ಬೋಯಿಂಗ್ ಬಂದ್ ಪ್ರಯಾಣ ದರ ಗಗನಕ್ಕೆ

ನವದೆಹಲಿ/ಮುಂಬೈ: ಇಥಿಯೋಪಿಯಾ ವಿಮಾನಯಾನ ಸಂಸ್ಥೆಯ ಬೋಯಿಂಗ್ 737- ಮ್ಯಾಕ್ಸ್ ವಿಮಾನ ಪತನದ ನಂತರ ಈ ಸರಣಿಯ ವಿಮಾನಗಳ ಹಾರಾಟವನ್ನು ಸುರಕ್ಷತೆ ಕಾರಣ ರದ್ದುಗೊಳಿಸಿರುವುದರಿಂದ ಈಗ ಪ್ರಯಾಣ ದರ ದುಪ್ಪಟ್ಟು ಮತ್ತು ಅದಕ್ಕೂ ಅಧಿಕವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬೋಯಿಂಗ್ 737 ಮ್ಯಾಕ್ಸ್ ವಿಮಾನ ಹಾರಾಟ ರದ್ದುಗೊಂಡಿರುವ ಕಾರಣ ಈ ವಿಮಾನದಲ್ಲಿ ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರು ಬೇರೆ ವಿಮಾನಗಳಲ್ಲಿ ಸೀಟು ಕಾಯ್ದಿರಿಸಲು ಮುಂದಾಗಿದ್ದಾರೆ. ಕೊನೆಯ ಘಳಿಗೆಯಲ್ಲಿ ಸೀಟು ಕಾಯ್ದಿರಿಸುವ ಕಾರಣ ಪ್ರಯಾಣದ ದರ ಅಧಿಕವಾಗುತ್ತಿದೆ. ದೆಹಲಿ- ಮುಂಬೈ, ಮುಂಬೈ-ಚೆನ್ನೈ, ಮುಂಬೈ-ಕೋಲ್ಕತ ಮತ್ತು ಮುಂಬೈ-ಬೆಂಗಳೂರು ಮಾರ್ಗಗಳ ವಿಮಾನದಲ್ಲಿ ಪ್ರಯಾಣ ದರ ದುಪ್ಪಟ್ಟು ಹೆಚ್ಚಳವಾಗಿದೆ ಎಂದು ವಿಮಾನಯಾನ ವಲಯದ ಮೂಲಗಳು ತಿಳಿಸಿವೆ. ಮುಂಬೈ-ಚೆನ್ನೈ ಪ್ರಯಾಣದರ -ಠಿ; 26 ಸಾವಿರದ ಗಡಿ ದಾಟಿದೆ. ಕಳೆದ ವರ್ಷ ಈ ಸಮಯದಲ್ಲಿ -ಠಿ; 5,359 ಇತ್ತು. ಹೋಳಿ ಹಬ್ಬ ಮತ್ತು ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿರುವ ಕಾರಣ ಪ್ರವಾಸಿಗರ ದಟ್ಟಣೆ ಹೆಚ್ಚಳವಾಗಿದೆ ಎಂದು ತಿಳಿಸಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *