ಬೋಟ್ ಮಾಲೀಕರ ವಿರುದ್ಧ ದೂರು

ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆ ಬೋಟ್​ವೊಂದು ಕರಕಲಾದ ಪ್ರಕರಣಕ್ಕೆ ಸಂಬಂಧಿಸಿ ಬೋಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಲೀಕ ವಾಮನ ಹರಿಕಂತ್ರ ಹಾಗೂ ಚಾಲಕ ದೀಪಕ ಹರಿಕಂತ್ರ ವಿರುದ್ಧ ಗಾಯಗೊಂಡ ಕಾರ್ವಿುಕ ಬಾವಿಕೇರಿಯ ವಿಜಯ ಹರಿಕಂತ್ರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೋಟ್ ದಡಕ್ಕೆ: ಘಟನೆಯಲ್ಲಿ ಮೃತಪಟ್ಟ ಒರಿಸ್ಸಾ ಮೂಲದ ಕಾರ್ವಿುಕ ಅಮಿತ್ ಅವರ ಶವವನ್ನು ಗುರುವಾರ ಜಿಲ್ಲಾಸ್ಪತ್ರೆಗೆ ತಂದು ಶವ ಪರೀಕ್ಷೆ ನಡೆಸಲಾಗಿದೆ.

ಸುಟ್ಟು ಹೋದ ಬೋಟ್ ಅನ್ನು ಮತ್ತೊಂದು ಬೋಟ್​ನ ಸಹಕಾರದಿಂದ ಬೈತಖೋಲ್ ಬಂದರಿಗೆ ಎಳೆತರಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಛತ್ತೀಸಗಡದ ಲಕ್ಷ್ಮಣ ಮಾಧವ ಮಂಡಲಿ, ರಾಜೇಶ್ವರ ನಾನು ಖುರಾಮ, ಪ್ರೇಮ ಪ್ರಕಾಶ, ಜಾರ್ಖಂಡ್ ರಾಜ್ಯದ ರಾಹುಲ್, ಸಲ್ಮುನ್ ತಿಗ್ಗಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂಜಿನ್ ಬ್ಯಾಟರಿ ಸ್ಪೋಟಗೊಂಡು ನೌಕಾನೆಲೆ ಸಮೀಪ ಬೋಟ್ ಗೆ ಬೆಂಕಿ ಹತ್ತಿತ್ತು. ಗಾಯಗೊಂಡವರನ್ನು ತಮಿಳುನಾಡಿನ ಬೋಟ್ ಸಹಕಾರದಿಂದ ರಕ್ಷಿಸಿ ದಡಕ್ಕೆ ಕರೆತರಲಾಗಿತ್ತು.