ಬೆಳಗಾವಿ, ಮಂಗಳೂರು, ಚಾಂಪಿಯನ್

ಗದಗ: ಕಳೆದ ಎರಡು ದಿನಗಳಿಂದ ಜರುಗಿದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳ ಕುಸ್ತಿ ಪಂದ್ಯಾವಳಿಯಲ್ಲಿ ಬಾಲಕರ ಫ್ರೀ ಸ್ಟೈಲ್​ನಲ್ಲಿ 28 ಅಂಕ ಗಳಿಸಿದ ಬೆಳಗಾವಿ, ಗ್ರೀಕೋ ರೋಮನ್ ಸ್ಟೈಲ್​ನಲ್ಲಿ 23 ಅಂಕ ಗಳಿಸಿದ ಚಿಕ್ಕೋಡಿ ಹಾಗೂ ಬಾಲಕಿಯರ ಫ್ರೀ ಸ್ಟೈಲ್​ನಲ್ಲಿ 31 ಅಂಕ ಗಳಿಸಿದ ಮಂಗಳೂರ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡವು.

ಬಾಲಕರ ಫ್ರೀ ಸ್ಟೈಲ್​ನಲ್ಲಿ 18 ಅಂಕ ಗಳಿಸಿದ ದಾವಣಗೆರೆ, ಗ್ರೀಕೋ ರೋಮನ್ ಸ್ಟೈಲ್​ನಲ್ಲಿ 18 ಅಂಕ ಗಳಿಸಿದ ಬೆಳಗಾವಿ ಹಾಗೂ ಬಾಲಕಿಯರ ಫ್ರೀ ಸ್ಟೈಲ್​ನಲ್ಲಿ 12 ಅಂಕ ಗಳಿಸಿದ ಗದಗ ರನ್ನರ್​ಅಪ್​ಗೆ ತೃಪ್ತಿಪಡಬೇಕಾಯಿತು. ಇನ್ನು ಬಾಲಕರ ಹಾಗೂ ಬಾಲಕಿಯರ ಫ್ರೀ ಸ್ಟೈಲ್ ಹಾಗೂ ಬಾಲಕರ ಗ್ರೀಕೋ ರೋಮನ್ ಸ್ಟೈಲ್​ನಲ್ಲಿ ಆಯಾ ಕೆಜಿ 10 ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ವಿಜೇತರಾದ 30 ವಿದ್ಯಾರ್ಥಿಗಳು ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಬೆಳ್ಳಿ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ಗದಗ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಪಪೂ ಶಿಕ್ಷಣ ಇಲಾಖೆ ಹಾಗೂ ಸನ್ಮಾರ್ಗ ಪಪೂ ಕಾಲೇಜ್ ಸಹಯೋಗದಲ್ಲಿ ಶುಕ್ರವಾರ ಜರುಗಿದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳ ಕುಸ್ತಿ ಪಂದ್ಯಾವಳಿಯ ಸಮಾರೋಪದಲ್ಲಿ ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ, ಡಿಡಿಪಿಯು ಎಸ್.ಎಸ್. ಹಿರೇಮಠ ಅವರು ವಿಜೇತರಿಗೆ ಟ್ರೋಫಿ ಹಾಗೂ ಪದಕ ವಿತರಿಸಿದರು. ನಿರ್ಣಾಯಕರು, ತೀರ್ಪಗಾರರು ಹಾಗೂ ಆಯೋಜಕರನ್ನು ಸನ್ಮಾನಿಸಲಾಯಿತು.

ಬಾಲಕಿಯರ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಗಳು 50, 53, 55,57, 59, 62, 65, 68, 72 ಹಾಗೂ 76 ಕೆಜಿ ವಿಭಾಗ. ಬಾಲಕರ ಫ್ರೀ ಸ್ಟೈಲ್ ಕುಸ್ತಿಯಲ್ಲಿ 57, 61, 65, 70, 74, 79, 86, 92, 97 ಹಾಗೂ 125 ಕೆಜಿ ವಿಭಾಗ ಹಾಗೂ ಬಾಲಕರ ಗ್ರೀಕೋ ರೋಮನ್ ಸ್ಟೈಲ್ ಕುಸ್ತಿಯಲ್ಲಿ 55, 60, 63, 67, 72, 77, 82, 92, 97 ಹಾಗೂ 130 ಕೆಜಿ ವಿಭಾಗದಲ್ಲಿ ಕುಸ್ತಿ ಪಂದ್ಯಗಳು ನಡೆದವು.

