More

  ಭಕ್ತಿ ಭಗವಂತನೆಡೆ ಕರೆದೋಯ್ಯುತ್ತದೆ – ಶ್ರೀಶೈಲದ ಜಗದ್ಗುರು

  ಭಕ್ತಿ ಭಗವಂತನೆಡೆ ಕರೆದೋಯ್ಯುತ್ತದೆ
  ಬೆಳಗಾವಿ: ಭಕ್ತಿ ಭಗವಂತನೆಡೆ ಕರೆದುಕೊಂಡು ಹೋಗುತ್ತದೆ. ಮನುಷ್ಯನಲ್ಲಿ ನಿಜವಾದ ಭಕ್ತಿ ಇದ್ದರೆ ಅಂತವರನ್ನು ಭಗವಂತ ಒಪ್ಪುತ್ತಾನೆ ಎಂದು ಶ್ರೀಶೈಲದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಜಗದ್ಗುರು ಹೇಳಿದರು.

  ನಗರದ ಉಷಾ ಕಾಲನಿಯ ಲಕ್ಷ್ಮೀ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಗವಂತನು ಒಪ್ಪುವ ಹಾಗೂ ಅಪ್ಪುವ ಹಾಗೆ ನಮ್ಮ ಬದುಕು ಇರಬೇಕಾದರೆ ನಾವು ಎಂದಿಗೂ ನಿಶ್ವಾರ್ಥದಿಂದ ಇರಬೇಕು. ಮಠ- ಮಂದಿರದಲ್ಲಿ ಭಕ್ತರು ಸೇವೆ ಮಾಡುವುದರಿಂದ ಅಹಂಕಾರ ಅಹಂಕಾರ ಅಳಿಯುತ್ತದೆ ಎಂದರು. ಎಲ್ಲರನ್ನು ಪ್ರೀತಿಸಿ, ಎಲ್ಲರೊಂದಿಗೆ ಬೇರತು, ಎಲ್ಲರೂ ನನ್ನವರು ಎನ್ನುವ ಭಾವನೆ ಬೆಳೆಸಿಕೊಂಡರೆ ಮನುಷ್ಯನಲ್ಲಿ ಸಂತೃಪ್ತಿ ಇರುತ್ತದೆ ಎಂದರು.

  ಉತ್ತರ ಕರ್ನಾಟಕ ಭಾಗದಲ್ಲಿ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು ಭಕ್ತರಿಗೆ ಮಾರ್ಗದರ್ಶನ ಮಾಡುವುದರೊಂದಿಗೆ ಎಲ್ಲ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

  ದೇವಸ್ಥಾನ ಧರ್ಮದರ್ಶಿ ಡಾ. ಶಿವರಾಮ ಮಾತನಾಡಿ, ಲಕ್ಷ್ಮೀ ದೇವಸ್ಥಾನಕ್ಕೆ ಈಗಾಗಲೇ ರಂಭಾಪುರಿ, ಉಜ್ಜೈನಿ, ಶ್ರೀಶೈಲ, ಕಾಶಿ ಜಗದ್ಗುರುಗಳು ಆಗಮಿಸಿ ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದ ನಗರಕ್ಕೆ ಇರಲಿ ಎಂದು ನಾವು ಪ್ರತಿ ವರ್ಷ ಪಂಚಪೀಠಾಧೀಶರನ್ನು ಹುಕ್ಕೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಕರೆಸುತ್ತಿದ್ದೇವೆ ಎಂದರು.

  ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಹಂಕಾರ ಕಡಿಮೆ ಮಾಡಿಕೊಂಡಾಗ ಭಗವಂತನ ಅನುಗ್ರಹವಾಗಲು ಸಾಧ್ಯ. ‘ನಾನೇ ಎಂಬುದು ಬಿಡಿರೋ ನರಕವೇ ಪ್ರಾಪ್ತಿ ಜ್ಞಾನಿಗಳ ಒಡನಾಡಿರೋ’ ಎಂಬ ಮಹಾತ್ಮರ ಸಂದೇಶ ಅರಿತು ಬಾಳಿದರೆ ನಿತ್ಯವೂ ಆನಂದವಾಗಿರಲು ಸಾಧ್ಯ ಎಂದರು.

  ಇದಕ್ಕೂ ಮೊದಲು ಲಕ್ಷ್ಮೀ ದೇವಸ್ಥಾನದ ವತಿಯಿಂದ ನಗರದ ಚನ್ನಮ್ಮ ವೃತ್ತದಿಂದ ಕ್ಲಬ್ ರಸ್ತೆಯ ಮಾರ್ಗವಾಗಿ ಲಕ್ಷ್ಮೀ ದೇವಸ್ಥಾನ ವರೆಗೂ ಶ್ರೀಶೈಲ ಜಗದ್ಗುರುಗಳ ಸಾರೋಟದ ಉತ್ಸವ ನಡೆಯಿತು. ವೀರೂಪಾಕ್ಷಯ್ಯ ನೀರಲಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಕಾಕದ ಬ್ರಹ್ಮಾನದಂದ ಸ್ವಾಮೀಜಿ, ಚಂದ್ರಶೇಖರಯ್ಯ ಸಾಲಿಮಠಸವಡಿ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರು ವೇದಿಕೆಯಲ್ಲಿದ್ದರು.

  ಫೋಟೋ: 31 ಜಗ್ಗು 2
  ಬೆಳಗಾವಿ ಉಷಾ ಕಾಲನಿಯ ಲಕ್ಷ್ಮೀ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಜಗದ್ಗುರು ಮಾತನಾಡಿದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬ್ರಹ್ಮಾನದಂದ ಸ್ವಾಮೀಜಿ, ಚಂದ್ರಶೇಖರಯ್ಯ ಸಾಲಿಮಠಸವಡಿ, ಡಾ. ಶಿವರಾಮ ಇತರ ಗಣ್ಯರು ವೇದಿಕೆಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts