ಕೆ.ಆರ್.ಸಾಗರ: ಕಡ್ಡಾಯವಾಗಿ ಮತದಾನ ಮಾಡುವಂತೆ ಬೆಂಗಳೂರಿನ ರಾಜಾಜಿ ನಗರದ ಮಾಗಡಿ ರಸ್ತೆಯ ನಿವಾಸಿ ಬಸವರಾಜ್ ಎಸ್.ಕಲ್ಲುಸಕ್ಕರೆ ಅವರು ಕೆ.ಆರ್.ಸಾಗರಲ್ಲಿ ಗುರುವಾರ ಬೈಕ್ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಖಾಸಗಿ ಕಂಪನಿಯಲ್ಲಿ ಲಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ್ ಎಸ್.ಕಲ್ಲುಸಕ್ಕರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೈಕ್ನಲ್ಲಿ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದು, ಫೆ.28ರಂದು ಬೆಂಗಳೂರಿನಿಂದ ಜಾಥಾ ಪ್ರಾರಂಭಿಸಿ ಇವರೆಗೆ 26 ಜಿಲ್ಲೆಗಳಲ್ಲಿ ಮತದಾನದ ಜಾಗೃತಿ ಮೂಡಿಸಿದ್ದಾರೆ.
ನಂತರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇವರ ಕಾರ್ಯವೈಖರಿ ಮೆಚ್ಚಿ ತಾಲೂಕು ಚುನಾವಣಾ ಸಾಕ್ಷರತಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.