20.4 C
Bangalore
Monday, December 9, 2019

ಬ್ಯಾಡಗಿ ಶೇ. 79, ಶಿಗ್ಗಾಂವಿಯಲ್ಲಿ 76ರಷ್ಟು ಮತದಾನ

Latest News

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ಕಾಗವಾಡ, ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮುನ್ನಡೆ

ಬೆಳಗಾವಿ: ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮೊದಲ ಸುತ್ತಿನ ಎಣಿಕೆಯಲ್ಲಿ ಮುಂದಿದ್ದಾರೆ. ಅಂಚೆಮತಗಳ ಎಣಿಕೆಯಲ್ಲೂ ಮುಂದಿದ್ದ ಅವರು ನಂತರ ಮೊದಲ ಸುತ್ತಿನಲ್ಲೂ...

ಮೊದಲ ಹಂತದ ಮತ ಎಣಿಕೆ ಶಿವರಾಮ ಹೆಬ್ಬಾರಗೆ 5004 ಮತ ಮುನ್ನಡೆ

ಕಾರವಾರ: ಕುತೂಹಲ ಕೆರಳಿಸಿರುವ ವಿಧಾನಸಭೆಯ 15 ಕ್ಷೇತ್ರಗಳ ಉಪಚುನಾವಣೆಯ ಪೈಕಿ ಯಲ್ಲಾಪುರ ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ. ಮೊದಲ ಹಂತದ ಮತ ಎಣಿಕೆಯಲ್ಲಿ...

ಬ್ಯಾಡಗಿ: ಪುರಸಭೆಯ 23 ವಾರ್ಡ್​ಗಳಲ್ಲಿ ಬುಧವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ. 79.85 ಮತದಾನವಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸ್ವಲ್ಪ ಮಂದವಾಗಿತ್ತು. 9 ಗಂಟೆಗೆ ಶೇ. 14.34, 12ಕ್ಕೆ ಶೇ. 34.6, 3 ಗಂಟೆ ಸುಮಾರಿಗೆ ಶೇ. 50 ದಾಟಿತು. ಸಂಜೆ 4 ಗಂಟೆಗೆ ಶೇ. 70, 5ಕ್ಕೆ ಶೇ.79.85 ರಷ್ಟಾಯಿತು.

ಪಟ್ಟಣದ ಪ್ರತಿಷ್ಠಿತ ಹಾಗೂ 4, 12, 9 ಹಾಗೂ 20ನೇ ವಾರ್ಡ್​ಗಳ ಮತಗಟ್ಟೆ ಬಳಿ ಅಭ್ಯರ್ಥಿಗಳ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹೀಗಾಗಿ ಹಳಪೇಟೆ, ವಾಜಪೇಯಿ ರಂಗಮಂದಿರ, ಕದರಮಂಡಲಗಿ ರಸ್ತೆಗಳು ಜನರಿಂದ ಗಿಜಿಗಿಡುತ್ತಿದ್ದವು.

ಪುರಸಭೆ 23 ವಾರ್ಡ್​ಗಳಲ್ಲಿ ಒಟ್ಟು 79 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 23,144 ಮತದಾರರಿದ್ದು ಇದರಲ್ಲಿ ಶೇ. 79.85ರಷ್ಟು ಮತದಾನದ ವರದಿಯಾಗಿದೆ.

ಮತದಾರರ ಹೆಸರು ನಾಪತ್ತೆ: ವಾರ್ಡ್ ಸಂಖ್ಯೆ 4ರಲ್ಲಿನ ನೆಹರು ನಗರ, ಶೆಟ್ಟರ ಓಣಿ ಹಾಗೂ ಶಿವಪುರ ಬಡಾವಣೆ, ವಿದ್ಯಾನಗರ ಸೇರಿ ಬಹುತೇಕ ವಾರ್ಡ್​ಗಳ ಮತದಾರರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ವಾರ್ಡ್ ಬದಲಾವಣೆಗೆ ಅರ್ಜಿ ಸಲ್ಲಿಸದಿದ್ದರೂ ಹಲವರ ಹೆಸರು ಬೇರೆ ಬೇರೆ ವಾರ್ಡ್​ಗಳ ಮತದಾರ ಪಟ್ಟಿಯಲ್ಲಿದ್ದವು. ಹೀಗಾಗಿ ಬಹುತೇಕ ಮತದಾರರು ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.

ಶೌಚಗೃಹಗಳಿಲ್ಲದೆ ಪರದಾಟ:ಚಾವಡಿ ರಸ್ತೆಯ ವಾರ್ಡ್ 7 ಹಾಗೂ 9ರ ಮತಗಟ್ಟೆಯಲ್ಲಿ ಚುನಾವಣೆ ಸಿಬ್ಬಂದಿ ಸೇರಿ ಮತದಾರರಿಗೆ ಶೌಚಗೃಹ ವ್ಯವಸ್ಥೆಯಿರಲಿಲ್ಲ. ಮತಗಟ್ಟೆ ಸಿಬ್ಬಂದಿ ಬೆಳಗ್ಗೆ ಶೌಚಗೃಹಕ್ಕಾಗಿ ದೂರದ ಖಾಸಗಿ ಕಲ್ಯಾಣಮಂಟಪಕ್ಕೆ ತೆರಳಬೇಕಾಯಿತು.

