More

  ಬೇಜವಾಬ್ದಾರಿತನ ನಾನು ಸಹಿಸೋಲ್ಲ


  ಯಾದಗಿರಿ: ಪಟ್ಟಣದ ಸಕರ್ಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ಶಾಸಕ ಶರಣಗೌಡ ಕಂದಕೂರ ಭಾನುವಾರ ಸಂಜೆ ದಿಢೀರ್ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಿದರು.
  ಶಾಸಕರಾದ ನಂತರ ಆರೋಗ್ಯ ಕೇಂದ್ರಕ್ಕೆ ಮೊದಲ ಭೇಟಿ ನೀಡಿದ ಅವರು, ಇಲ್ಲಿನ ವಿವಿಧ ವಿಭಾಗಗಳಿಗೆ ತೆರಳಿ ವೈದ್ಯಾಕಾರಿಗಳಿಂದ ಮಾಹಿತಿ ಪಡೆದಿಕೊಂಡರು. ಗಡಿ ಭಾಗದ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ದೊರೆಯಬೇಕು. ಸಣ್ಣ ಪುಟ್ಟ ಚಿಕಿತ್ಸೆಗೆ ಇಲ್ಲಿ ಆಗಲ್ಲ ಎಂದು ಬೇರೆಡೆ ಕಳಿಸದೆ ಸಮರ್ಪಕವಾಗಿ ಚಿಕಿತ್ಸೆ ನೀಡಬೇಕು ಎಂದು ಡಾ.ಶಿವಪ್ರಸಾದ ಮೈತ್ರಿಗೆ ತಾಕೀತು ಮಾಡಿದರು.
  ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ವೈದ್ಯರು ಮತ್ತು ಸಿಬ್ಬಂದಿ ಮಾಹಿತಿ ಪಡೆದರು. ಬಳಿಕ ಎಕ್ಸರೇ ಕೊಠಡಿಗೆ ಬೀಗ ಹಾಕಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು ಬಡವರಿಗೆ ಸೌಕರ್ಯ ದೊರೆಯಬೇಕು. ಹೊರಗಡೆ ಎಕ್ಸರೇ ಮಾಡಿಸಲು ಸಾವಿರಾರು ರೂ. ಖಚರ್ಾಗುತ್ತದೆ. ಇನ್ನು ಮುಂದೆ ಇಂತ ಬೇಜಾಬ್ದಾರಿತನ ನಾನು ಸಹಿಸುವುದಿಲ್ಲ. ಹೆರಿಗೆ ಮಾಡಿಸಲು ಬಂದವರಿಗೆ ಹಣ ಕೇಳಿ ತೊಂದರೆ ನೀಡಿರುವ ದೂರು ಬರುತ್ತಿವೆ. ಜನರಿಗೆ ತೊಂದರೆ ನೀಡಿದರೆ ಪರಸ್ಥಿತಿ ಬೇರೆ ಆಗಲಿದೆ. ಈಗ ಸೂಕ್ಷ್ಮವಾಗಿ ಹೇಳಿದ್ದೇನೆ, ಮುಂದೆ ಏನಾದರೂ ದೂರು ಬಂದರೆ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಚ್ಚರಿಕೆ ನೀಡಿದರು.
  ಬಳಿಕ ಔಷ ದಾಸ್ತಾನು ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಂಬ್ಯುಲೆನ್ಸ್ ಚಾಲಕ ಇಲ್ಲದಿರುವುದನ್ನು ಪ್ರಶ್ನಿಸಿ, ಜಿಲ್ಲಾ ಆರೋಗ್ಯಾಕಾರಿ ಜತೆ ದೂರವಾಣಿಯಲ್ಲಿ ಮಾತನಾಡಿ, ಗೈರಾಗಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

  ಯು ಆರ್ ಆಲ್ಸೋ ಯುಥ್: ನಾನು ಯುವಕನಾಗಿದ್ದಾಗ ಜನರು ಸೇವೆ ಮಾಡಲು ಆಶಿವರ್ಾದ ಮಾಡಿದ್ದಾರೆ ಡಾಕ್ಟರೇ ನೀವು ಯುವಕರಾಗಿದ್ದೀರಿ, ನಿಮ್ಮ ತಂದೆಯವರು ಸಾಕಷ್ಟು ಸೇವೆ ನೀಡಿದ್ದಾರೆ,ನೀವು ಉತ್ತಮವಾಗಿ ಬೇಡ ಜನರಿಗೆ ಸೇವೆ ಮಾಡುವಂತೆ ಶಾಸಕ ಕಂದಕೂರ ವೈದ್ಯಾಕಾರಿಗೆ ಸಲಹೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts