ಬೈತಖೋಲ್ ಅರಣ್ಯ ಪ್ರದೇಶಕ್ಕೆ ಬೆಂಕಿ

ಕಾರವಾರ: ನಗರದ ಬೈತಖೋಲ್ ಗುಡ್ಡದ ಅರಣ್ಯಕ್ಕೆ ಗುರುವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು, ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ.

ಬೈತಖೋಲ್ ವಾಣಿಜ್ಯ ಬಂದರಿನ ಸಮೀಪ ಬಂದರು ಕಚೇರಿಯ ಎದುರಿನ ಗುಡ್ಡಕ್ಕೆ ತಗುಲಿದ ಬೆಂಕಿ 10 ಎಕರೆಗೂ ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿತ್ತು.

ಒಣಗಿ ನಿಂತ ಬಿದಿರು, ಒಣಗಿದ ಹುಲ್ಲು ಹಾಗೂ ಸಮುದ್ರ ಕಡೆಯಿಂದ ಗಾಳಿ ಬೀಸುತ್ತಿರುವುದರಿಂದ ಕೆಲವೇ ಹೊತ್ತಿನಲ್ಲಿ ಬೆಂಕಿ ವ್ಯಾಪಕವಾಗುತ್ತ ಸಾಗಿತು. ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳಲ್ಲಿ ಆಗಮಿಸಿ ಬೆಂಕಿ ನಂದಿಸಲು ಮುಂದಾದರು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಯೂ ಆಗಮಿಸಿ ಸಂಜೆಯ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹಲವು ಮರಗಳಿಗೆ ಬೆಂಕಿ ಹತ್ತಿದ್ದರಿಂದ ಇನ್ನೂ ಹೊಗೆಯಾಡುತ್ತಿದ್ದು, ಯಾವುದೇ ಸಂದರ್ಭದಲ್ಲೂ ವ್ಯಾಪಿಸುವ ಸಾಧ್ಯತೆ ಇದೆ.

ಶೌಚಕ್ಕೆ ತೆರಳಿದ ವ್ಯಕ್ತಿಯೊಬ್ಬ ಸಿಗರೇಟ್ ಹತ್ತಿಸಿ ಒಗೆದಿದ್ದರಿಂದ ಬೆಂಕಿ ಹತ್ತಿರಬಹುದು ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *