ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಬಿಸುವ ಕೆರೆ ಮಾರ್ಗದಲ್ಲಿ ಬದಲಾವಣೆ ಮಾಡದಿರಲು ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧಾರ

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಬಿಸುವ ಕೆರೆಗಳ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಜೂನ್ 17ರಂದು ಪ್ರತಿಭಟನೆ ನಡೆಸಲಾಗುವುದೆಂದು ಸಂಘದ ರಾಜ್ಯ ಪ್ರಧಾನ ಕಾರ‌್ಯದರ್ಶಿ ಟಿ.ನುಲೇನೂರು ಶಂಕ್ರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗ ಸಮೀಪದ ಮಲ್ಲಾಪುರ, ಕಾತ್ರಾಳು, ಮುದ್ದಾಪುರ, ಯಳಗೋಡು ಹಾಗೂ ಸುಲ್ತಾನಿ ಪುರ ಕೆರೆಗಳನ್ನು ನೀರು ತುಂಬಿಸಲು ಯೋಜಿಸಲಾಗಿದೆ. ಆದರೆ ಇತ್ತೀಚೆಗೆ ಜಗಳೂರು ತಾಲೂಕು ರೈತರು ಮಾರ್ಗ ಬದಲಾವಣೆಗೆ ಪಟ್ಟು ಹಿಡಿದು ನೇರವಾಗಿ ಜಗಳೂರು ತಾಲೂಕಿನ ಸಂಗನೇಹಳ್ಳಿ ಮೊದಲಾದ ಕೆರೆಗಳಿಗೆ 2.4 ಟಿಎಂಸಿ ಸಂಪೂರ್ಣ ನೀರನ್ನು ಒದಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಆದರೆ ಕೆ.ಸಿ.ರೆಡ್ಡಿ ವರದಿಯಂತೆ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದಿದ್ದರೂ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿ ಕೊನೆ ದಿನಗಳಲ್ಲಿ ಮಾರ್ಗ ಬದಲಾವಣೆ ಕುರಿತಂತೆ ನೀರಾವರಿ ತಜ್ಞ ದೇಸಾಯಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಒಂದು ಸಭೆ ನಡೆಸಿರುವ ಸಮಿತಿ ಈವರೆಗೆ ವರದಿ ಕೊಟ್ಟಿಲ್ಲ.

ಜೂ.18ರಂದು ಮತ್ತೆ ಸಭೆ ಸೇರಲಿದೆ ಎಂದು ಗೊತ್ತಾಗಿದೆ. ಭದ್ರಾಮೇಲ್ದಂಡೆ ಯೋಜನೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆರೆಗಳ ಹೂಳೆತ್ತುವ ಹಾಗೂ ಒತ್ತುವರಿ ತೆರವುಗೊಳಿಸಬೇಕೆಂದರು. ಮುಖಂಡರಾದ ಸುರೇಶ್‌ಬಾಬು,ರುದ್ರಸ್ವಾಮಿ ಮೊದಲಾದವರು ಇದ್ದರು.
—–

Leave a Reply

Your email address will not be published. Required fields are marked *