ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿಗಳ ಸದ್ದು, ಎಲ್ಲೆಡೆ ಹಬ್ಬದ ಸಡಗರ
ದೊಡ್ಡಬಳ್ಳಾಪುರ:ತಾಲೂಕಿನಲ್ಲಿ ಬೆಳಕಿನ ಹಬ್ಬ ದೀಪಾವಳಿ ಪಟಾಕಿಗಳ ಸದ್ದು ಮಾಡುತ್ತಿದೆ. ದುಭಾರಿ ಬೆಲೆ ನಡುವೆಯೂ ನಿರೀೆಗೂ ಮೀರಿ ಜನರು ಪಟಾಕಿಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ನಗರದ ಕೆಸಿಪಿ ಸರ್ಕಲ್ ಮೈದಾನಗಳಲ್ಲಿ ಪಟಾಕಿ ಮಾರಾಟ ಜೋರಾಗಿದೆ. ಮಕ್ಕಳು, ಯುವಕರು ಪಟಾಕಿ ಖರೀದಿಯಲ್ಲಿ ನಿರತರಾಗಿದ್ದಾರೆ. ಇನ್ನೂ ಮನೆಗಳ ಎದುರು ಮಹಿಳೆಯರು ರಂಗೋಲಿಗಳ ಚಿತ್ತಾರ ಬಿಡಿಸಿದ್ದರೆ, ಯುವಕರು ಪಟಾಕಿಗಳನ್ನು ಸಿಡಿಸಿ ಆಕಾಶದಲ್ಲಿ ರಾತ್ರಿ ಚಿತ್ತಾರ ಹರಡುತ್ತಿದ್ದಾರೆ.
ಪಟಾಕಿ ಖರೀದಿಸಲು ಜನರು ತಂಡೋಪತಂಡವಾಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೈದಾನದಲ್ಲಿ ಹಾಕಿದ್ದ ಒಂಬತ್ತು ಮಳಿಗೆಗಳಲ್ಲೂ ಜನರು ಸಡಗರದಿಂದ ಪಟಾಕಿ ಖರೀದಿಯಲ್ಲಿ ತೊಡಗಿದ್ದರು. ಪ್ರತಿವರ್ಷಕ್ಕಿಂತ ಈ ವರ್ಷ ವ್ಯಾಪಾರ ಜೋರಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಟಾಕಿ ಖರೀದಿಸುತ್ತಿದ್ದಾರೆ. ಈಬಾರಿ ವ್ಯಾಪರದಲ್ಲಿ ಹೆಚ್ಚಿನ ನೀರಿೆಯಿದೆ ಎಂದು ಪಟಾಕಿ ವ್ಯಾಪಾರಿ ರವಿ ಹೇಳಿದರು.
ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ.10 ಹೆಚ್ಚಾಗಿದೆ. ಆದರೂ ಜನರ ಖರೀದಿಯ ಹುಮ್ಮಸ್ಸು ಕಡಿಮೆಯಾಗಿಲ್ಲ. ಎಲ್ಲ ಬಗೆಯ ಪಟಾಕಿಗಳನ್ನು ಒಳಗೊಂಡಿರುವ ಒಂದು ಬಾಕ್ಸ್ ಪಟಾಕಿಯ ಬೆಲೆ 400 ರೂಪಾಯಿಯಿಂದ 700ರ ವರೆಗಿದೆ. ದೊಡ್ಡ ಬಾಕ್ಸ್ಗೆ ಒಂದೂವರೆಯಿಂದ ಎರಡು ಸಾವಿರ ರೂಪಾಯಿ ಬೆಲೆ ಇದೆ. ಆದರೂ ಜನರು ಕೊಳ್ಳುವುದನ್ನು ಕಡಿಮೆ ಮಾಡಿಲ್ಲ. ಹಾಕಿದ್ದ ಅಸಲಿಗೆ ಲಾಭ ಬಂದಾಗಿದೆ ಎಂದು ಮತ್ತೋರ್ವ ವ್ಯಾಪಾರಿ ಶಿವು ಹೇಳಿದರು. ಈ ಬಾರಿ ಮಾರುಕಟ್ಟೆಯಲ್ಲಿ ಹಸಿರು ಪಟಾಕಿ ದಾಸ್ತಾನು ಎಲ್ಲೆಡೆ ಕಂಡುಬಂದಿದೆ. ಪ್ರತಿ ಪಟಾಕಿ ಪ್ಯಾಕೆಟ್ ಮೇಲೂ ಹಸಿರು ಟ್ರೇಡ್ ಮಾರ್ಕ್ ಕಡ್ಡಾಯಾವಾಗಿದೆ.
ನಗರದ ಕೆಸಿಪಿ ಸರ್ಕಲ್ನ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಪಟಾಕಿ ಅಂಗಡಿ ಮಳಿಗಳಿಗೆ ಅನುಮತಿ ನೀಡಲಾಗಿದೆ. ಈ ಬಾರಿ 9 ಅಂಗಡಿಗಳಿಗೆ ಅನುಮತಿ ನೀಡಿದ್ದು ಪರಿಸರ ಸ್ನೇಹಿ ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
|ಕಾರ್ತಿಕ್ ಈಶ್ವರ್ ನಗರ ಸಭೆ ಪೌರಾಯುಕ್ತ.