ಸಂಕೇಶ್ವರ: ಹಿಂದುಗಳ ಪವಿತ್ರ ಗ್ರಂಥವಾಗಿರುವ ಭಗವದ್ಗೀತೆ ಅಧ್ಯಯನ ಬದುಕಿಗೆ ಉನ್ನತ ಮೌಲ್ಯ ತುಂಬುವುದರ ಜತೆಗೆ ಭವಿಷ್ಯಕ್ಕೆ ಬೆಳಕು ದೊರೆಯುತ್ತದೆ ಎಂದು ವಿಶ್ವಚೇತನ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಕೆ.ಪಾಟೀಲ ಹೇಳಿದರು.
ಪಟ್ಟಣದ ವಿಶ್ವ ಚೇತನ ವಿದ್ಯಾ ಸಂಸ್ಥೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಭಗವದ್ಗೀತೆ ಪುಸ್ತಕ ವಿತರಣಾ ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮಾನವ ಜನ್ಮದ ಕರ್ಮದ ಫಲಾ ಫಲಗಳ ಪ್ರತಿ ದರ್ಪಣ ಎಂದು ತಿಳಿದು, ಪ್ರತಿಯೊಬ್ಬರೂ ಉತ್ತಮ ನಡುವಳಿಕೆ ಹೊಂದಲು ಭಗವದ್ಗೀತೆ ಪ್ರೇರಣೆ ನೀಡುತ್ತದೆ ಎಂದರು.
ಭಗವದ್ಗೀತೆ ಪಠಣೆ ಹೇಗೆ ಮಾಡಬೇಕು, ಅದರ ಉಪಯೋಗ, ಮಾನವನ ಕರ್ಮಫಲಗಳು ಹೋಗಲಾಡಿಸಲು ಭಗವದ್ಗೀತೆ ಪಠಣೆ ಮಾಡುವುದು ಸೂಕ್ತ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಮಹೇಶ ದೇಸಾಯಿ, ಭಾರತಿ ತಗಾರೇ, ರಮೇಶ ತಗಾರೆ, ಜಯಶ್ರೀ ಹುದ್ದಾರ, ವಿನೋದ ಹುದ್ದಾರ ಅವರು ಭಗವದ್ಗೀತೆ ಪುಸ್ತಕಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸಿ ಕೋಟಿ ಗೀತಾಲೇಖನ ಯಜ್ಞದ ಬಗ್ಗೆ ತಿಳಿಸಿದರು. ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.