ಭಕ್ತಿ ಇಲ್ಲದ ಜ್ಞಾನದಿಂದ ಅಹಂಕಾರ ಪ್ರಾಪ್ತಿ – ಮೋಹನ್ ಭಾಗವತ್

ಬೆಳಗಾವಿ: ಜೀವನದಲ್ಲಿ ಸಫಲರಾಗಲು ಚಿಂತನೆ ಮತ್ತು ಸಾಧನೆಯ ಮಾರ್ಗ ಅನುಸರಿಸುವ ಅಗಶ್ಯವಾಗಿದೆ. ವಯಕ್ತಿಕ ಹಾಗೂ ಪ್ರಾಪಂಚಿಕ ಜೀವನದಲ್ಲಿ ಹಲವಾರು ಸಮಸ್ಯೆ ಎದುರಾಗುತ್ತವೆ. ಚಿಂತನೆ ಮತ್ತು ಸಾಧನೆ ಮೂಲಕ ಅವುಗಳನ್ನು ಪರಿಹರಿಸಬಹುದು ಎಂದು ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಅಭಿಪ್ರಾಯಪಟ್ಟರು.

ಹಿಂದವಾಡಿಯ ಗುರುದೇವ ರಾನಡೆ ಮಂದಿರದಲ್ಲಿ ಹಮ್ಮಿಕೊಂಡಿರುವ ಅಕಾಡೆಮಿ ಆಫ್ ಕಂಪೇರೆಟಿವ್ ಫಿಲಾಸಫಿ ಆ್ಯಂಡ್ ರಿಲೀಜನ್ (ಎಸಿಪಿಆರ್)ನ ಶತಮಾನೋತ್ಸವ ಹಾಗೂ ಗುರುದೇವ ರಾನಡೆ ಅವರು ರಚಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ಪ್ರತಿಯೊಬ್ಬರಿಗೂ ಕರ್ಮ, ಭಕ್ತಿ, ಜ್ಞಾನ ಅಗತ್ಯ. ರಾಮ ಮತ್ತು ರಾವಣ ಇಬ್ಬರಿಗೂ ಜ್ಞಾನವಿತ್ತು. ಆದರೆ, ರಾಮನಲ್ಲಿ ಭಕ್ತಿ ಇದ್ದಿದ್ದರಿಂದ ಇಂದಿಗೂ ಅವನನ್ನು ಪೂಜಿಸುತ್ತೇವೆ. ಭಕ್ತಿ ಇಲ್ಲದ ಜ್ಞಾನ ನಮ್ಮಲ್ಲಿ ಅಹಂಕಾರ ತರುತ್ತದೆ ಎಂದರು. ಕರ್ಮ, ವಿಕರ್ಮದ ಬಗ್ಗೆ ನಾವು ಜಾಗೃತರಾಗಬೇಕು ಎಂದರು.

ಪ್ರತಿಯೊಬ್ಬರೂ ತಮ್ಮ ಅಂತರಂಗದ ಸತ್ಯ ಗುರುತಿಸಬೇಕು. ಆಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಬದುಕಿನಲ್ಲಿ ಸಶಕ್ತರಾಗಲು ಎಲ್ಲರೂ ತಮ್ಮ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸುವ ಅಗತ್ಯವಿದೆ. ಹಾಗಾಗಿ, ಸನಾತನ ಧರ್ಮದ ಹಾದಿಯಲ್ಲಿ ಸಾಗಬೇಕು. ಸನಾತನ ಧರ್ಮದಲ್ಲಿ ವಿಶ್ವದ ಎಲ್ಲ ಸಮಸ್ಯೆಗಳಿಗೂ ನಿವಾರಿಸುವ ಶಕ್ತಿ ಇದೆ ಎಂದರು.

ಸಂಪ್ರದಾಯವು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುತ್ತದೆ. ಇದು ಸಾಧನೆಯ ಮಾರ್ಗವೂ ಆಗಿದೆ. ಪ್ರವಚನಗಳು ನಾವು ಗಮ್ಯಸ್ಥಾನ ತಲುಪಲು ಮಾರ್ಗದರ್ಶನ ನೀಡುತ್ತವೆ. ಒಂದು ವೇಳೆ ಗಮ್ಯ ಸ್ಥಾನವನ್ನೇ ಮರೆತರೆ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಹಾಗಾಗಿ ಪ್ರತಿಯೊಬ್ಬರೂ ಸಂಪ್ರದಾಯ ಪಾಲಿಸಬೇಕು ಎಂದರು.

ಹೈದರಾಬಾದ್‌ನ ರಾಮಚಂದ್ರ ಮಿಷನ್‌ನ ಕಮಲೇಶ್ ಪಟೇಲ್ ಮಾತನಾಡಿ, ಭಾರತೀಯರಾದ ನಾವು ಎಂದಿಗೂ ವಿನಯ ಮರೆಯಬಾರದು. ಆದರೆ, ಯಾರೂ ಅದರ ದುರ್ಬಳಕೆ ಮಾಡಿಕೊಳ್ಳದಂತೆ ಜಾಗೃತವಾಗಿರಬೇಕು ಎಂದರು. ಕಮಲೇಶ್ ಪಟೇಲ್ ಅವರು, ‘ಫೂಟ್‌ಪ್ರಿಂಟ್ಸ್ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್’ ಕೃತಿ ಬಿಡುಗಡೆಗೊಳಿಸಿದರು. ಎಸಿಪಿಆರ್ ಚೇರ್ಮನ್ ಅಶೋಕ ಪೋತದಾರ, ಕಾರ್ಯದರ್ಶಿ ಎಂ.ಬಿ.ಝೀರಲಿ, ಅಮಿತ್ ಕುಲಕರ್ಣಿ, ಸುಬ್ರಹ್ಮಣ್ಯ ಭಟ್, ಮಾಜಿ ಶಾಸಕ ಸಂಜಯ ಪಾಟೀಲ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಇತರರಿದ್ದರು. ಎಸಿಪಿಆರ್ ಆವರಣದಲ್ಲೇ ಮೋಹನ್ ಭಾಗವತ ಅವರು ಸಸಿ ನೆಟ್ಟರು. ಕಾಕಡಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Share This Article

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…

ತಂಪು ತಂಪಾದ​​ ಎಳನೀರನ್ನು ವಿಪರೀತವಾಗಿ ಕುಡಿಯಬೇಡಿ! ಮಾರಣಾಂತಿಕ ರೋಗಕ್ಕೆ ತುತ್ತಾಗೋದು ಖಚಿತ..Coconut Water Side Effects

ಬೆಂಗಳೂರು:  ಅತಿಯಾದರೆ ಅಮೃತವೂ ವಿಷ ಎಂಬಂತೆ, ಎಳನೀರನ್ನು ಮಿತಿಗಿಂತ ( Coconut Water Side Effects…

ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆಯುವುದು ಕಷ್ಟವೆ!; ಸಿಂಪಲ್​ ಈ ಟ್ರಿಕ್ಸ್​​ ಬಳಸಿ | Life Style

ಆಲೂಗಡ್ಡೆ ತಿನಿಸುಗಳು ಬೇಡ ಎಂದು ಯಾರು ಹೇಳುವುದಿಲ್ಲ. ನಮ್ಮ ಅಡುಗೆಮನೆಯಲ್ಲಿ ಪ್ರಮುಖ ಆಹಾರ ಎಂದರೆ ತಪ್ಪಲ್ಲ.…