ಬೆಳಗಾವಿ: ಕೂಲಿಯಂತೆ ಕಲ್ಲು ಒಡೆದ ಶಾಸಕ

ಬೆಳಗಾವಿ: ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತ ಬಂದಿರುವ ಕುಡಚಿ ಶಾಸಕ ಪಿ.ರಾಜೀವ್, ಈಗ ಕಾರ್ಮಿಕರಂತೆ ಸೇವೆ ಸಲ್ಲಿಸಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕುಡಚಿ ಮತಕ್ಷೇತ್ರ ವ್ಯಾಪ್ತಿಯ ಯಲ್ಪಾರಟ್ಟಿ ಹೊರವಲಯದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಲು ಹೋದಾಗ, ಕಾರ್ಮಿಕರಿಂದ ಸುತ್ತಿಗೆ ಪಡೆದು ತಾವೇ ಕಲ್ಲು ಒಡೆದು ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಯಲ್ಪಾರಟ್ಟಿ-ಪರಮಾನಂದವಾಡಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದರ ವೀಕ್ಷಣೆಗೆ ಪಿ.ರಾಜೀವ್ ತಮ್ಮ ಬೆಂಬಲಿಗರೊಂದಿಗೆ ತೆರಳಿದ್ದರು. ಆಗ ಕಾರ್ಮಿಕರ ಕೈಯಿಂದ ಸುತ್ತಿಗೆ ಇಸಿದುಕೊಂಡು ಕಲ್ಲು ಒಡೆದಿದ್ದಾರೆ.
ಈ ಹಿಂದೆ ಇಡೀ ಕುಡಚಿ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುವ ನಿಟ್ಟಿನಲ್ಲಿ ಹಲವು ಗ್ರಾಮಗಳಿಗೆ ತೆರಳಿ ಸ್ವತಃ ಸರ್ವೇ ಮಾಡಿದ್ದರು. ಸೂರು ಇಲ್ಲದವರಿಗೆ ವಸತಿ ಯೋಜನೆಯಡಿ ಮನೆ ಕೊಡಿಸುವಲ್ಲಿ ಸಲವಾಗಿದ್ದರು. ಈಗ ಕಾರ್ಮಿಕರೊಂದಿಗೆ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಮಧ್ಯಾಹ್ನ ಬಿಸಿಯೂಟ ಯೋಜನೆ ಸ್ಥಿತಿಗತಿ ಪರಿಶೀಲನೆಗೆ ತೆರಳಿದಾಗ, ಮಕ್ಕಳೊಂದಿಗೆ ಊಟ ಮಾಡಿಯೂ ಪ್ರಶಂಸೆಗೆ ರಾಜೀವ್ ಪಾತ್ರರಾಗಿದ್ದಾರೆ.