ಕಲಬುರಗಿ: ಗೀತಾ ಜಯಂತಿ ನಿಮಿತ್ತ ನಗರದ ಪ್ರಸಿದ್ಧ ಉದ್ಯಮಿಗಳಾದ ಗುಪ್ತಾ ಕುಟುಂಬದಿAದ ಭಗವತ್‌ಗೀತಾ ಪುಸ್ತಕವನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು. ನಗರದ ಹುಮನಾಬಾದ್ ರಸ್ತೆಯಲ್ಲಿನ ಉಪಳಾಂವನಲ್ಲಿರುವ ಗೃಹದಲ್ಲಿ ಬುಧವಾರ ಆಯೋಜಿಸಿದ ಗೀತಾ ಜಯಂತ್ಯುತ್ಸವದಲ್ಲಿ ಗುಪ್ತಾ ಕುಟುಂಬದ ಹಿರಿಯರಾದ ವರಲಕ್ಷಿö್ಮÃ ಗುಪ್ತಾ ಚಾಲನೆ ನೀಡಿದರು.
ಈ ಕುರಿತು ಮಾಹಿತಿ ನೀಡಿದ ಉದ್ಯಮಿ ರಾಘವೇಂದ್ರ ಗುಪ್ತಾ, ಕಳೆದ ಹಲವು ದಶಕದಿಂದ ಗೀತಾ ಜಯಂತಿಯನ್ನು ಆಚರಿಸಿ, ಆತ್ಮೀಯರು, ಹಿತೈಷಿಗಳು, ಬಂಧುಗಳನ್ನು ಆಹ್ವಾನಿಸಿ ಭಗವತ್‌ಗೀತೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಆದರೆ ಗೀತೆಯ ಸಂದೇಶವನ್ನು ಮನೆ ಮನೆಗೆ ತಲುಪಿಸಿ, ಎಲ್ಲೆಡೆ ಸಂಸ್ಕೃತಿ, ಧರ್ಮದ ಕಾರ್ಯ ಪಸರಿಸುವ ಉz್ದÉÃಶದಿಂದ ಪ್ರಸಕ್ತ ವರ್ಷದಿಂದ ಮನೆ ಬಾಗಿಲಿಗೆ ಉಚಿತವಾಗಿ ಭಗವತ್‌ಗೀತೆ ಯೋಜನೆ ರೂಪಿಸಲಾಗಿದೆ ಎಂದರು.
ಆಸಕ್ತರು ಭಗವತ್‌ಗೀತೆ ಪುಸ್ತಕವನ್ನು https://www.guptagalaxygroup.com/ ವೆಬ್‌ಸೈಟ್‌ಗೆ ಸಂಪರ್ಕಿಸಿ, ತಮಗೆ ಬೇಕಾದ ಭಾಷೆಯ ಪುಸ್ತಕದ ಮಾಹಿತಿ ನೀಡಿ, ವಿಳಾಸ, ಸಂಪರ್ಕ ಸಂಖ್ಯೆ ಒದಗಿಸಿದರೆ ಮನೆಗೆ ಪುಸ್ತಕವನ್ನು ತಲುಪಿಸಲಾಗುತ್ತದೆ. ಗೋರಖಪುರದ ಗೀತಾ ಪ್ರೇಸ್‌ನಿಂದ ಮುದ್ರಿತವಾಗುವ ಭಗವತ್‌ಗೀತಾ ಪುಸ್ತಕಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ನಾಗಲಕ್ಷಿö್ಮÃ ಗುಪ್ತಾ, ಭಾರ್ಗವ ಗುಪ್ತಾ, ನಯನಾ ಗುಪ್ತಾ ಇತರರಿದ್ದರು.
ಹಲವು ದಶಕದಿಂದ ರಾಘವೇಂದ್ರ ಗುಪ್ತಾ ಅವರು ಗೀತಾ ಜಯಂತಿ ಆಚರಿಸಿ, ಭಗವತ್‌ಗೀತೆಯ ಪುಸ್ತಕಗಳನ್ನು ಉಡುಗೊರೆ ನೀಡುತ್ತಿದ್ದರು. ಹಿಂದೆ ಅವರ ತಂದೆ ದಾನಿಗಳಾಗಿದ್ದು, ಕಷ್ಟದಲ್ಲಿದ್ದವರ ವಿವಾಹ, ಮನೆ ನಿರ್ಮಾನ ಸೇರಿ ಹಲವು ಸೇವೆ ಮಾಡುತ್ತಿದ್ದಾರೆ. ಇದೀಗ ಭಗವತ್‌ಗೀತೆ ಮನೆ ಮನೆಗೆ ತಲುಪಿಸುವ ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ.
| ಬಸವರಾಜ ಬಿರಾದಾರ
ವಕೀಲರು