ಹುಮನಾಬಾದ್: ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ನೇತಾಜಿ ಸುಭಾಷ್‌ಚಂದ್ರ ಬೋಸ್‌ರಂತಹ ಮಹಾನ ನಾಯಕರ ತತ್ವಾದರ್ಶಗಳು ಪ್ರಸ್ತುತ ಪೀಳಿಗೆಗೆ ಅಗತ್ಯ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಲಾಲಧರಿ ನೇತಾಜಿ ಸಂಸತ್ ಭವನ ಮಾದರಿ ಕಟ್ಟಡದಲ್ಲಿ ಶನಿವಾರ ಏರ್ಪಡಿಸಿದ್ದ ಅಜಾದ್ ಹಿಂದ್ ಗವರ್ನಮೆಂಟ್ ಸ್ಥಾಪನೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಲಾಲಧರಿ ನೇತಾಜಿ ಸಂಸತ್ ಭವನ ಮಾದರಿ ಕಟ್ಟಡ ಪ್ರವಾಸಿ ಸ್ಥಳವಾಗಿ ಮಾಡಲು ಸಹಕಾರ ನೀಡಲಾಗುವುದು. ಇಲ್ಲಿಗೆ ವಿವಿಧೆಡೆಯಿಂದ ಸ್ವಾತಂತ್ರ ಸೇನಾನಿಗಳು, ಕುಟುಂಬದವರು ಆಗಮಿಸಿದ್ದು, ಶ್ಲಾಘನೀಯ ಎಂದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ನೇತಾಜಿ ಸುಭಾಷ ಚಂದ್ರಬೋಸ್‌ರ ಆದರ್ಶಗಳು ಯುವಕರು ಅಳವಡಿಸಿಕೊಳ್ಳಬೇಕು. ಸ್ವತಂತ್ರ ಸೇನಾನಿಗಳ ತ್ಯಾಗ, ಬಲಿದಾನ ಸ್ಮರಿಸುವ ಜತೆಗೆ ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು
ವಿಕಾಸ ಅಕಾಡೆಮಿ ಅಧ್ಯ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಶರಣರ ಭೂಮಿಯಾದ ಈ ಭಾಗದಲ್ಲಿ ನೇತಾಜಿ ಸಂಸತ್ ಭವನ ಮಾದರಿ ಕಟ್ಟಡವನ್ನು ಪ್ರವಾಸಿ ಸ್ಥಳ ಮಾಡಲು ಸರ್ಕಾರ ಒತ್ತು ನೀಡಬೇಕು. ಪ್ರವಾಸಿ ಸ್ಥಳವಾಗಿ ರೂಪುಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಬೋಸ್ ಮರಿಮೊಮ್ಮಗಳು ರಾಜಶ್ರೀ ಚೌದ್ರಿ, ಆರ್.ಮಾಧವನ್, ಆಯೋಜಕರಾದ ಅನೀಲ ತ್ರಿಪಾಟಿ, ಸಂತರಾಮ ಮುಜಾರ್ನಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ, ಪ್ರಮುಖರಾದ ಮಾಣಿಕರೆಡ್ಡಿ ಕಡ್ಯಾಳೆ, ಸಾಹಿತಿ ರುಕ್ಮೊದ್ದೀನ್ ಇಸ್ಲಾಂಪುರೆ ಮಾತನಾಡಿದರು.