ಎನ್.ಆರ್.ಪುರ: ಯಾವುದೇ ಭಯವಿಲ್ಲದೆ ರಕ್ತದಾನ ಮಾಡಬೇಕು ಎಂದು ರಕ್ತದಾನಿ ಅಭಿನವ ಗಿರಿರಾಜ್ ಹೇಳಿದರು.
ಪಟ್ಟಣದ ರೋಟರಿ ಕ್ಲಬ್ ಕಚೇರಿಯಲ್ಲಿ ನಡೆದ ವಾರದ ಸಭೆಯ ವಿಶೇಷ ಅತಿಥಿಯಾಗಿ ರಕ್ತದಾನದ ಮಾಹಿತಿ ನೀಡಿ, ರಕ್ತದ ಪ್ರಭೇದ ಕಂಡುಹಿಡಿದ ಕಾರ್ಲ್‌ಲ್ಯಾಂಡ್ ಸ್ಟೇನರ್ ಹುಟ್ಟುಹಬ್ಬ ಜೂ.14ರಂದು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತಿದೆ. ರಕ್ತದಾನ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ್ ಮಾತನಾಡಿ, 103 ಬಾರಿ ರಕ್ತದಾನ ಮಾಡಿರುವ ಅಭಿನವ ಗಿರಿರಾಜ್ ಮಾದರಿ ಎಂದರು. ರೋಟರಿ ನಿಯೋಜಿತ ಅಧ್ಯಕ್ಷ ಕಣಿವೆ ವಿನಯ್, ಎಚ್.ಡಿ.ವಿನಯ್, ಮಧು, ಡಿ.ಸಿ.ದಿವಾಕರ್, ಎಸ್.ಎಸ್.ಶಾಂತ್‌ಕುಮಾರ್, ಸುಂದರೇಶ್, ಲೋಕೇಶ್, ಜೋಯಿ, ವಿಜಯ್‌ಕುಮಾರ್ ಇತರರಿದ್ದರು.