ಭಟ್ಕಳ: ಪಟ್ಟಣದಲ್ಲಿ ನಸುಕಿನ ಜಾವ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಒರ್ವ ಆರೋಪಿ ಹಾಗೂ ಶಂಕಿತನನ್ನುವಶಕ್ಕೆ ಪಡೆದು ಶಾಕ್ ನೀಡಿದೆ.
ಭಟ್ಕಳ ಪಟ್ಟಣ ನಿವಾಸಿ ಅಬ್ದುಲ್ ಮುಕ್ತದೀರ್ ಬಂಧಿತ ಆರೋಪಿ. ಹಾಗೂ ಆತನ ಸಹೋದರನನ್ನು ಕೂಡ ಎನ್‌ಐಎ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಭಾನುವಾರ ನಸುಕಿನ ೪..೦೦ವೇಳೆ ಸ್ಥಳೀಯ ಪೊಲೀಸರ ಸಹಕಾರದಿಂದ ಆರೋಪಿ ಮುಕ್ತದಾರ ಮನೆಗೆ ಎನ್‌ಐಎ ದಾಳಿ ನಡೆಸಿದೆ. ಐಎಸ್‌ಐಎಸ್ ಸಂಪರ್ಕ ಹಿನ್ನಲೆಯಲ್ಲಿ ಆರೋಪಿ ಹಾಗೂ ಶಂಕಿತನನ್ನು ಎನ್‌ಐಎ ವಿಚಾರಣೆ ನಡೆಸುತ್ತಿದೆ. ಐಎಸ್ ಐ ಎಸ್ ಬರಹಗಳನ್ನು ಭಾಷಾಂತರ ಮಾಡುತ್ತಿದ್ದ ಶಂಕೆ ವ್ಯಕ್ತವಾಗಿದ್ದು ಚಿನ್ನದ ಪಳ್ಳಿಯ ಬಳಿಯ ಹೆಂಡತಿ ಮನೆಯಲ್ಲಿ ಇರುವಾಗಲೆ ಗುಪ್ತಚರ, ಸ್ಥಳೀಯ ಪೊಲೀಸರ ಸಹಕಾರದಿಂದ ದಾಳಿ ನಡೆಸಲಾಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಎನ್‌ಐಎ ದಾಳಿ ನಡೆಸಿದ ಬೆನ್ನಲ್ಲೆ ಭಟ್ಕಳಕ್ಕೂ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿರುವದು ಕೂತುಹಲಕ್ಕೆ ಕಾರಣವಾಗಿದೆ. ಒಂದು ವರ್ಷದಲ್ಲಿ ಎನ್‌ಐಎ ಭಟ್ಕಳಕ್ಕೆ ಎರಡನೆ ಬಾರಿ ದಾಳಿ ನಡೆಸುತ್ತಿದ್ದು ಭಟ್ಕಳ ಮತ್ತೊಮ್ಮೆ ಬೆಚ್ಚಿಬೀಳುವಂತಾಗಿದೆ.
