ಬೇಸಿಗೆ ಶಿಬಿರದಲ್ಲಿನ ಕಲಿಕೆ ಭವಿಷ್ಯತ್ತಿನ ಜೀವನಕ್ಕೆ ಸಹಕಾರಿ: ದಾವಣಗೆರೆ ಎಸ್​ಪಿ ಆರ್​. ಚೇತನ್​

ದಾವಣಗೆರೆ: ಬೇಸಿಗೆ ಶಿಬಿರದಲ್ಲಿ ಕಲಿತ ವಿಷಯ ಭವಿಷ್ಯತ್ತಿನಲ್ಲಿ ಸಹಕಾರಿ ಆಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.

ನಗರದ ಡಿಎಆರ್ ಕಚೇರಿ ಆವರಣದ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಬಾಲಭವನ ಅಕಾಡೆಮಿ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳು, ಸಿಬ್ಬಂದಿ ಮಕ್ಕಳ ಬೇಸಿಗೆ ಶಿಬರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳು 10 ತಿಂಗಳು ಶಾಲೆಯಲ್ಲಿ ಪಠ್ಯ ವಿಷಯ ಕಲಿತು ಬೇಸರಗೊಂಡಿರುತ್ತಾರೆ. ಪಠ್ಯೇತರ ವಿಷಯ ಕಲಿಕೆ ಮೂಲಕ ಈ ಬೇಸರವನ್ನು ದೂರ ಮಾಡಿಕೊಳ್ಳುವಂತೆ ಮಾಡಲು ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಎಂದರು.

ಹೆಚ್ಚುವರಿ ಪೊಲೀಸ್ ಅಧಿಕಾರಿ ಉದೇಶ್ ಮಾತನಾಡಿ, ಈ ಹಿಂದೆ ಕೂಡು ಕುಟುಂಬಗಳಿದ್ದವು. ಇವುಗಳು ಮಕ್ಕಳ ಪಾಲನೆ, ಪೋಷಣೆಗೆ ಆಸರೆಯಾಗಿದ್ದವು. ಪ್ರಸ್ತುತ ಇವುಗಳು ಕಣ್ಮರೆಯಾಗುತ್ತಿವೆ. ಇವುಗಳ ಸ್ಥಾನವನ್ನು ಬೇಸಿಗೆ ಶಿಬಿರಗಳು ಪಡೆದುಕೊಂಡಿವೆ ಎಂದು ಹೇಳಿದರು. ಬಾಲಭವನ ಅಕಾಡೆಮಿ ಸದಸ್ಯ ಪುಟ್ಟರಾಜ್, ಡಿಎಆರ್ ಡಿವೈಎಸ್‌ಪಿ ತಿಪ್ಪೇಸ್ವಾಮಿ ಇದ್ದರು.

Leave a Reply

Your email address will not be published. Required fields are marked *