ಅಂತೂ ಬೋನಿಗೆ ಬಿತ್ತು ಭೀತಿ ಹುಟ್ಟಿಸಿದ್ದ ಚಿರತೆ

ಕೆ.ಆರ್.ಪೇಟೆ: ಹಲವು ದಿನಗಳಿಂದ ಜನರಿಗೆ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಮಂಗಳವಾರ ರಾತ್ರಿ ಬೋನಿನಲ್ಲಿ ಸೆರೆಯಾಗಿದೆ.

ತಾಲೂಕಿನ ಬೂಕಹಳ್ಳಿ ಗ್ರಾಮದಲ್ಲಿ ಹೊರ ವಲಯದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದು, ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಬೋನನ್ನು ಇಟ್ಟಿದ್ದರು.

ಬೆಳಗ್ಗೆ ಬೋನಿನಿಂದ ಚೀರಾಟದ ಸದ್ದು ಬಂದಾಗ ಗ್ರಾಮಸ್ಥರು ತೆರಳಿ ನೋಡಿ, ಚಿರತೆ ಸರೆಯಾಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಧುಸೂದನ್ ನೇತೃತ್ವದಲ್ಲಿ ತೆರಳಿದ ಸಿಬ್ಬಂದಿ ಬೋನ್ ತೆಗೆದುಕೊಂಡು ಹೋಗಿದ್ದಾರೆ. ಬೋನಿಗೆ ಬಿದ್ದಿದ್ದ ಚಿರತೆ ನೊಡಲು ಅಪಾರ ಜನತೆ ಆಗಮಿಸಿದ್ದರು.

Leave a Reply

Your email address will not be published. Required fields are marked *