ಬಾಲಕಿಯರ ಫ್ರೀ ಸ್ಟೈಲ್ ಕುಸ್ತಿ: 50 ಕೆಜಿ ವಿಭಾಗದ ಪಂದ್ಯದಲ್ಲಿ ಬೆಳಗಾವಿಯ ಗೋಪವ್ವ ಖೋಡ್ಕಿ ಪ್ರಥಮ, ಮಂಗಳೂರಿನ ಚಂದ್ರಿಕಾ ಕಾಂಬ್ಳೆ ದ್ವಿತೀಯ, 53 ಕೆಜಿ ವಿಭಾಗದಲ್ಲಿ ಬೆಳಗಾವಿಯ ಐಶ್ವರ್ಯ ಕರಿಗಾರ, ಮಂಗಳೂರಿನ ತನುಜಾ, 55 ಕೆಜಿ ವಿಭಾಗದಲ್ಲಿ ಮಂಗಳೂರಿನ ಭಾರತಿ, ಗದಗನ ವಿಜಯಲಕ್ಷ್ಮಿ ಹುಡೇದ, 57 ಕೆಜಿ ವಿಭಾಗದಲ್ಲಿ ಗದಗನ ಸ್ಪೂರ್ತಿ ಅರಹುಣಸಿ, ಚಿಕ್ಕೋಡಿಯ ಪಲ್ಲವಿ ಗಿರಿಗಾವೆ, 59 ಕೆಜಿಯಲ್ಲಿ ಕಾರವಾರದ ಲೀನಾ ಸಿದ್ದಿ, ಶಿವಮೊಗ್ಗದ ಎಸ್. ಸುಷ್ಮಿತಾ, 62 ಕೆಜಿಯಲ್ಲಿ ತುಮಕೂರಿನ ಆರ್. ರಕ್ಷಿತಾ, ಮಂಗಳೂರಿನ ವಿನುಶ್ರೀ, 65 ಕೆಜಿಯಲ್ಲಿ ಮಂಗಳೂರಿನ ಅನ್ಸಾ ಸರೀನ್, ಮೈಸೂರಿನ ಆರ್. ಚಂದನಾ, 68 ಕೆಜಿಯಲ್ಲಿ ಮಂಗಳೂರಿನ ಅರ್ಚನಾ, ಮೈಸೂರಿನ ಕಾವ್ಯಾ ನಾಯಕ, 72 ಕೆಜಿಯಲ್ಲಿ ಮಂಗಳೂರಿನ ಅಕ್ಷತಾ ಬುರ್ಲಿ, ಗದಗನ ದಾವಲಬಿ ಶಾನವಾಡ, 76 ಕೆಜಿಯಲ್ಲಿ ದಾವಣಗೆರೆಯ ಖುಷಿ ತೇರದಾಳ, ಬೆಂಗಳೂರಿನ ಎಚ್. ಶಾಲಿನಿ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರು.

ಬಾಲಕರ ಫ್ರೀ ಸ್ಟೈಲ್ ಕುಸ್ತಿ: 57 ಕೆಜಿ ವಿಭಾಗದ ಪಂದ್ಯದಲ್ಲಿ ಬೆಳಗಾವಿಯ ಕುಮಾರ ನಾಗುರ, ದಾವಣಗೆರೆಯ ಪ್ರತೀಕ, 61 ಕೆಜಿಯಲ್ಲಿ ಬೆಳಗಾವಿಯ ಸಂತೋಷ ಮೇತರಿ, ಶಿವಮೊಗ್ಗದ ಯಶವಂತ, 65 ಕೆಜಿಯಲ್ಲಿ ಬೆಳಗಾವಿಯ ಸಚಿನ ಶಿರಗುಪ್ಪಿ, ಚಿಕ್ಕೋಡಿಯ ಬಾಳಪ್ಪ ಹೊನಕುಪ್ಪಿ, 70 ಕೆಜಿಯಲ್ಲಿ ಧಾರವಾಡದ ಎನ್. ಸದಾಶಿವ, ಚಿಕ್ಕೋಡಿಯ ಅಲ್ಲಾಭಕ್ಷಿ, 74 ಕೆಜಿಯಲ್ಲಿ ದಾವಣಗೇರಿಯ ಎಸ್. ದೀಪಕ್, ಬಾಗಲಕೋಟೆಯ ಜೆ. ಸೋಮರಾಜ, 79 ಕೆಜಿಯಲ್ಲಿ ಧಾರವಾಡದ ಧರೆಪ್ಪ ಹೊಸಮನಿ, ಚಿಕ್ಕೋಡಿಯ ಸಂತೋಷ ಬಿರಾದಾರ, 86 ಕೆಜಿಯಲ್ಲಿ ದಾವಣಗೆರೆಯ ಎಚ್. ಅಭಿಷೇಕ, ಬೆಳಗಾವಿಯ ಶುಭಂ ದೇಸೂರಕರ, 92 ಕೆಜಿಯಲ್ಲಿ ಬೆಳಗಾವಿಯ ನಾಗರಾಜ ದೊಡ್ಡಮನಿ, ಮಂಗಳೂರಿನ ಮೌನೇಶ, 97 ಕೆಜಿಯಲ್ಲಿ ಧಾರವಾಡದ ಸುನೀಲ ಪದತಾರೆ, ದಾವಣಗೆರೆಯ ಅರುಣಕುಮಾರ, 125 ಕೆಜಿಯಲ್ಲಿ ಉಡುಪಿಯ ವಿ.ಎಸ್. ರಕ್ಷಿತರಾವ್, ಬೆಳಗಾವಿಯ ವರುಣ ಜಾಧವ ಅನುಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರು.

