ಬೆಳಗಾವಿ: ಕಳೆದ 14 ತಿಂಗಳಿನಿಂದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಂಜೀವ ಪಾಟೀಲ ಅವರು, ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ಸೆ.8 ರಂದು ಭೀಮಾಶಂಕರ ಗುಳೇದ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಸಂಜೀವ ಪಾಟೀಲ ಅವರು, ತಮ್ಮ ಅಧಿಕಾರ ಅವಧಿಯಲ್ಲಿ Phone in ಕಾರ್ಯಕ್ರಮಗಳ ಮೂಲಕ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಪರಿವರ್ತಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅನೇಕ ದಾಳಿಗಳನ್ನು ನಡೆಸುವುದರ ಮೂಲಕ ಅಕ್ರಮ ಗಾಂಜಾ ಜಪ್ತಿ, ಮಾದಕ ವಸ್ತುಗಳ ಸಾಗಾಟದ ಮೇಲೆ ಕ್ರಮಗಳನ್ನು ಕೈಗೊಂಡಿದ್ದಾರೆ. ಸದ್ಯ ಸಂಜೀವ ಪಾಟೀಲ ಅವರು ಬೆಂಗಳೂರಿನ ವೈಟ್‌ಫಿಲ್ಡ್‌ಗೆ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದಾರೆ.ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಭೀಮಾಶಂಕರ ಗುಳೇದ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು. ವರ್ಗಾವಣೆಗೊಂಡಿರುವ ಸಂಜೀವ ಪಾಟೀಲ ಅವರು ಅಧಿಕಾರ ಹಸ್ತಾಂತರಿಸಿದರು.