More

  ಭದ್ರಾ ಡ್ಯಾಂನಿಂದ 5ರಿಂದಲೇ ನೀರು ಹರಿಸಿ  -ಭಾರತೀಯ ರೈತ ಒಕ್ಕೂಟ ಆಗ್ರಹ

  ದಾವಣಗೆರೆ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಆಗಸ್ಟ್ 5 ರಿಂದ ನೀರು ಹರಿಸುವಂತೆ ಭಾರತೀಯ ರೈತ ಒಕ್ಕೂಟದ ಮುಖಂಡ ಎಚ್.ಆರ್. ಶಾಮನೂರು ಲಿಂಗರಾಜ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
  ಮಳೆ ತಡವಾಗಿ ಆರಂಭವಾದರೂ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಬಿತ್ತನೆ ಆರಂಭಿಸಿದ್ದು , ನಾಟಿ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ತಪ್ಪಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸಭೆ ನಡೆಸಿ , ಭದ್ರಾ ನಾಲೆಗೆ ನೀರು ಬಿಡಲು ಕ್ರಮ ಕೈಗೊಳ್ಳಬೇಕು. ಅಚ್ಚುಕಟ್ಟು ರೈತರ ಹಿತಾಸಕ್ತಿ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಮುಂದೆ ಉತ್ತಮ ಮಳೆಯಾಗುವ ಸೂಚನೆ ಇರುವುದರಿಂದ ನೀರು ಹರಿಸಬೇಕು.
  ಭದ್ರಾ ಕಾಡಾ ಸಮಿತಿ ರಚನೆಗೂ , ಭದ್ರಾ ಜಲಾಶಯದಿಂದ ನೀರು ಬಿಡುವುದಕ್ಕೂ ಸಂಬಂಧವಿಲ್ಲ. ಮೊದಲು ನೀರು ಬಿಡಬೇಕು. ನಂತರ ಭದ್ರಾ ಕಾಡಾ ಸಮಿತಿ ರಚನೆಯಾಗಲಿ ಎಂದು ಹೇಳಿದ್ದಾರೆ. ಕೆರೆಬಿಳಚಿ ಬಳಿ ಭದ್ರಾ ಕಾಲುವೆಯ ದುರಸ್ತಿ ಕಾರ್ಯ ಚುರುಕಾಗಿ ಮುಗಿಸಬೇಕು. ಇದರಿಂದ ಪೋಲಾಗುವ ನೀರನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts