ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

ನಾಪೋಕ್ಲು: ನಾಪೋಕ್ಲು ಕೊಡವ ಸಮಾಜದ ಕ್ರೀಡಾ, ಸಾಂಸ್ಕೃತಿಕ ಮತ್ತು ಮನರಂಜನಾ ಕೂಟದಿಂದ ಆಯೋಜಿಸಿದ್ದ ಕೊಡವ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ದೊರೆಯಿತು.

ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್ ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ಚಂಗಪ್ಪ ಉದ್ಘಾಟಿಸಿ ಮಾತನಾಡಿದರು.

ಪೋಷಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ಹತ್ತು ವಿಭಾಗಗಳಲ್ಲಿ ನಡೆಯಲಿರುವ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸುಮಾರು 125 ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಪೋಷಕ ಕುಲ್ಲೇಟಿರ ಶಂಭು ಮಂದಪ್ಪ ಮಾತನಾಡಿದರು. ಕೂಟದ ಕಾರ್ಯದರ್ಶಿ ಮಣವಟ್ಟೀರ ದಯಾ ಕುಟ್ಟಪ್ಪ, ಕೊಡವ ಸಮಾಜದ ನಿರ್ದೇಶಕ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕಣ್ಣಂಬೀರ ಸುದಿ ತಿಮ್ಮಯ್ಯ, ಕುಲ್ಲೇಟಿರ ಅಜಿತ್, ಬೊಪ್ಪೇರ ಜಯ, ಕುಲ್ಲೇಟಿರ ಶಾಂತ, ಕುಲ್ಲೇಟಿರ ಅಶೋಕ್, ಲೋಕೇಶ್ ಹಾಜರಿದ್ದರು.