ಬೈಕ್ ಸವಾರ ಸಾವು

ಚಳ್ಳಕೆರೆ: ತಾಲೂಕಿನ ರಾಜ್ಯ ಹೆದ್ದಾರಿ ಸಾಣೀಕೆರೆ ಸಮೀಪದ ಸೇತುವೆ ಮೇಲಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಹೆಗ್ಗೆರೆ ಗ್ರಾಮದ ಪಾಂಡೆಪ್ಪ (55) ಮೃತ ವ್ಯಕ್ತಿ. ಹೆಗ್ಗೆರೆಯಿಂದ ಚಳ್ಳಕೆರೆ ಕಡೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.