Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಬ್ಲೈಂಡ್ ಕರ್ವ್​ಗಳಲ್ಲಿ ಕಾನ್ವೆಕ್ಸ್ ಮಿರರ್

Friday, 13.07.2018, 3:00 AM       No Comments

ಜಗನ್ನಾಥ್ ಕಾಳೇನಹಳ್ಳಿ ತುಮಕೂರು : ನಗರದ ವಾಹನದಟ್ಟಣೆ ಇರುವ ರಸ್ತೆ ತಿರುವುಗಳಲ್ಲಿ ಅಪಘಾತ ತಪ್ಪಿಸಲು ಕಾನ್ವೆಕ್ಸ್ ಮಿರರ್​ಗೆ ಟ್ರಾಫಿಕ್ ಪೊಲೀಸರು ಮೊರೆ ಹೋಗಿದ್ದಾರೆ. ಬ್ಲೈಂಡ್ ಕರ್ವ್​ಗಳಲ್ಲಿ ಮಿರರ್ ಅಳವಡಿಸಲಾಗಿದ್ದು ವಿರುದ್ಧ ದಿಕ್ಕಿನಲ್ಲಿ ಬರುವರು ‘ಕನ್ನಡಿ’ ಮೂಲಕ ಕಾಣಲಿದ್ದು, ಅಪಘಾತ ತಡೆಯಲು ಟ್ರಾಫಿಕ್ ಪೊಲೀಸರು ಕಂಡುಕೊಂಡಿರುವ ಪರಿಹಾರ.

ನಗರದ ಕೆಲ ತಿರುವುಗಳಲ್ಲಿ ಮತ್ತೊಂದು ದಿಕ್ಕಿನಿಂದ ಬರುವ ವಾಹನಗಳು ಕಾಣದೇ ಅಪಘಾತಗಳು ವರದಿಯಾಗುತ್ತಲೇ ಇದ್ದವು. ಇಂತಹ ತಿರುವು ಗುರುತಿಸಿರುವ ಸಂಚಾರ ಪೊಲೀಸರು 8 ಕಡೆ ಅಳವಡಿಸಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಕಾನ್ವೆಕ್ಸ್ ಮಿರರ್: ನಗರದ ಗಂಗೋತ್ರಿ ರಸ್ತೆ ತಿರುವು, ವಿದ್ಯಾನಗರ ರಸ್ತೆ ತಿರುವು, ಶೆಟ್ಟಿಹಳ್ಳಿ ಅಂಡರ್​ಪಾಸ್, ಅಂತರಸನಹಳ್ಳಿ ಸೇತುವೆ ಬಳಿ, ಉಪ್ಪಾರಹಳ್ಳಿಯಲ್ಲಿ 2 ಕಡೆ ಅಳವಡಿಸಲಾಗಿದೆ. ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಟ್ರಾಫಿಕ್ ಪೊಲೀಸರು ಟಿ-ಟ್ರ್ಯಾಕ್ ಯೋಜನೆ ಅಡಿ ಹೆಜ್ಜೆ ಇಟ್ಟಿದ್ದಾರೆ.

ಈ ತಿರುವುಗಳಲ್ಲಿ ಮತ್ತೊಂದು ಬದಿಯಿಂದ ಬರುವ ವಾಹನ ಸವಾರರಿಗೆ ವಿರುದ್ಧ ದಿಕ್ಕಿನಲ್ಲಿ ಬರುವವರು ಕಾಣಿಸುವುದಿಲ್ಲ. ಇಂತಹ ತಿರುವುಗಳನ್ನು ಬ್ಲೈಂಡ್ ಕರ್ವ್​ಗಳೆಂದು ಗುರುತಿಸಿದ್ದು, ಈ ಸ್ಥಳಗಳಲ್ಲಿ ನಿರಂತರವಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ. ಹಾಗಾಗಿ ಸಂಚಾರಿ ಪೊಲೀಸರು ಪ್ರಾಯೋಗಿಕವಾಗಿ 8 ಕಡೆ ಅಳವಡಿಸಿದ್ದಾರೆ.