ಬಾಲಕರ ಗ್ರೀಕೋ ರೋಮನ್ ಸ್ಟೈಲ್: 55 ಕೆಜಿ ವಿಭಾಗದ ಪಂದ್ಯದಲ್ಲಿ ಬೆಳಗಾವಿಯ ಅಜಿತ್ ಚೌಗಲೆ, ದಾವಣಗೇರೆಯ ಉಮೇಶ, 60 ಕೆಜಿಯಲ್ಲಿ ಚಿಕ್ಕೋಡಿಯ ಕಾರ್ತಿಕ್ ಹಿಟ್ಟಣಗಿ, ದಾವಣಗೆರೆಯ ನಾರಾಯಣ ಕೊಲಂಬಿ, 63 ಕೆಜಿಯಲ್ಲಿ ಬೆಳಗಾವಿಯ ಪ್ರಹ್ಲಾದ ಹುಲಿಕೊಟಾಲಿ, ಹಾವೇರಿಯ ಕಾರ್ತಿಕ್ ಬಿಸೆ, 67 ಕೆಜಿಯಲ್ಲಿ ವಿಜಯಪುರದ ವಿನಾಯಕ ಯಂಕನಾಚಿ, ದಾವಣಗೇರೆಯ ಹುಚ್ಚಪ್ಪ ಜಿಡ್ಡಿಮನಿ, 72 ಕೆಜಿಯಲ್ಲಿ ಬೆಳಗಾವಿಯ ಹುಸೇನ ಮುಲ್ಲಾ, ದಾವಣಗೆರೆಯ ಶಹಬುದ್ದೀನ್, 77 ಕೆಜಿಯಲ್ಲಿ ಚಿಕ್ಕೋಡಿಯ ಮುಬಾರಕ ಅಂಕಲಿ, ದಾವಣಗೆರೆಯ ಪ್ರವೀಣ ಹಿಪ್ಪರಗಿ, 82 ಕೆಜಿಯಲ್ಲಿ ಧಾರವಾಡದ ಮಹೇಶ ಚಲವಾದಿ, ಚಿಕ್ಕೋಡಿಯ ಸಿದ್ಧಲಿಂಗ ಪೂಜಾರ. 92 ಕೆಜಿಯಲ್ಲಿ ಚಿಕ್ಕೋಡಿಯ ಪ್ರಕಾಶ ಪಾಟೀಲ, ಧಾರವಾಡದ ಆದಿತ್ಯ ಬೆಡಕ್ಯಾಲೆ, 97 ಕೆಜಿಯಲ್ಲಿ ಬಾಗಲಕೋಟೆಯ ಅನುಪ ಚವ್ಹಾಣ, ಚಿಕ್ಕೋಡಿಯ ದಯಾನಂದ ಭೋವಿ, 130 ಕೆಜಿಯಲ್ಲಿ ಬೆಳಗಾವಿಯ ಸುನೀಲ ಸಿಂಗಾರೆಡ್ಡಿ, ಮಂಗಳೂರಿನ ಇಬ್ರಾಹಿಂ ಅಲಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರು.