18 C
Bangalore
Thursday, December 5, 2019

ಬೆಳೆಯದ ಆಪೂಸ್, ರೈತನಿಗೆ ಲಾಸು!

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಹಾನಗಲ್ಲ: ಹಾನಗಲ್ಲ ತಾಲೂಕಿನಲ್ಲಿ ಬೆಳೆಯುವ ಆಪೂಸ್ ತಳಿಯ ಮಾವಿನಹಣ್ಣು ರಾಜ್ಯಾದ್ಯಂತ ಹೆಸರು ಮಾಡಿದೆ. ಆದರೆ, ಪ್ರಸ್ತುತ ವರ್ಷ ಮಾವು ಬೆಳೆ ನೆಲಕಚ್ಚಿದ ಪರಿಣಾಮ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಹವಾಮಾನ ವೈಪರೀತ್ಯದಿಂದಾಗಿ, ಕಳೆದ ಎರಡು ತಿಂಗಳಿಂದ ಹೂ ಬಿಟ್ಟು ಒಣಗಿದ ಪರಿಣಾಮ ಗಿಡಗಳು ಕಾಯಿ-ಹಣ್ಣುಗಳಿಲ್ಲದೆ ಬರಡಾಗಿ ನಿಂತಿವೆ. ಇದುವರೆಗೆ ಗಿಡಗಳಿಗೆ ಹಾಕಿದ ಗೊಬ್ಬರ, ಕ್ರಿಮಿನಾಶಕದ ಖರ್ಚುಗಳೂ ವಾಪಸು ಬರುವ ಸ್ಥಿತಿ ಇಲ್ಲದಾಗಿದೆ. ಹೀಗಾಗಿ, ಈ ಬಾರಿ ರೈತರು ಸಾಲದ ಸುಳಿಗೆ ಸಿಲುಕುವುದು ಖಚಿತವಾಗಿದೆ. ತಾಲೂಕಿನಲ್ಲಿ ಸುಮಾರು 3950 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಬೊಮ್ಮನಹಳ್ಳಿ ಹೋಬಳಿಯ ಯಾವ ತೋಟದಲ್ಲೂ ಮಾವಿನ ಗಿಡಗಳಲ್ಲಿ ಹೂವಿಲ್ಲ, ಕಾಯಿಯಿಲ್ಲ. ಕಳೆದ ವರ್ಷ ನಿರೀಕ್ಷೆಗೂ ಹೆಚ್ಚು ಫಸಲು ಬಂದಿತ್ತು. ಆದರೆ, ಬೇರೆಡೆಯ ಭಾಗದಲ್ಲಿನ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸಿದ ನಂತರ ಈ ತಾಲೂಕಿನ ಹಣ್ಣುಗಳು ಮಾರುಕಟ್ಟೆಗೆ ಬಂದಿದ್ದವು. ಇದರಿಂದಾಗಿ ಹಣ್ಣಿಗೆ ಅಪೇಕ್ಷಿತ ದರ ಸಿಗಲಿಲ್ಲ. ಹೀಗಾಗಿ, ಆಗಲೂ ರೈತರು ಹಾನಿ ಅನುಭವಿಸುವಂತಾಗಿತ್ತು.

ತೇವಾಂಶ ಕೊರತೆ: ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆಯಿಂದಾಗಿ ಕೆರೆ-ಕಟ್ಟೆಗಳು ತುಂಬಿಕೊಳ್ಳಲಿಲ್ಲ. ತೋಟಗಳಲ್ಲಿದ್ದ ಕೃಷಿ ಹೊಂಡಗಳಿಗೂ ನೀರು ತುಂಬಲಿಲ್ಲ. ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿತಗೊಂಡಿದೆ. ಇದರಿಂದಾಗಿ ಪ್ರಸಕ್ತ ವರ್ಷ ಭೂಮಿಯಲ್ಲಿ ತೇವಾಂಶದ ಕೊರತೆಯುಂಟಾಗಿ ಮಾವಿನ ಮರಗಳು ಹೂ ಹಿಡಿದಿದ್ದರೂ ಕಾಯಿ ಕಚ್ಚಲಿಲ್ಲ. ಸಮರ್ಪಕ ನೀರಾವರಿ ವ್ಯವಸ್ಥೆ ಇಲ್ಲದ್ದರಿಂದ ಬಮ್ಮನಹಳ್ಳಿ ಭಾಗದ ಮಾವು ಬೆಳೆಗಾರರು ಹೆಚ್ಚು ಸಂಕಷ್ಟ ಎದುರಿಸುವಂತಾಗಿದೆ. 10-15 ವರ್ಷಗಳಿಂದ ಇರುವಷ್ಟು ನೀರಿನ ವ್ಯವಸ್ಥೆಯಲ್ಲಿ ಗಿಡಗಳನ್ನು ಬೆಳೆಸಿಕೊಂಡು ಬಂದಿರುವ ರೈತರಿಗೆ ಅವುಗಳನ್ನು ಕಿತ್ತೆಸೆದು ಪರ್ಯಾಯ ಬೆಳೆಗಳನ್ನು ಬೆಳೆಯುವುದೂ ಸಾಧ್ಯವಾಗುತ್ತಿಲ್ಲ. ಈ ವರ್ಷ ಮಾವಿನ ಬೆಳೆ ಕೈ ಕೊಟ್ಟಿದ್ದರಿಂದ ಆ ಪ್ರದೇಶದ ಆದಾಯದಿಂದ ರೈತ ಸಮುದಾಯ ವಂಚಿತವಾಗಿದೆ.