ಟಿ-ಟ್ರ್ಯಾಕ್ ಯೋಜನೆ: ತುಮಕೂರು ಸಂಚಾರ ವ್ಯವಸ್ಥೆ ಸುಧಾರಣೆಗೆ ಕಳೆದ ಸಾಲಿನ ಬಜೆಟ್​ನಲ್ಲಿ ಟಿ-ಟ್ರ್ಯಾಕ್ ಯೋಜನೆಗೆ 2 ಕೋಟಿ ರೂ. ಅನುದಾನ ಘೊಷಿಸಲಾಗಿತ್ತು. ಈ ಯೋಜನೆ ಅಡಿ ನಗರದಲ್ಲಿ ಸಂಚಾರ ವ್ಯವಸ್ಥೆಗೆ ಸಂಚಾರಿ ಪೊಲೀಸರು ಕ್ರಮವಹಿಸಿರುವುದು ವಿಶೇಷ. 205 ಸೂಚನ ಫಲಕ, ಬ್ಲಿಂಕಿಂಗ್ ಲೈಟ್ಸ್, ಕ್ಯಾಟ್ ಐಸ್, ಝೀಬ್ರಾ-ಕ್ರಾಸಿಂಗ್ ಹೀಗೆ ಸಂಚಾರ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ.

ಎಲ್ಲೆಲ್ಲಿ ? : ಗಂಗೋತ್ರಿ ರಸ್ತೆ, ಇಂದಿರಾ ಸರ್ಕಲ್ (ಶೆಟ್ಟಿಹಳ್ಳಿ ಅಂಡರ್​ಪಾಸ್), ಉಪ್ಪಾರಹಳ್ಳಿ ಫ್ಲೈ ಓವರ್, ಎಸ್​ಎಸ್​ಐಟಿ ಕಾಲೇಜು, ವಿದ್ಯಾನಗರ, ವಾಸನ್ ಐ ಕೇರ್, ಪುಟ್ಟಸ್ವಾಮಯ್ಯನ ಪಾಳ್ಯ

ಅಂತರಸನಹಳ್ಳಿ ಸೇತುವೆ ಬಳಿ

ಗಂಗೋತ್ರಿ ರಸ್ತೆ ತಿರುವಿನಲ್ಲಿ ಎಸ್​ಐಟಿ ಬ್ಯಾಕ್ ಗೇಟ್​ನಿಂದ ಬರುವವರು ಕಾಣಿಸುವುದಿಲ್ಲ. ಸಾಕಷ್ಟು ಬಾರಿ ಬೈಕ್​ನಲ್ಲಿ ಸಡನ್ ಆಗಿ ಎದುರಿನಿಂದ ಬರುವ ವಾಹನಗಳಿಂದಾಗುವ ಅಪಘಾತದಿಂದ ಪಾರಾಗಿದ್ದೇವೆ. ಟ್ರಾಫಿಕ್ ಪೊಲೀಸರು ಅಳವಡಿಸಿರುವ ಮಿರರ್​ನಿಂದ ಆ ಬದಿಯಿಂದ ಬರುವರು ಕಾಣಲಿದ್ದು, ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗಿದೆ.

| ಜೀವನ್, ದ್ವಿಚಕ್ರ ವಾಹನ ಸವಾರ

ಕೆಲವು ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುವುದಿಲ್ಲ. ಅದರ ಪರಿಣಾಮ ನಿರಂತರ ಅಪಘಾತಗಳಾಗುತ್ತಲೇ ಇರುತ್ತವೆ. ಇಂತಹ ಬ್ಲೈಂಡ್ ಕರ್ವ್ ಗುರುತಿಸಿ ಕಾನ್ವೆಕ್ಸ್ ಮಿರರ್ ಅಳವಡಿಸಲಾಗಿದೆ. ವಿರುದ್ಧ ದಿಕ್ಕಿನಲ್ಲಿ ಬರುವರು ಕಾಣಿಸಲಿದ್ದು ಅಪಘಾತ ನಿಯಂತ್ರಿಸಬಹುದಾಗಿದೆ.

| ಡಾ.ದಿವ್ಯಾಗೋಪಿನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Leave a Reply

Your email address will not be published. Required fields are marked *

Back To Top