ಬೆಳ್ಳಂಬೆಳಗ್ಗೆಯೇ ಧೀರೇನ್ ಡಬ್ಬಿಂಗ್

ಬೆಂಗಳೂರು: ನಟ ಧೀರೇನ್ ರಾಜ್​ಕುಮಾರ್ ಮೊದಲ ಬಾರಿಗೆ ಹೀರೋ ಆಗಿ ನಟಿಸುತ್ತಿರುವ ‘ದಾರಿ ತಪ್ಪಿದ ಮಗ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬಿಜಿ ಆಗಿದೆ. ಸೆಟ್​ನಲ್ಲಿ ಕ್ಯಾಮರಾ ಎದುರಿಸಿದ್ದ ಧೀರೇನ್ ಈಗ ಮೈಕ್ ಮುಂದೆ ನಿಂತು ಡಬ್ಬಿಂಗ್ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಅದರಲ್ಲೂ ಅವರಿಗೆ ನಿರ್ದೇಶಕ ಅನಿಲ್​ಕುಮಾರ್ ಒಂದು ನಿಯಮವನ್ನು ಹಾಕಿದ್ದಾರಂತೆ! ಏನದು? ಮುಂಜಾನೆ ಎದ್ದಕೂಡಲೇ ಬಂದು ಡಬ್ಬಿಂಗ್ ಮಾಡಬೇಕು.

ಹೌದು, ‘ದಾರಿ ತಪ್ಪಿದ ಮಗ’ ಚಿತ್ರದಲ್ಲಿ ಧೀರೇನ್ ಒಂದು ಖಡಕ್ ಪಾತ್ರ ನಿಭಾಯಿಸಿದ್ದಾರೆ. ಆ ಪಾತ್ರಕ್ಕೆ ತಕ್ಕಂತೆ ಅವರ ಧ್ವನಿಯೂ ಇರಬೇಕಾಗುತ್ತದೆ. ಬೆಳ್ಳಂಬೆಳಗ್ಗೆಯೇ ಡಬ್ ಮಾಡಿದರೆ, ಬೇಸ್ ವಾಯ್್ಸ ಇರುತ್ತದೆ. ಅದು ಪಾತ್ರಕ್ಕೆ ಸೂಕ್ತವಾಗುತ್ತದೆ ಎಂಬುದು ನಿರ್ದೇಶಕ ಅನಿಲ್​ಕುಮಾರ್ ಯೋಜನೆ. ಸದ್ಯ ಒಂದು ಆಕ್ಷನ್ ಸನ್ನಿವೇಶದ ಚಿತ್ರೀಕರಣದಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಮಂಗಳವಾರ ಅದಕ್ಕೆ ಚಾಲನೆ ನೀಡಲಾಗಿದ್ದು, ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಅದರ ಜತೆಗೆ ಒಂದು ಹಾಡಿನ ಶೂಟಿಂಗ್ ಬಾಕಿ ಇದ್ದು, ಜೂನ್​ನಲ್ಲಿ ನಡೆಯಲಿದೆ. ಅದು ಮುಗಿಯುತ್ತಿದ್ದಂತೆಯೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಲಿದೆ. ಧೀರೇನ್​ಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಚರಣ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ ಮುಂತಾದವರು ಇದ್ದಾರೆ.

Leave a Reply

Your email address will not be published. Required fields are marked *