ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 2-3 ಕಂತುಗಳಲ್ಲಿ 5300 ಕೋಟಿ ರೂ.ಅನುದಾನ ಬಿಡುಗಡೆ ಆಗಲಿದೆ. ಒಂದೂವರೆ ತಿಂಗಳ ಒಳಗೆ ಮೊದಲ ಕಂತು ಬಿಡುಗಡೆಯಾಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿ, ಅನುದಾನ ಬಿಡುಗಡೆಗೆ ಕೋರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಚರ್ಚಿಸಲಾಗಿದೆ ಎಂದರು.
ಮೂರು ಕಂತುಗಳಲ್ಲಿ ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಕೆಲವು ತಾಂತ್ರಿಕ ಮಾಹಿತಿಗೆ ರಾಜ್ಯಸರ್ಕಾರವನ್ನು ಕೋರಲಾಗಿದ್ದು, ಮಾಹಿತಿ ಕೈ ಸೇರುತ್ತಿದ್ದಂತೆ ಅನುದಾನ ಲಭ್ಯವಾಗಲಿದೆ. ಚಿತ್ರದುರ್ಗ ಬರದ ಬವಣೆ ಅರಿವಿದೆ. ವಾಣಿವಿಲಾಸ ಸಾಗರ ಭರ್ತಿ ಕಷ್ಟವಿತ್ತು. ಭದ್ರಾದಿಂದಾಗಿ ಈಗ ತುಂಬುತ್ತಿದೆ. ನಾನೂ ರೈತನ ಮಗನಾಗಿದ್ದು, ಕೇಂದ್ರದ ಅನುದಾನ ಬಿಡುಗಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಅನುಭವಿ ಸಂಸದ ಗೋವಿಂದ ಎಂ.ಕಾರಜೋಳ ಮುಂದಾಳತ್ವದಲ್ಲಿ ಅನುದಾನ ಹರಿದು ಬರಲಿದೆ ಎಂದರು.
ಮನವಿ ಸಲ್ಲಿಸಿ ಮಾತನಾಡಿದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಸರ್ಕಾರಗಳ ಅಸಹಕಾರ ಧೋರಣೆಯಿಂದಾಗಿ ಯೋಜನೆ ಕುಂಟುತ್ತಾ ಸಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರದ ಅನುದಾನಕ್ಕೆ ಕಾದು ರಾಜ್ಯಕೈ ಚೆಲ್ಲಿ ಕುಳಿತಿದೆ. ಕೇಂದ್ರವೂ ಉದಾಸೀನ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಲಶಕ್ತಿ ಸಚಿವರಾಗಿ ಸೋಮಣ್ಣ ನಿಯೋಜನೆಗೊಳ್ಳುತ್ತಿದ್ದಂತೆ ರೈತರಲ್ಲಿ ಆಶಾ ಭಾವನೆ ಮೂಡಿತ್ತು. ಯೋಜನಾ ವ್ಯಾಪ್ತಿಗೆ ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ತಾಲೂಕು ಸೇರಿದೆ. ಹಾಗಾಗಿ, ಯೋಜನೆ ತ್ವರಿತ ಅನುಷ್ಠಾನಕ್ಕೆ ಕ್ರಮ ವಹಿಸವಂತೆ ಸಚಿವರಿಗೆ ಮನವಿ ಮಾಡಿದರು.
ಪ್ರಧಾನಿ ಮೋದಿ ಚಿತ್ರದುರ್ಗ ನೆಲದಲ್ಲಿ ಅನುದಾನ ಘೋಷಿಸಿದ್ದರು. ರಾಷ್ಟ್ರೀಯ ಯೋಜನೆ ನಾಮಕರಣ ಮಾಡಿದ್ದರೆಂದು ಸಚಿವರ ಗಮನ ಸೆಳೆದರು.
ಸಂಸದ ಗೋವಿಂದ ಎಂ. ಕಾರಜೋಳ, ಶಾಸಕ ಡಾ.ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್. ನವೀನ್,ಕೆ.ಆರ್. ದಯಾನಂದ, ಚಿಕ್ಕಪ್ಪನಹಳ್ಳಿ ಷಣ್ಮುಖ, ಕೆ.ಪಿ. ಭೂತಯ್ಯ, ಹಂಪಯ್ಯನ ಮಾಳಿಗೆ ಧನಂಜಯ, ಕೆ.ಸಿ. ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್‌ಬಾಬು, ಜೆ.ಯಾದವ ರೆಡ್ಡಿ, ಹುಣಿಸೆಕಟ್ಟೆ ಕಾಂತರಾಜ್, ಸಜ್ಜನಕೆರೆ ರೇವಣ್ಣ, ಓಂಕಾರಪ್ಪ, ಹುಣಿಸೆಕಟ್ಟೆ ಮಹಂತೇಶ್, ಕೆಂಚಪ್ಪ ಕಳ್ಳಿರೊಪ್ಪ, ಜಿ.ಬಿ. ಶೇಖರ್‌ಮತ್ತಿತರರು ಇದ್ದರು.
ಭದ್ರಾ ಯೋಜನೆಗೆ ಒಂದೂವರೆ ತಿಂಗಳಲ್ಲಿ ಅನುದಾನ
ಸೀಬೆಹಣ್ಣನ್ನು ಯಾರು ತಿನ್ನುವಂತಿಲ್ಲ? ಒಂದು ವೇಳೆ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Guava
ಸೀಬೆಹಣ್ಣು ( Guava ) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಹಣ್ಣನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ…
ಸೈಕಾಲಜಿ ಪ್ರಕಾರ ಈ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ಹೆಚ್ಚು ಹಣ ಸಂಪಾದನೆ ಮಾಡ್ತಾರೆ! Money
Money : ಇಂದು ಹಣವಿಲ್ಲದೆ ಯಾವುದಕ್ಕೂ ಬೆಲೆ ಇಲ್ಲ ಮತ್ತು ಯಾವ ಕೆಲಸವು ಕೂಡ ನಡೆಯುವುದಿಲ್ಲ.…
Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ನಾಲ್ಕು ವಸ್ತುಗಳನ್ನು ಇಟ್ಟರೆ ಯಶಸ್ಸು ನಿಮ್ಮದೇ….!
Vastu Tips : ಮನೆಯ ಮುಖ್ಯ ಬಾಗಿಲನ್ನು ಸಂತೋಷದ ಬಾಗಿಲು ಎಂದು ಪರಿಗಣಿಸಲಾಗುತ್ತದೆ. ಇಲ್ಲಿಂದ ಎಲ್ಲರಿಗೂ…