26.3 C
Bengaluru
Thursday, January 23, 2020

ಬೈಲಹೊಂಗಲ ತಾಪಂ ಅಧ್ಯಕ್ಷೆ ರಾಜೀನಾಮೆ

Latest News

ನಂದಿಬೆಟ್ಟದ ತುದಿಗೆ ವಾರದ 5 ದಿನಗಳು ವಾಹನಗಳ ಪ್ರವೇಶಕ್ಕೆ ನಿರ್ಬಂಧ: ಶನಿವಾರ, ಭಾನುವಾರ ಮಾತ್ರ ಪ್ರವೇಶ

ಚಿಕ್ಕಬಳ್ಳಾಪುರ: ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟದ ತುತ್ತ ತುದಿಗೆ ವಾರದ 5 ದಿನಗಳು ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಬೆಟ್ಟದ ಪ್ರವೇಶ ದ್ವಾರದ...

ತಾಯಿ-ಮಗಳು ಅನುಮಾನಾಸ್ಪದ ಸಾವು; ಬಾವಿಯಲ್ಲಿ ಪತ್ತೆಯಾದವು ಶವಗಳು, ಮಹಿಳೆಯ ಪತಿ ನಾಪತ್ತೆ

ಕೊಡಗು: ಆಸ್ಸಾಂ ಮೂಲದ ತಾಯಿ-ಮಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಕೆ.ಬೈಗೋಡಿನಲ್ಲಿ ನಡೆದಿದೆ. ಇವರಿಬ್ಬರ ಶವವೂ ಬಾವಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಪತಿ ನಾಪತ್ತೆಯಾಗಿದ್ದು ಇನ್ನೂ ಅನುಮಾನವನ್ನು...

ಸೌದಿಯಲ್ಲಿರುವ ಕೇರಳದ 30 ನರ್ಸ್​ಗಳಲ್ಲಿ ಮಾರಣಾಂತಿಕ ಕರೋನಾ ವೈರಸ್​ ಪತ್ತೆ

ತಿರುವನಂತಪುರ: ಚೀನಾದಲ್ಲಿ ಹಲವು ಮಂದಿಯನ್ನು ಬಲಿ ಪಡೆದಿರುವ ಮಾರಣಾಂತಿಕ ಕರೋನಾ ವೈರಸ್​ ಸೌದಿ ಅರೇಬಿಯಾದಲ್ಲಿರುವ ಕೇರಳದ 30 ಮಂದಿ ನರ್ಸ್​ಗಳಲ್ಲಿ ಪತ್ತೆಯಾಗಿದೆ ಎಂದು...

ರೈಲು ಸಂಚಾರ ನಿರಂತರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಆರಂಭವಾದ ಎಲ್ಲ ತತ್ಕಾಲ್ ರೈಲುಗಳು ಶಾಶ್ವತವಾಗಿ ಸಂಚರಿಸುತ್ತಿವೆ. ಈಗ ಆರಂಭವಾಗಿರುವ ಶಿವಮೊಗ್ಗ-ಯಶವಂತಪುರ ಎಕ್ಸ್​ಪ್ರೆಸ್ ರೈಲು ಕೂಡ ಮುಂದಿನ ದಿನಗಳಲ್ಲಿ ನಿರಂತರವಾಗಿ...

ಶೇ.50 ರಷ್ಟು ಕರ ವಸೂಲಿ ಮಾಡದಿದ್ದರೆ ಶಿಸ್ತು ಕ್ರಮ

ಬಾಗಲಕೋಟೆ: ಜಿಲ್ಲೆಯಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ಶೇ.50 ರಷ್ಟು ಕರ ವಸೂಲಿ ಮಾಡದಿದ್ದಲ್ಲಿ ಬಿಲ್ ಕಲೆಕ್ಟರ್‌ಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು...

ತಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಕಸರತ್ತು

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಪಂ ಆಡಳಿತಾವಧಿ ಹಂಚಿಕೆ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ತಾಪಂ ಅಧ್ಯಕ್ಷೆ ಶೈಲಾ ಬಸನಗೌಡ ಸಿದ್ರಾಮನಿ ಗುರುವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ತಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪರೋಕ್ಷವಾಗಿ ಪ್ರಯತ್ನಿಸುತ್ತಿದೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಪರ ಜಿಲ್ಲಾಧಿಕಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಅವರಿಗೆ ತಾಪಂ ಅಧ್ಯಕ್ಷೆ ಶೈಲಾ ಬಸನಗೌಡ ಸಿದ್ರಾಮನಿ ಅವರು ಕೌಟುಂಬಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಬೆನ್ನೆಲ್ಲೆ ಕಾಂಗ್ರೆಸ್‌ನ ನಾಯಕರು ಪಕ್ಷೇತರರ ಬೆಂಬಲ ಪಡೆದು ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ಆರಂಭಿಸಿದ್ದಾರೆ.
ಬಿಜೆಪಿ-17, ಕಾಂಗ್ರೆಸ್-10, ಜೆಡಿಎಸ್-2 ಹಾಗೂ ಪಕ್ಷೇತರು-2 ಸೇರಿ 31 ಸದಸ್ಯರ ಸಂಖ್ಯೆ ಹೊಂದಿರುವ ಬೈಲಹೊಂಗಲ ತಾಪಂ ಅಧ್ಯಕ್ಷೆಯಾಗಿ ಶೈಲಾ ಬಸನಗೌಡ ಸಿದ್ರಾಮನಿ ಅವರು 2016ರ ಮೇ 16ರಂದು ಅಧಿಕಾರಿ ವಹಿಸಿಕೊಂಡಿದ್ದರು. ಈ ವೇಳೆ 5 ವರ್ಷದ ಅಧಿಕಾರದ ಅವಧಿಯಲ್ಲಿ 2.5 ವರ್ಷ ಕಿತ್ತೂರು ಭಾಗಕ್ಕೆ ಅಧ್ಯಕ್ಷ ಸ್ಥಾನ, ಬೈಲಹೊಂಗಲ ಭಾಗಕ್ಕೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವುದು. ಇನ್ನುಳಿದ 2.5 ವರ್ಷ ಅವಧಿಯಲ್ಲಿ ಬೈಲಹೊಂಗಲಕ್ಕೆ ಅಧ್ಯಕ್ಷ, ಕಿತ್ತೂರು ಭಾಗಕ್ಕೆ ಉಪಾಧ್ಯಕ್ಷ ಸ್ಥಾನ ನೀಡುವ ಅಧಿಕಾರದ ಹಂಚಿಕೆ ಕುರಿತು ಎರಡು ತಾಲೂಕಿನ ತಾಪಂ ಸದಸ್ಯರು ಹಾಗೂ ನಾಯಕರು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಬೈಲಹೊಂಗಲ ತಾಪಂ ಅಧ್ಯಕ್ಷೆ ಶೈಲಾ ಬಸನಗೌಡ ಸಿದ್ರಾಮನಿ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆಯೇ ವಿನಃ ರಾಜಕೀಯ ಕಾರಣಕ್ಕೆ ಅಲ್ಲ.
ಈಗಾಗಲೇ ಬೈಲಹೊಂಗಲ ತಾಪಂ ಅಧ್ಯಕ್ಷ ಸ್ಥಾನ ಶೈಲಾ ಬಸನಗೌಡ ಸಿದ್ರಾಮನಿ ರಾಜೀನಾಮ ಕೊಡುವ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರು ಒಪ್ಪಿಗೆ ಸೂಚಿಸಿದ್ದರು ಎಂದು ಬಿಜೆಪಿ ಜಿಲ್ಲಾ ನಾಯಕರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಅದೃಷ್ಟದ ಬಾಗಿಲು

ಬೈಲಹೊಂಗಲ ತಾಪಂ ಅಧ್ಯಕ್ಷರ ಅಧಿಕಾರ ಅವಧಿ ಹಂಚಿಕೆ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷೆ ಶೈಲಾ ಬಸನಗೌಡ ಸಿದ್ರಾಮನಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ತಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದೆ. ತಾಪಂ ನ ಹೊಸ ಅಧ್ಯಕ್ಷರ ಆಯ್ಕೆ ವೇಳೆ ಕಿತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ 7 ಸದಸ್ಯರು ತಟಸ್ಥ ಉಳಿದರೆ ಅಥವಾ ಬೆಂಬಲ ನೀಡಲು ನಿರಾಕರಿಸಿ ಸಮಸ್ಯೆ ಉಂಟಾದರೆ ಮಾತ್ರ ಜೆಡಿಎಸ್, ಪಕ್ಷೇತರ ಬೆಂಬಲ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...