ಭಗವಾನ್ ವಿರುದ್ಧ ಗೂಂಡಾ ಕಾಯ್ದೆ ಯಡಿ ಕೇಸ್ ದಾಖಲಿಸಿ

ಮದ್ದೂರು: ಪ್ರೊ.ಕೆ.ಎಸ್.ಭಗವಾನ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಹಿಂದು ಜಾಗರಣಾ ವೇದಿಕೆ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಭಗವಾನ್ ದೇಶದ್ರೋಹಿ ಹಾಗೂ ಹಿಂದು ಧರ್ಮ ವಿರೋಧಿ ಎಂದು ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಮತ್ತು ಇವರ ವಿರುದ್ಧ ಗೂಂಡಾ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಬೇಕೆಂದು ಒತ್ತಾಯಿಸಿದರು.
ಬಳಿಕ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿದ ವೇದಿಕೆ ಕಾರ್ಯಕರ್ತರು, ಭಗವಾನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು ಎಂದು ದೂರು ನೀಡಿದರು.
ವೇದಿಕೆ ಮುಖಂಡರಾದ ಎಂ.ಸಿ.ಸಿದ್ದು, ಯೋಗಾನಂದ್, ಗೆಜ್ಜಲಗೆರೆ ಯೋಗೇಶ್, ರಾಘವೇಂದ್ರ, ಯತೀಶ್, ಶಿವರಾಜ್, ಕೀರ್ತನ್, ಅಭಿಷೇಕ್, ಜಯಂತ್‌ಗೌಡ, ಭರತ್ ಹಾಜರಿದ್ದರು.