಿಕೆ!

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ತೀರ್ಥಕ್ಷೇತ್ರ ಮಲೆಮಹದೇಶ್ವರಬೆಟ್ಟದ ಹುಂಡಿಯಲ್ಲಿ ಪ್ರತಿ ತಿಂಗಳು ದಾಖಲೆಯ ಮೊತ್ತ ಸಂಗ್ರಹವಾಗುತ್ತಿದೆ. ಎಪ್ಪತ್ತೇಳು ಮಲೆಗಳ ಒಡೆಯ ಮಾದಪ್ಪ ಮತ್ತೆ ಕೋಟ್ಯಾಧೀಶರಾಗಿದ್ದಾರೆ....

ಅಸಲಿ ಪೊಲೀಸರಿಗೆ ಸೆರೆಸಿಕ್ಕ ನಕಲಿ ಅಧಿಕಾರಿ: ಉದ್ಯಮಿಗೆ ಬೆದರಿಸಿ 24 ಲಕ್ಷ ರೂ. ಸುಲಿಗೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಬೆಂಗಳೂರು: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಬೆದರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್​ಎಎಲ್...

ಯುವಕನ ಕೊಲೆ ಮಾಡಿದ್ದ ದಂಪತಿ ಬೆಳಗಾವಿಯಲ್ಲಿ ಸೆರೆ

ಆನೇಕಲ್: ಖಾಸಗಿ ಸಂಸ್ಥೆಯ ಉದ್ಯೋಗಿ ಭದ್ರಾವತಿಯ ಕಿರಣ್ ಕುಮಾರ್ (25) ಕೊಲೆ ಪ್ರಕರಣ ಭೇದಿಸಿರುವ ಜಿಗಣಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾವಣಗೆರೆಯ ಸುರೇಖಾ (38)...

ತನ್ನದಲ್ಲದ ತಪ್ಪಿಗೆ ದಂಡ ಕಟ್ಟಿದ ಟೆಕ್ಕಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ 4 ವರ್ಷ ಕಾರು ಓಡಿಸಿದ್ದ, ಆರ್​ಟಿಒ ವಶದಲ್ಲಿ ಉದ್ಯಮಿ

ಬೆಂಗಳೂರು: ಪರಿಚಿತರೊಬ್ಬರ ಬೆನ್ಜ್ ಕಾರಿನ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು 7 ವರ್ಷಗಳಿಂದ 27 ಲಕ್ಷ ರೂ. ತೆರಿಗೆ ವಂಚಿಸಿ ಓಡಾಡುತ್ತಿದ್ದ ಮರ್ಸಿಡೀಸ್...

ಅಕ್ರಮ ಸಂಪತ್ತಿಗೆ ಅಧಿಕಾರಿಗಳ ಕಾವಲು

| ರಮೇಶ ದೊಡ್ಡಪುರ ಬೆಂಗಳೂರು ನಗರ ಪ್ರದೇಶದಲ್ಲಿ ವಸತಿ, ವಾಣಿಜ್ಯ ಪ್ರದೇಶಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ರಚಿಸಲಾಗಿರುವ ಕಾನೂನು ಪಾಲಿಸಿ ಅಕ್ರಮ ಕಟ್ಟಡಗಳಿಗೆ ಬ್ರೇಕ್ ಹಾಕಬೇಕಾದ...

ಹುಬ್ಬಳ್ಳಿ: ಒಂದೆಡೆ ಸರ್ಕಾರಿ ನೌಕರಿ ಕೈ ಬೀಸಿ ಕರೆಯುತ್ತಿದೆ. ಆದರೆ, ಶಾಲಾ ದಾಖಲಾತಿಗಳೆಲ್ಲವೂ ಮಳೆ ನೀರಿಗೆ ತೊಯ್ದು ತೊಪ್ಪೆಯಾಗಿವೆ. ತಮಗೆ ನೌಕರಿ ಸಿಗುತ್ತದೋ ಇಲ್ಲವೋ ಎನ್ನುವ ಆತಂಕ ಮನೆ ಮಾಡಿದೆ. ಇದು ನಗರದ ನ್ಯೂ ಇಂಗ್ಲಿಷ್ ಶಾಲೆ ಬಳಿಯ ಹಳೇ ಮ್ಯಾದಾರ ಓಣಿ ಪ್ರದೇಶದ ಚಿತ್ರಲೇಖಾ ಸವಣೂರು, ಮನೋಹರ ಸೇರಿ ಹಲವರ ಪಡಿಪಾಟಲು.