ಹವಾಮಾನ ವೈಪರೀತ್ಯ: ಇತ್ತೀಚಿನ ವರ್ಷಗಳಲ್ಲಿ ಮಾವು ಬೆಳೆಗೆ ಚಳಿಗಾಲದ ಅವಧಿಯಲ್ಲಿ ಹೂ ಬಿಡುವ ಸಮಯದಲ್ಲೇ ಅಂಟು ಅಂಟಾದ ಮಂಜು ಮುಸುಕುತ್ತಿದೆ. ಇದರ ಪರಿಣಾಮವಾಗಿ ಹೂವುಗಳು ಕಮರಿ ಹೋಗುತ್ತಿವೆ. ಮಾವಿನ ಗಿಡಗಳಿಗೆ ಯಾವುದೇ ಔಷಧಗಳನ್ನು ಸಿಂಪಡಿಸಿದರೂ ಹೂವು ಉದುರುವುದು ನಿಯಂತ್ರಣಗೊಳ್ಳುತ್ತಿಲ್ಲ. ಇದರಿಂದ ರೈತ ಕಂಗಾಲಾಗಿದ್ದು, ತೋಟಗಾರಿಕೆ ಇಲಾಖೆ ರೈತರ ಸಹಾಯಕ್ಕೆ ಬರಬೇಕಾಗಿದೆ. ಗ್ರಾಮ ಪಂಚಾಯತಗಳಲ್ಲಿ ಹವಾಮಾನ ವೈಪರೀತ್ಯ ಮಾಪನ ಕೇಂದ್ರ ಅಳವಡಿಸಿ ವಿಮಾ ಪರಿಹಾರ ನಿರ್ಧರಿಸುವಂತಾಗಬೇಕು.

ತೋಟಕ್ಕೆ ಬಾರದ ಗುತ್ತಿಗೆದಾರರು: ತಾಲೂಕಿನ ರೈತರು ಮಾವಿನ ಫಸಲನ್ನು ಮಧ್ಯವರ್ತಿಗಳ ಮೂಲಕವೇ ಮಾರಾಟ ಮಾಡುವ ಪದ್ಧತಿ ಹಲವು ದಶಕಗಳಿಂದ ನಡೆದುಬಂದಿದೆ. ಪ್ರತಿವರ್ಷ ಗುತ್ತಿಗೆದಾರರು ಮುಂಗಡ ಹಣ ನೀಡಿ ಒಂದೆರಡು ವರ್ಷಗಳ ಕಾಲ ತೋಟವನ್ನು ಗುತ್ತಿಗೆಗೆ ಪಡೆಯುತ್ತಿದ್ದರು. ಕಳೆದ ವರ್ಷ ಪ್ರತಿ ಎಕರೆಗೆ 60-80 ಸಾವಿರದವರೆಗೆ ಲಾಭ ಪಡೆದಿರುವುದಾಗಿ ರೈತರು ಹೇಳುತ್ತಾರೆ. ಆದರೆ, ಪ್ರಸಕ್ತ ವರ್ಷ ಯಾವುದೇ ತೋಟಗಳತ್ತ ಗುತ್ತಿಗೆದಾರರು ಹಾಯುತ್ತಿಲ್ಲ. ಫಸಲು ಕಂಡುಬಾರದ್ದರಿಂದ ಹಣ ತೊಡಗಿಸಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಮಾವಿನಮಂಡಿ ಮೂಲಕ ಹಾನಗಲ್ಲ ಮಾವು ಆಂಧ್ರಪ್ರದೇಶ, ದೆಹಲಿ, ಮುಂಬಯಿ, ಬೆಂಗಳೂರು, ಹುಬ್ಬಳ್ಳಿ ಸೇರಿ ಹಲವು ರಾಜ್ಯದ ಪ್ರಮುಖ ಮಾರುಕಟ್ಟೆಗೆ ರವಾನೆಯಾಗುತ್ತದೆ.

ಮಾವು ಕಿತ್ತೆಸೆದ ರೈತ: ಮಾವಿನ ಬೆಳೆ ಫಸಲು ಹೆಚ್ಚು ಬಂದಾಗ ದರ ಕುಸಿತವಾಗಿ ಲಾಭ ಆಗುವುದಿಲ್ಲ. ಇನ್ನೊಂದೆಡೆ, ಈಚಿನ ದಿನಗಳಲ್ಲಿ ಫಸಲು ಬರುವ ಭರವಸೆಯೂ ಕುಗ್ಗುತ್ತಿದೆ. ಹೀಗಾಗಿ, ಮಾವಿನಗಿಡಗಳನ್ನು ತೆಗೆದುಹಾಕಿ ಅಡಕೆ, ಬಾಳೆ ತೋಟಗಳತ್ತ ರೈತ ಮುಖ ಮಾಡುತ್ತಿದ್ದಾನೆ. ಚೀರನಹಳ್ಳಿ ಗ್ರಾಮದ ರೈತ ಕಲ್ಲನಗೌಡ ಪಾಟೀಲ ಅವರು 3 ಎಕರೆ ಪ್ರದೇಶದ ಮಾವು ಕಿತ್ತುಹಾಕಿ ಶುಂಠಿ ಬೆಳೆಯತ್ತ ಮುಖ ಮಾಡಿದ್ದಾರೆ. ಇದರ ಮಧ್ಯೆ ಅಡಕೆ ಸಸಿ ನಾಟಿ ಮಾಡುತ್ತಿದ್ದಾರೆ.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...