ವಾರ್ಡ್ ನಂ. 1ರಲ್ಲಿ ದೊಡ್ಡಗೌಡ್ರ ಪ್ರೌಢಶಾಲೆಯ ಮತಗಟ್ಟೆಯ ಎದುರಲ್ಲಿ ಹಾಳುಬಿದ್ದ ನಿವೇಶನದಲ್ಲಿ ಚರಂಡಿ ನೀರು, ತ್ಯಾಜ್ಯಗಳಿಂದ ದುರ್ವಾಸನೆ ಹರಡುತ್ತಿತ್ತು. ಹೀಗಾಗಿ ಮತದಾರರು ಮೂಗುಮುಚ್ಚಿಕೊಂಡು ಮತ ಚಲಾವಣೆಗೆ ತೆರಳಿದರು. ರಾತ್ರಿಯಿಂದ ಅಲ್ಲಿ ತಂಗಿದ್ದ ಸಿಬ್ಬಂದಿ ಗೋಳಂತೂ ಹೇಳತೀರದು. ಭದ್ರತೆಗೆ ನೇಮಿಸಿದ್ದ ಸಿಬ್ಬಂದಿ ಬಿರುಬಿಸಿಲಿನಲ್ಲಿ ಮೂಗಿಗೆ ಕರವಸ್ತ್ರ ಮುಚ್ಚಿಕೊಂಡು ನಿಲ್ಲುವಂತಾಯಿತು.

ಗಣ್ಯರ ಮತದಾನ: ಪಟ್ಟಣದ ವಾರ್ಡ್ 20ರ ಮತಗಟ್ಟೆಯಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, 12ರಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಸಾಹಿತಿ ಸಂಕಮ್ಮ ಸಂಕಣ್ಣನವರ ಹಾಗೂ ವಾರ್ಡ್ 6ರಲ್ಲಿ ಮುರಿಗೆಪ್ಪ ಶೆಟ್ಟರ ಮತದಾನ ಮಾಡಿದರು.

ಮತಪೆಟ್ಟಿಗೆಯಲ್ಲಿ ಅಭ್ಯರ್ಥಿ ಭವಿಷ್ಯ ಭದ್ರ

ಶಿಗ್ಗಾಂವಿ: ಸ್ಥಳೀಯ ಪುರಸಭೆ ಚುನಾವಣೆಯ 23 ವಾರ್ಡ್​ಗಳಿಗೆ ಸ್ಪರ್ಧಿಸಿದ್ದ 95 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಬುಧವಾರ ಭದ್ರವಾಗಿದೆ.

ಬೆಳಗ್ಗೆ ಜೋರಾಗಿದ್ದ ಮತದಾನ ಉರಿ ಬಿಸಲಿನ ತಾಪ ಹೆಚ್ಚುತ್ತಿದ್ದಂತೆ ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಕ್ಷೀಣಿಸಿತ್ತು. ಸಂಜೆ ಹೊತ್ತಿಗೆ ಒಟ್ಟು ಶೇ 76.87 ರಷ್ಟು ಮತದಾನವಾಯಿತು. ಚುನಾವಣೆ ಶಾಂತಿಯುತವಾಗಿ ನಡೆಯಿತು.

ಮನೆ, ಮನೆಗೆ ಹೋಗಿ ಮತದಾರರನ್ನು ಬೈಕ್, ಅಟೋ, ಟ್ಯಾಕ್ಷಿಗಳ ಮೂಲಕ ಅಭ್ಯರ್ಥಿಗಳ ಹಿಂಬಾಲಕರು ಆಹ್ವಾನಿಸಿ ಕರೆತಂದರು.

ಇನ್ನೊಂದಡೆ ಮತದಾನಕ್ಕಾಗಿ ಮತಗಟ್ಟೆ ಆವರಣದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಾಯ್ದು ಕುಳಿತ ದೃಶ್ಯ ದ್ಯಾಮವ್ವನ ಪಾದಗಟ್ಟಿ ಬಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಕಂಡುಬಂತು. ವೃದ್ಧರು ಆಶ್ರಯ ಪಡೆದು ಹಕ್ಕು ಚಲಾಯಿಸಿದರು. 14ನೇ ವಾರ್ಡ್​ನ ಸರ್ಕಾರಿ ಉರ್ದು ಶಾಲೆಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಹಕ್ಕು ಚಲಾಯಿಸಿದರು.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...