ಸರ್ಕಾರಿ ನೌಕರಿಗಾಗಿ ಬೆಳಗಾವಿ, ದಾವಣಗೆರೆ, ಮೈಸೂರು ಜಿಲ್ಲಾ ಕೋರ್ಟ್ ಸೇರಿ ಕೆಲವೆಡೆ ಅರ್ಜಿ ಹಾಕಿದ್ದಾರೆ. ಆದರೆ, ವರುಣನ ಅವಕೃಪೆಗೆ ಹಳ್ಳದ ನೀರು ಮನೆಗಳಿಗೆ ನುಗ್ಗಿ ಶಾಲಾ ದಾಖಲಾತಿಗಳೆಲ್ಲವೂ ನೀರು ಪಾಲಾಗಿವೆ. ಕೆಲವು ಕೈಗೆ ದಕ್ಕಿದ್ದರೂ ಅವುಗಳಲ್ಲಿರುವ ಹೆಸರು, ದಾಖಲಾತಿ ಸಂಖ್ಯೆ, ಪಡೆದ ಅಂಕಗಳು ಸೇರಿ ಇತರೆ ಮಾಹಿತಿ ಕಣ್ಣಿಗೆ ಕಾಣದಂತಾಗಿವೆ. ಭವಿಷ್ಯ ಹೇಗೆಂಬ ಆತಂಕ ಅಭ್ಯರ್ಥಿಗಳನ್ನು ಕಾಡತೊಡಗಿದೆ. ಆಧಾರ್ ಕಾರ್ಡ್, ವೋಟರ್ ಕಾರ್ಡ್, ಬ್ಯಾಂಕ್ ಪುಸ್ತಕ, ಪ್ಯಾನ್ ಕಾರ್ಡ್​ಗಳೂ ನೀರಿಗೆ ಆಹುತಿಯಾಗಿವೆ. ಸರ್ಕಾರಿ ನೌಕರಿ ಸಿಗುವುದೇ ದುಸ್ತರ ಇರುವಾಗ ಶಾಲಾ ದಾಖಲಾತಿ ಇಲ್ಲದ್ದರಿಂದ ಸಂದರ್ಶನಕ್ಕೆ ಒಳಗೆ ಬಿಡುತ್ತಾರೋ ಇಲ್ಲವೋ? ಬಿಟ್ಟರೆ ದಾಖಲಾತಿ ಇಲ್ಲದ್ದು ನೋಡಿ ನೌಕರಿ ಇಲ್ಲವೆಂದು ಮರಳಿ ಕಳುಹಿಸಿದರೆ ಹೇಗೆ? ಎಂಬ ಆತಂಕ ಚಿತ್ರಲೇಖಾಗೆ ಕಾಡುತ್ತಿದೆ. ಬಿಕಾಂ ಓದಿರುವ ಸಂಜಯನದ್ದೂ ಇದೇ ಪರಿಸ್ಥಿತಿ. ಉದ್ಯೋಗ ವಿನಿಮಯ ಕೇಂದ್ರಕ್ಕೆ ಹೆಸರು ದಾಖಲಿಸಿದ್ದು, ನೌಕರಿಗಾಗಿ ದಾರಿ ಕಾಯುತ್ತಿದ್ದಾನೆ.

ಪುಸ್ತಕಗಳೆಲ್ಲ ನೀರು ಪಾಲು: ಎಲ್​ಕೆಜಿ ಕಲಿಯಲು ಮಹಾರಾಷ್ಟ್ರದಿಂದ ಬಂದಿರುವ ಜಾಹ್ನವಿಯ ಪುಸ್ತಕಗಳೆಲ್ಲ ನೀರು ಪಾಲಾಗಿವೆ. 10ನೇ ತರಗತಿ ಓದುತ್ತಿರುವ ಬಹಳಷ್ಟು ವಿದ್ಯಾರ್ಥಿಗಳ ಪುಸ್ತಕ, ನೋಟ್​ಪುಸ್ತಕ, ಅಂಕಪಟ್ಟಿಗಳು ನೀರು ಪಾಲಾಗಿವೆ. ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಬೇಕೆಂದರೆ ಪುಸ್ತಕಗಳೇ ಇಲ್ಲ. ಉತ್ತಮ ಅಂಕಗಳಿಸಲು ನಮಗೆ ಸಾಧ್ಯವೇ? ಎಂದು ಪ್ರಶ್ನೆ ಮಾಡುತ್ತಾಳೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸೃಷ್ಟಿ ಅಮ್ಮಿನಬಾವಿ.

ಸರ್ಕಾರಿ ಸೌಲಭ್ಯ ಸಿಗದಂತಾಗಿದೆ: ಆಧಾರ್ ಕಾರ್ಡ್ ಮಾಡಿಸಲು ಅದೆಷ್ಟೋ ದಿನಗಳನ್ನು ಕಳೆದಿದ್ದಾರೆ. ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್, ವೋಟರ್ ಕಾರ್ಡ್, ಪ್ಯಾನ್ ಕಾರ್ಡ್ ಅಗತ್ಯ. ಆದರೆ, ಅವುಗಳೆಲ್ಲವೂ ಹುಡುಕಲು ಸಿಗುತ್ತಿಲ್ಲ. ಇವು ಇಲ್ಲದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Stay connected

278,673FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...